ಸದಸ್ಯ:ಅನು ಅಮೀನ್ ಸಂಕಮಾರ್/ನನ್ನ ಪ್ರಯೋಗಪುಟ

ಏಡ್ಸ್ ಎಂಬ ಮಾರಿ

ಬದಲಾಯಿಸಿ

ಏಡ್ಸ್ ಎಂದರೆ ಅರ್ಜಿತ ರೋಗ ನಿರೋಧಕ ಶಕ್ತಿಯ ಕೊರತೆಯ 'ಲಕ್ಷಣ ಕೂಟ'. ಗುಣಪಡಿಸಲಾಗದ ಈ ಕಾಯಿಲೆಗೆ ತುತ್ತಾಗುವವರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದಾರೆ. ಈ ಭಯಾನಕ ರೋಗವು ತನ್ನ ಕರಾಳ ಹಸ್ತವನ್ನು ಎಲ್ಲೆಲ್ಲೂ ಚಾಚುತ್ತಾ ಮುಖ್ಯವಾಗಿ ಯುವಜನತೆಯನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದೆ.ಪ್ರತಿ ನಿಮಿಷದಲ್ಲಿ ಈ ವ್ಯಾಧಿಗೆ ತುತ್ತಾಗುವವರ ಸಂಖ್ಯೆ ಏರುತ್ತಿದೆಯೆಂದರೆ ಇದೆಂತಹ ಭಯಂಕರ ರೋಗವೆಂಬುದರ ಅರಿವಾಗುತ್ತದೆ.ಪ್ರಪಂಚದಾದ್ಯಂತ ಗಮನಿಸಿದಾಗ ನಮ್ಮ ಭಾರತದೇಶ ಈ ವ್ಯಾಧಿ ಪೀಡಿತ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ ಎಂಬ ಸತ್ಯ ಬೆಳಕಿಗೆ ಬಂದಿದೆ.ಇದು ನಿಜಕ್ಕೂ ಆಘಾತಕಾರಿಯಾದ ಸಂಗತಿ. ದೇಶದ ಮುಖ್ಯ ಸಂಪನ್ಮೂಲವಾಗಿರುವ ಯುವಜನತೆಯು ಅತ್ಯಧಿಕ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ವಿಷಾದನೀಯ.

ಏಡ್ಸ್ ಒಂದು ಸಾಮಾಜಿಕ ಸಮಸ್ಯೆ. ಹೀಗಾಗಿ ಇಡೀ ದೇಶವೇ ಈ ಸಮಸ್ಯೆಯ ನಿವಾರಣೆಗೆ ಪಣತೊಟ್ಟು ನಿಲ್ಲಬೇಕಾಗಿದೆ. ಜನಸಂಪರ್ಕದ ವ್ಯಾಪ್ತಿ ದೊಡ್ಡದಾದಷ್ಟೂ ಜೀವನ ವಿಧಾನದ ಪರಸ್ಪರ ವಿನಿಮಯವೂ ಸಹಜವಾಗುತ್ತದೆ. ಈ ಸಂದರ್ಭದಲ್ಲಿ ವಿವೇಚನೆ ಇಲ್ಲದ ಅನುಸರಣೆ, ಅವಿವೇಕದ ಆಚರಣೆಗಳು, ಅನೇಕ ದುರಂತಗಳಿಗೆ ಕಾರಣವಾಗುತ್ತದೆ. ಅವುಗಳಲ್ಲಿ ಮುಖ್ಯವಾದ 'ಏಡ್ಸ್' ಬಗೆಗೆ ವಿವರವಾಗಿ ತಿಳಿದುಕೊಳ್ಳಬೇಕಾದುದು ಅತ್ಯವಶ್ಯವಾಗಿದೆ. ಏಡ್ಸ್ ರೋಗ ಮನುಷ್ಯನ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ನಾಶಮಾಡುತ್ತದೆ. ಅದೂ ನಿಗದಿತ ಅವಧಿಯಲ್ಲಿ ಇದು ನಡೆಯುತ್ತದೆ. ಈ ರೋಗಕ್ಕೆ ಕಾರಣವಾಗುವ ವೈರಸ್ ಗಳನ್ನು ಹ್ಯೂಮನ್ ಇಮ್ಯುನ್ ಡಿಫಿಶಿಯನ್ಸಿ ವೈರಸ್ ಎನುತ್ತಾರೆ. ೧೯೮೧ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮೊದಲೇಡ್ಸ್ ರೋಗಿ ಪತ್ತೆಯಾಯಿತು. ಭಾರತದಲ್ಲಿ ಈ ರೋಗ ೧೯೮೬ರಲ್ಲಿ ತಮಿಳ್ನಾಡಿನಲ್ಲಿ ಬೆಳಕಿಗೆ ಬಂದಿತು.ನಮ್ಮ ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆಯಲ್ಲಿ ಟಿ-ಲಿಂಫೊಸೈಟ್ಸ್ ಮತ್ತು ಬಿ-ಲಿಂಫೊಸೈಟ್ಸ್ ಎಂಬ ಅಂಶಗಳಿರುತ್ತದೆ. ಇವು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ.ಆದರೆ ಹೆಚ್.ಐ.ವಿ.ಗಳು ನಮ್ಮ ದೇಹವನ್ನು ಪ್ರವೇಶಿಸಿದಾಗ ಈ ಲಿಂಫೊಸೈಟ್ಸ್ ಗಳನ್ನು ಒಂದು ಗೊತ್ತಾದ ಅವಧಿಯಲ್ಲಿ ನಾಶಪಡಿಸುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ನಷ್ಟವಾಗುತ್ತದೆ. ಸಹಜವಾಗಿ ಆಗ ಶರೀರ ಯಾವುದೇ ಕಾಯಿಲೆಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗುತ್ತದೆ.

ಏಡ್ಸ್ ರೋಗ ಲೈಂಗಿಕ ಸಂಪರ್ಕದಿಂದ ಬರುತ್ತದೆ. ಮುಖ್ಯವಾಗಿ ಸಲಿಂಗಕಾಮಿಗಳಲ್ಲಿ ಇದು ಹೆಚ್ಚು. ಹೆಚ್.ಐ.ವಿ. ಪೀಡಿತ ವ್ಯಕ್ತಿಯ ರಕ್ತ ಮತ್ತು ವೀರ್ಯದಲ್ಲಿ ಈ ವೈರಸ್ ಗಳಿರುತ್ತವೆ.ಹಾಗಾಗಿ ಇಂತಹ ವ್ಯಕ್ತಿಯೊಂದಿಗೆ ಬೇರೆ ವ್ಯಕ್ತಿಯ ರಕ್ತವು ಸೋಂಕಿದಾಗ ಈ ರೋಗ ವರ್ಗಾವಣೆಯಾಗುತ್ತದೆ. ಏಡ್ಸ್ ರೋಗ ಹರಡುವ ಮತ್ತೊಂದು ಸಾಧ್ಯತೆ ಚಿಕಿತ್ಸಾಲಯದಲ್ಲಿ.ಏಡ್ಸ್ ಒಮ್ಮೆ ಬಂದಿತೆಂದರೆ ಅದಕ್ಕೆ ಚಿಕಿತ್ಸೆಯಿಲ್ಲ,ಅಂದರೆ ಅದರಿಂದ ಬಿಡುಗಡೆಯಿಲ್ಲ. ಆದರೆ ಕ್ರಮಬದ್ಧ ಜೀವನದಿಂದ ಅಂದರೆ ಲೈಂಗಿಕ ಸಂಯಮದಿಂದ ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದರಿಂರ ರೋಗ ಉಲ್ಬಣಗೊಳ್ಳುವುದನ್ನು ಮುಂದೂಡಬಹುದು. ರೋಗಿಯ ಜೊತೆಯಲ್ಲಿರುವುದರಿಂದ ರೋಗ ಖಂಡಿತ ಬರುವುದಿಲ್ಲ.ಅವರನ್ನು ಪ್ರೀತಿಯಿಂದ ಗಮನಿಸುವ ಕ್ರಿಯೆ ಬಹು ಮುಖ್ಯ. ಇಂತಹವರ ಸಂಪರ್ಕದಿಂದ ರೋಗ ಹರಡುವುದಿಲ್ಲ.