ಸ್ವ ಪರಿಚಯ

ಬದಲಾಯಿಸಿ

ನನ್ನ ಹೆಸರು ಅನುಷ.ಎ,ನಾನು ಹುಟ್ಟಿದ್ದು ಎಪ್ರಿಲ್೧೦,೧೯೯೭ರಲ್ಲಿ ಮಂಗಳೂರಿನಲ್ಲಿ.ನಾನು ಕಳೆದ ೧೮ ವರ್ಷಗಳಿಂದ ಪಣಂಬೂರಿನಲ್ಲಿ ವಾಸಿಸುತ್ತಿದ್ಡೇನೆ.ನನ್ನ ತಂದೆ ಆನಂದ.ಎ ಮತ್ತು ತಾಯಿ ಸುಜಾತ ಇವರು ಕಾಸರಗೋಡಿನಲ್ಲಿ ತಮ್ಮ ಬಾಲ್ಯವನ್ನು ಕಳೆದಿರುವರು.ನನ್ನ ತಂದೆ ಎನ್.ಎಮ್.ಪಿ.ಟಿಯ ನೌಕರರಾಗಿದ್ದಾರೆ.೩೫ವರ್ಷಗಳಿಂದ ಕೆಲಸ ಮಾಡುತ್ತಿರುವರು.ನನಗೆ ತಂದೆ ಹಾಗು ತಾಯಿ ಮೇಲೆ ಬಹಳ ಪ್ರೀತಿ.ಅವರು ಯಾವತ್ತು ನಾನು ಕೇಳಿದ್ದನ್ನು ನಿಷೇಧಿಸಿದವರಲ್ಲ,ತಾಯಿ ನನ್ನ ಗೆಳತಿಯಂತೆ ಅವಳಲ್ಲಿ ಯಾವುದನ್ನು ಬಚ್ಚಿಡುವುದಿಲ್ಲ. ನನ್ನ ತಂದೆಗೆ ಕ್ರೀಡೆಯೆಂದರೆ ತುಂಬ ಇಷ್ಟ ಮೊದಲು ಹಾಕಿ,ಫುಟ್ಬಾಲ್,ಕ್ರಿಕೇಟ್, ಕಬಡ್ಡಿ ಆಡುತ್ತಿದ್ದರು,ಹಾಗು ಎಲ್ಲಾ ಕ್ರಿಕೆಟ್ ಮ್ಯಾಚನ್ನು ತಪ್ಪದೆ ವೀಕ್ಷಿಸುತ್ತಾರೆ. ನನಗೆ ಒಬ್ಬ ಅಣ್ಣ ಇದ್ದಾರೆ, ಮನೋಜ್ ಎಂದು. ಅವರು ಬಹಳ ಜಾಣ.ಬಿ.ಸಿ.ಎ ಮುಗಿಸಿದ್ದಾರೆ.ಅವರಿಗೆ ಗಣಕಯಂತ್ರದ ಬಗ್ಗೆ ಬಹಳಷ್ಟು ಮಾಹಿತಿ ತಿಳಿದಿದೆ,ಇಂಗ್ಲಿಷ್ ಲೇಖನಗಳನ್ನು ಬರೆಯುತ್ತಾರೆ.

ನಮ್ಮೂರು

ಬದಲಾಯಿಸಿ

ನನ್ನ ಊರಾದ ಪಣಂಬೂರಿನ ಬಗ್ಗೆ ತಿಳಿಸುವೆನು, ಮೊದಲಾಗಿ ಪಣಂಬೂರು ಎಂಬ ಹೆಸರು ಹೇಗೆ ಬಂತು?ನಮ್ಮ ಕಾರವಳಿಯ ಭಾಷೆಯಾದ ತುಳುವಿನಲ್ಲಿ ಪಣ ಎಂದರೆ-ಹಣ, ಊರು- ಹಳ್ಳಿ.ಇಲ್ಲಿ ನಂದನೇಶ್ವರ ದೇವಸ್ಥಾನವಿದೆ, ವಿಷ್ಣು ಮೂರ್ತಿ ದೇವಸ್ಥಾನ,ಜನರಿಗೆ ಬಹಳ ಆಕರ್ಷಕ ಕೇಂದ್ರವಾದದ್ದು "ಪಣಂಬೂರು ಬೀಚ್", ಇದರ ಬಳಿಯೇ ಎಮ್.ಸಿ.ಎಫ಼್ ಕಾರ್ಖಾನೆ ಇದೆ. ನವ ಮಂಗಳೂರು ಬಂದರು ಭಾರತದಲ್ಲಿ ಒಂಬತ್ತನೇ ಅತ್ಯಂತ ದೊಡ್ಡ ಬಂದರು ಆಗಿದೆ.ಇದನ್ನು ಉದ್ಘಾಟಿಸಿದವರು ನಮ್ಮ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಸುಮಾರು ೧೯೭೪ರಲ್ಲಿ.ಲೋಹ,ಕಾಫಿ,ಗೇರುಬೀಜ,ಎಲ್ ಪಿ ಜಿ,ಟಿಂಬರ್ ಲಾಗ್ಸ್,ಕಾರ್ಗೋ,ಅಮೋನಿಯ,ರಸ ಗೊಬ್ಬರ,ಪೆಟ್ರೊಲಿಯಮ್ ಉತ್ಪನ್ನಗಳು ಇಲ್ಲಿಂದ ರಫ್ತುಗೊಳ್ಳುತ್ತಿವೆ.

ವಿದ್ಯಾಭ್ಯಾಸ

ಬದಲಾಯಿಸಿ

ನಾನು ಕಲಿತ್ತದ್ದು ಎನ್.ಎಮ್.ಪಿ.ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ.ನನಗೆ ಬಹಳ ಪ್ರೋತ್ಸಾಹ ನೀಡಿದ ಶಾಲೆ.ನಾನು ಮೂರನೆ ತರಗತಿಯಲ್ಲಿ ಇದ್ದಾಗ ತಿರುವನಂತಪುರದಲ್ಲಿ ನಡೆದಂತಹ ರಾಷ್ತ್ರಮಟ್ಟದ ಬುಲ್-ಬುಲ್ ಶಿಬಿರದಲ್ಲಿ ೫ ದಿನಗಳ ಕಾಲ ಭಾಗವಹಿಸಿದ್ದೇನೆ,ಹಾಗು ಇನ್ನಿತರ ತುಂಬ ಕಡೆ ಹೋಗಿದ್ದೇನೆ.ನಮ್ಮ ಶಾಲೆಯಲ್ಲಿ ಪ್ರತಿಭಾಕಾರಂಜಿ ಇರುತ್ತಿದ್ದಾಗ ಕ್ರಮೇಣ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ.ಹಾಡುವುದು,ಹಾಡುಗಳನ್ನು ಕೇಳುವುದು, ಪುಸ್ತಕ ಓದುವುದು,ಅಡುಗೆ ಮಾಡುವುದು ಇವು ನನ್ನ ಹವ್ಯಾಸಗಳು.ಹಾಡುಗಳಲ್ಲಿ ಭಜನೆ ಮಾಡುವುದು ತುಂಬ ಇಷ್ಟ,ದಾಸರ ಹಾಡುಗಳು, ಹಿಂದಿ ಹಾಡುಗಳು, ಎಸ್ ಪಿ ಬಾಲಸುಬ್ರಹಮಣ್ಯ,ಯೆಸುದಾಸ್,ಸೋನು ನಿಗಂ,ಇತ್ಯಾದಿ ಇವರ ಹಾಡುಗಳು,ಇಂಗ್ಲಿಷ್ ಹಾಡುಗಳು.ಪುಸ್ತಕಗಳಲ್ಲಿ- ಇಂಗ್ಲಿಷ್ ನೋವೆಲ್ಸ್,ಕನ್ನಡ ಪತ್ರಿಕೆ,ಇತ್ಯಾದಿ. ನಾನು ಗೋವಿಂದದಾಸ ಕಾಲೇಜಿನಲ್ಲಿ ಪಿಯುಸಿ ಕಲಿತದ್ದು.ವಿಜ್ಞಾನವನ್ನು ಆಯ್ಕೆಮಾಡಿಕೊಂಡಿರುವೆ ಅದರಲ್ಲಿ ಭೌತಶಾಸ್ತ್ರ,ರಸಾಯನಶಾಸ್ತ್ರ,ಗಣಿತ,ಅಂಕಿಅಂಶಗಳು ಕಲಿತೆನು. ಪ್ರಸ್ತುತವಾಗಿ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಬಿ.ಎಸ್ಸಿ ಕಲಿಯುತ್ತಿದ್ದೇನೆ,ಮುಂದೆ ಎಮ್.ಎಸ್ಸಿ ಮಾಡಿ ಐ.ಎ.ಎಸ್ ಆಫಿಸರ್ ಆಗಬೇಕೆಂಬ ಗುರಿ ಇಟ್ಟಿದ್ದೇನೆ.