ಅನು ಅಮೀನ್ ಸಂಕಮಾರ್
ಸ್ವ ಪರಿಚಯ
ಬದಲಾಯಿಸಿನಾನು ೧೯೯೮ ಜನವರಿ ೨೭ರಂದು ಪಾವಂಜೆಯ ಸಿರಿ ಮನೆಯಲ್ಲಿ ಜನಿಸಿದೆ. ನನ್ನ ಜೊತೆಯಲ್ಲಿ ನನ್ನ ಅವಳಿ ಭವ ಹುಟ್ಟಿದಳು. ನನ್ನ ತಂದೆ ಡಾ.ಗಣೇಶ್ ಅಮೀನ್,ಹಾಗು ತಾಯಿ ಜಯಂತಿ. ನನ್ನ ತಂದೆ ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ತಾಯಿ ಸುರತ್ಕಲ್ ನ ಗೋವಿಂದಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಉಪನ್ಯಾಸಕಿ. ತಂದೆತಾಯಿ ಇಬ್ಬರೂ ಸಾಹಿತ್ಯದ ಕ್ಷೇತ್ರದಲ್ಲಿ ತೊಡಗಿದ್ದರಿಂದ ನನಗೂ ಆ ಕ್ಷೇತ್ರದಲ್ಲಿ ಬಹಳ ಪ್ರೋತ್ಸಾಹ ನೀಡಿದರು. ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಕ್ಕದ ಚರ್ಚ್ ಶಾಲೆಯಲ್ಲಿ ಮುಗಿಸಿ ಪ್ರೌಢಶಿಕ್ಷಣಕ್ಕಾಗಿ ಸುರತ್ಕಲ್ ನ ವಿದ್ಯಾದಾಯಿನಿಗೆ ಸೇರಿದೆ.ಚಿಕ್ಕವಯಸ್ಸಿನಲ್ಲಿಯೇ ಶಿಕ್ಷಣದ ಜೊತೆಗೆ ಭರತನಾಟ್ಯ ತರಗತಿಗೆ ಹೋಗುತ್ತಿದ್ದೆ.ಹಾಗು ಜೂನಿಯರ್, ಸೀನಿಯರ್ ಭರತನಾಟ್ಯ ಪರೀಕ್ಷೆ ಬರೆದು ಉತ್ತೀರ್ಣಗೊಂಡೆ. ಮಕ್ಕಳ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ವಿಚಾರಗೋಷ್ಠಿ,ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದರಿಂದ ಸಾಹಿತ್ಯದ ಬಗ್ಗೆ ಹೆಚ್ಚು ಒಲವು ಮೂಡಿತ್ತು. ಹಾಗಾಗಿ ಪ್ರಾಥಮಿಕ ಹಂತದಲ್ಲಿಯೇ 'ಅನುಭವ' ಎಂಬ ಕವನ ಸಂಕಲನವನ್ನು ಬರೆದು ಪ್ರಕಟಸಿದ್ದೆವು. ನನ್ನ ಕಾಲೇಜು ಜೀವನ ಆರಂಭವಾದುದು ಸುರತ್ಕಲ್ ನ ಗೋವಿಂದಾಸ್ ಪದವಿ ಕಾಲೇಜಿನಲ್ಲಿ. ಓದಿನ ಜೊತೆಗೆ ಇತರ ಚಟುಚಟಿಕೆಯಲ್ಲೂ ನನನ್ನು ತೊಡಗಿಸಿಕೊಂಡಿದ್ದೆ. ದ್ವಿತೀಯ ಪಿಯುಸಿಯಲ್ಲಿ ನನಗೆ ಭರತನಾಟ್ಯ ವಿದ್ವತ್ ಪರೀಕ್ಷೆ ಕಟ್ಟಬೇಕಾಗಿತ್ತು. ಎರಡೂ ಪರೀಕ್ಷೆ ನಿಭಾಯಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ತಂದೆತಾಯಿಯ ಆಶೀರ್ವಾದ, ಪ್ರೋತ್ಸಾಹದಿಂದ ಭರತನಾಟ್ಯದ ಪರೀಕ್ಷೆಯಲ್ಲಿ ನಾನು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದೆ.ಹಾಗು ದ್ವಿತೀಯ ಪಿಯುಸಿಯಲ್ಲಿ ಶೇಕಡ ೯೭ ಫಲಿತಾಂಶ ದೊರಕಿತು. ನಮ್ಮಿಬ್ಬರಿಗೂ ಕಲೆ, ಸಾಹಿತ್ಯದಲ್ಲಿ ಆಸಕ್ತಿ ಇದ್ದ ಕಾರಣ ತಂದೆತಾಯಿ ನಮ್ಮನ್ನು ವೃತ್ತಿ ಶಿಕ್ಷಣಕ್ಕೆ ಒತ್ತಾಯ ಮಾಡದೆ ಪದವಿ ಕಾಲೇಜಿಗೆ ಸೇರಿಸಿದರು. ಈಗ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆ ಬರೆದ್ದಿದ್ದೇನೆ. ಮುಂದೆ ಉತ್ತಮ ಅಂಕ ಗಳಿಸಿ ಬಿ.ಎಸ್ಸಿ ಮುಗಿಸಿ ಸ್ನಾತಕೋತ್ತರ ಪದವಿ ಗಳಿಸಿ ಉಪನ್ಯಾಸಕಿ ಆಗಬೇಕೆಂದಿದ್ದೇನೆ.