ಸದಸ್ಯ:ಅನುಷ.ಆನಂದ/sandbox1
- ಹರಿವಂಶ್ ರಾಯ್ ಬಚ್ಚನ್##
ವಯಕ್ತಿಕ ಜೀವನ ಮತ್ತು ಶಿಕ್ಷಣ
ಅಲಹಾಬಾದಿನ ಸಂಯುಕ್ತ ಪ್ರಾಂತ್ಯಗಳ (ಈಗಿನ ಉತ್ತರ ಪ್ರದೇಶ) ಪ್ರತಾಪ್‌ಗರ್ ಜಿಲ್ಲೆಯ ಬಾಬುಪಟ್ಟಿ (ರಾನಿಗಂಜ್) ಎಂಬ ಹಳ್ಳಿಯಲ್ಲಿ ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ಅವರ ಪ್ರತಾಪ್ ನಾರಾಯಣ್ ಶ್ರಿವಾಸ್ತವ್ ಮತ್ತು ಸರಸ್ವತಿ ದೇವಿಯವರ ಮೊದಲ ಮಗನಾಗಿದ್ದರು. ಅವರನ್ನು ಬಚ್ಚನ್ (ಅರ್ಥ "ಮಕ್ಕಳ ರೀತಿಯ") ಎಂದು ಮನೆಯಲ್ಲಿ ಕರೆಯುತ್ತಿದ್ದರು. ಅವರ ಶಾಲಾ ಜೀವನ ಮುನ್ಸಿಪಲ್ ಶಾಲೆಯಲ್ಲಾಯಿತು ಮತ್ತು ನಂತರದಲ್ಲಿ ಕುಟುಂಬದ ಸಾಂಪ್ರದಾಯದಿಂದಾಗಿ ಕಾಯಸ್ಥ ಪಠಶಾಲಾದಲ್ಲಿ (कायस्थ पाठशाला) ಉರ್ದುವನ್ನು ತನ್ನ ಕಾನೂನು ಜೀವನದ ಪ್ರಾರಂಭವಾಗಿ ಕಲಿತರು.ನಂತರ ಅವರು ಅಲಹಾಬಾದ್ ವಿದ್ಯಾಲಯ ಮತ್ತು ಬನಾರಸ್ ಹಿಂದೂ ವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು.ಆ ಸಮಯದಲ್ಲಿ ಅವರು ಸ್ವಾತಂತ್ರ್ಯ ಚಳುವಳಿಯ ಪ್ರಭಾವಕ್ಕೊಳಗಾದರು,ನಂತರ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಚಳುವಳಿಯಲ್ಲಿ ಭಾಗವಹಿಸಿದರು.
ಅವರು ಅನುಸರಿಸಬೇಕಾದ ಮಾರ್ಗವಿದಲ್ಲವೆಂದು ಅರಿವಾಗಿ ವಿದ್ಯಾಲಯಕ್ಕೆ ಮರಳಿದರು.1941ರಿಂದ1952ರ ವರೆಗೆ ಅಲಹಾಬಾದ್ ವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಬೋಧಿಸುತ್ತಿದ್ದರು ಮತ್ತು ನಂತರದ ಎರಡು ವರ್ಷ ಕೇಂಬ್ರಿಡ್ಜ್ ವಿದ್ಯಾಲಯದಲ್ಲಿ ಡಬ್ಲುಬಿ ಯೇಟ್ಸ್ ಮೇಲಿನ ಡಾಕ್ಟೋರಲ್ ಪ್ರಬಂಧರಚನೆಯಲ್ಲಿ ಕಾರ್ಯಪ್ರವೃತ್ತರಾದರು. ಅದರ ನಂತರ ಶ್ರೀವಾಸ್ತವದ ಬದಲಿಗೆ ‘ಬಚ್ಚನ್’ನ್ನು ಕೊನೆಯ ಹೆಸರಾಗಿ ಬಳಸತೊಡಗಿದರು. ಹರಿವಂಶ್ ರಾಯ್‌ರ ಪ್ರಬಂಧಕ್ಕೆ ಕೆಂಬ್ರಿಡ್ಜ್‌ನಲ್ಲಿ ಪಿಹೆಚ್‌ಡಿ ದೊರೆಯಿತು. ಅವರು ಕೆಂಬ್ರಿಡ್ಜ್‌ನಲ್ಲಿ ಇಂಗ್ಲಿಷ್ ಸಾಹಿತ್ಯಕ್ಕಾಗಿ ಪಿಹೆಚ್‌ಡಿ ಪಡೆದವರಲ್ಲಿ ಎರಡನೇಯವರಾದರು. ಭಾರತಕ್ಕೆ ಮರಳಿದ ನಂತರ ಅಲಹಾಬಾದಿನ ಆಲ್ ಇಂಡಿಯಾ ರೇಡಿಯೋನಲ್ಲಿ ಸೇವೆ ಸಲ್ಲಿಸಿದರು.
1926ರಲ್ಲಿ,19ನೇ ವಯಸ್ಸಿನಲ್ಲಿ ಬಚ್ಚನ್ ತನ್ನ ಮೊದಲ ಹೆಂಡತಿಯಾದ 14 ವಯಸ್ಸಿನ ಶ್ಯಾಮರನ್ನು ಮದುವೆಯಾದರು. ಅವರು ಹತ್ತು ವರ್ಷಗಳ ನಂತರ 1936ರಲ್ಲಿ ಹಲವು ಸಮಯದ ಕ್ಷಯದಿಂದ 24ನೇ ವಯಸ್ಸಿನಲ್ಲಿ ಸಾವನ್ನಪ್ಪಿದರು. ಬಚ್ಚನ್ ಮತ್ತೆ ಸಿಖ್‌ರಾದ ತೇಜಿ ಸೂರಿಯವರನ್ನು 1941ರಲ್ಲಿ ಮದುವೆಯಾದರು. ಅವರ ಇಬ್ಬರು ಮಕ್ಕಳೆಂದರೆ ಅಮಿತಾಬ್ ಮತ್ತು ಅಜಿತಾಬ್.
1955ರಲ್ಲಿ, ಹರಿವಂಶ್ ರಾಯ್ ದೆಹಲಿಗೆ ತೆರಳಿ ವಿಶೇಷಾಧಿಕಾರದ ಮೇರೆಗೆ ವಿದೇಶಾಂಗ ಸಚಿವಾಲಯದಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದರು, ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವುದರಲ್ಲಿ ಇವರೂ ಶ್ರಮಿಸಿದರು. ಅವರ ಪ್ರಮುಖ ಬರಹಗಳ ಭಾಷಾಂತದ ಮೂಲಕ ಹಿಂದಿಯನ್ನು ಶ್ರೀಮಂತಗೊಳಿಸಿದರು. ಕವಿಯಾಗಿ ಮಧುಶಾಲಾ (ಆಲ್ಕೊಹಾಲಿನ ಪಾನೀಯಗಳ ಮಾರಾಟ ಕೇಂದ್ರ) ಕವನದ ಮೂಲಕ ಪ್ರಖ್ಯಾತರಾದರು. ಉಮರ್ ಖಯಾಮ್‌ರ ರುಬಿಯಾತ್‌ನ ನಂತರದಲ್ಲಿ ಅವರು ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ಮತ್ತು ಒಥೆಲೊ ಮತ್ತು ಭಗವತ್ ಗೀತೆಯ ಹಿಂದಿ ಭಾಷಾಂತರದಿಂದ ಅವಿಸ್ಮರಣೀಯರಾಗಿದ್ದಾರೆ. ನವೆಂಬರ್ 1984ರಲ್ಲಿ ಅವರು ಇಂದಿರಾಗಾಂಧಿಯ ಹತ್ಯೆಯ ಮೇಲಿನ ಕೊನೆಯ ಕವನವಾದ ‘ಏಕ್ ನವೆಂಬರ್1984’ನ್ನು ರಚಿಸಿದರು.
ಹರಿವಂಶ್ ರಾಯ್ ಭಾರತೀಯ ರಾಜ್ಯಸಭೆಗೆ 1966ರಲ್ಲಿ ನಾಮಾಂಕಿತರಾದರು ಮತ್ತು ಮೂರು ವರ್ಷಗಳ ನಂತರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಸ್ವೀಕರಿಸಿದರು.1976ರಲ್ಲಿ ಅವರ ಹಿಂದಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಪದ್ಮ ಭೂಷಣ ಪ್ರಶಸ್ತಿಯನ್ನು ಪಡೆದರು. ಅವರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಾಗಿ ಸರಸ್ವತಿ ಸಮ್ಮಾನ್, ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ ಮತ್ತು ಆಫ್ರೊ-ಏಷ್ಯನ್ ಸಮ್ಮೇಳನದಲ್ಲಿ ಲೋಟಸ್ ಪ್ರಶಸ್ತಿಗಳನ್ನು ಪಡೆದರು. ತಮ್ಮನ್ನು ಪರಿಚಯಿಸಿಕೊಳ್ಳುವಾಗ ಈ ರೀತಿಯಾಗಿ ಹೇಳುತಿದ್ದರು: ಮಿಟ್ಟಿ ಕಾ ತನ್, ಮಸ್ತಿ ಕಾ ಮನ್, ಕ್ಷಣ್-ಭರ್ ಜೀವನ್- ಮೇರಾ ಪರಿಚಯ್. (ಮಣ್ಣಿನ ದೇಹ, ಆಟದ ಮನಸ್ಸು, ಕ್ಷಣದ ಜೀವನ-ಅದು ನಾನು).
ಬಚ್ಚನ್ ಜನವರಿ 18, 2003ರಂದು ತಮ್ಮ 95ನೇ ವಯಸ್ಸಿನಲ್ಲಿ ಉಸಿರಾಟದ ತೋಂದರೆಯಿಂದಾಗಿ ಕೊನೆಯುಸಿರೆಳೆದರು.[೨] ಅವರ ಹೆಂಡತಿ ತೇಜಿ ಬಚ್ಚನ್ 2007ರಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ವೃತ್ತಿಜೀವನ ಬೋಧನಾ ವೃತ್ತಿ
1941ರಿಂದ 1952ವರೆಗೆ ಅಲಹಾಬಾದ್ ವಿದ್ಯಾಲಯದಲ್ಲಿ ಇಂಗ್ಲೀಷನ್ನು ಬೋಧಿಸಿದರು ಮತ್ತು ಎರೆಡು ವರ್ಷಗಳ ಕಾಲ ಕೇಂಬ್ರಿಡ್ಜ್ ವಿದ್ಯಾಲಯದ ಸೈಂಟ್ ಕ್ಯಾಥರಿನ್ಸ್ ಕಾಲೇಜಿನಲ್ಲಿ ಕಳೆದರು. ಅಲ್ಲಿ ಪ್ರಖ್ಯಾತ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕ, ಥಮಸ್ ರೈಸ್ ಹೆನ್‌ರೊಂದಿಗೆ ಅಭ್ಯಸಿಸಿದರು ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಐರಿಷ್ ಕವಿ ಡಬ್ಲುಬಿ ಯೇಟ್ಸ್ ಮತ್ತು ಯಕ್ಷಿಣಿವಿದ್ಯೆಯ ಮೇಲಿನ ಸಂಶೋಧನೆಗಾಗಿ ಡಕ್ಟರೇಟ್ ಪಡೆದರು. ಅಲ್ಲಿ ಅವರು 'ಶ್ರಿವಾಸ್ತವ ಎನ್ನುವ ಕೊನೆಯ ಹೆಸರಿನ ಬದಲಿಗೆ ಬಚ್ಚನ್ ನನ್ನು ಬಳಸತೊಡಗಿದರು. ಅವರು ಕೇಂಬ್ರಿಡ್ಜ್ ವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯಕ್ಕಾಗಿ ಪಿಹೆಚ್‌ಡಿ ಪಡೆದವರಲ್ಲಿ ಎರಡನೇಯವರಾದರು.
ಭಾರತಕ್ಕೆ ಮರಳಿದ ನಂತರ ಚಿಂತಿಸಿ ನಂತರದಲ್ಲಿ ಆಲ್ ಇಂಡಿಯಾ ರೇಡಿಯೋ, ಮುಂಬಯಿಯಲ್ಲಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು.1955ರಲ್ಲಿ ದೆಹಲಿಗೆ ತೆರಳಿ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದರು, ಅಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವುದರಲ್ಲಿ ಇವರೂ ಶ್ರಮಿಸಿದರು.
ತಮ್ಮನ್ನು ಪರಿಚಯಿಸಿಕೊಳ್ಳುವಾಗ ಈ ರೀತಿಯಾಗಿ ಹೇಳುತಿದ್ದರು: “ Mitti ka tan, masti ka man, kshan-bhar jivan– mera parichay. (मिट्टी का तन, मस्ती का मन, क्षण भर जीवन, मेरा परिचय) ”
(ಮಣ್ಣಿನ ದೇಹ, ಆಟದ ಮನಸ್ಸು, ಕ್ಷಣದ ಜೀವನ - ಅದು ನಾನು). ಪ್ರಶಸ್ತಿಗಳು ಮತ್ತು ಗೌರವಗಳು
ಬಚ್ಚನ್ ಭಾರತದ ಸಂಸತ್ತಿನ ಮೇಲ್ಮನೆಯಾದ ರಾಜ್ಯ ಸಭೆಗೆ 1966ರಲ್ಲಿ ನಾಮಾಂಕಿತಗೊಂಡರು ಮತ್ತು 1969ರಲ್ಲಿ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪಡೆದರು. 1976ರಲ್ಲಿ ಅವರ ಹಿಂದಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಪದ್ಮ ಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಪಡೆದರು. 1994ರಲ್ಲಿ, ಉತ್ತರ ಪ್ರದೇಶ ಸರ್ಕಾರ "ಯಶ್ ಭಾರತಿ" ಸನ್ಮಾನ ನೀಡಿ ಗೌರವಿಸಿತು. [೧] ಸೋವಿಯತ್ ಲ್ಯಾಂಡ್ ನೆಹ್ರು ಪ್ರಶಸ್ತಿ ಮತ್ತು ಆಫ್ರೊ-ಏಷ್ಯನ್ ಸಮ್ಮೇಳನದಲ್ಲಿ ಲೋಟಸ್ ಪ್ರಶಸ್ತಿಗಳನ್ನು ಪಡೆದರು.
2003ರಲ್ಲಿ, ಭಾರತವು ಅಂಚೆ ಚೀಟಿಯನ್ನು ಅವರ ಸ್ಮರಣಿಕೆಗಾಗಿ ಬಿಡುಗಡೆ ಮಾಡಲಾಯಿತು.