Yashaswini
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ಇರುವ ಚಂದದ ಅವಳಿ ಬೆಟ್ಟಗಳ ಶ್ರೇಣಿ. ದೂರವನ್ನು ಅಳೆಯುವುದಾದರೆ ಬೆಂಗಳೂರಿನಿಂದ ಸುಮಾರು 130 ಕಿಮೀ. ಇದೂಂದು ಅದ್ಭುತ ಟೂರಿಸ್ಟ್ ಸ್ಪಾಟ್ ಹಾಗೂ ರಾಕ್ ಕ್ಲೈಂಬಿಕ್‌ಗೆ ಹೇಳಿ ಮಾಡಿಸಿದ ಜಾಗ. ಪಾಂಡವರ ಪುರ ಪಟ್ಟಣದಿಂದ ಸುಮಾರು 14 ಕಿಮೀಯಷ್ಟು ಸಣ್ಣ ಡಾಂಬರ್ ರಸ್ತೆಯಲ್ಲಿ ಸಾಗಿದರೆ ಕುಂತಿ ಬೆಟ್ಟದ ಬುಡ ತಲುಪಬಹುದು. ಸಿಗುವುದು ಆಂಜನೇಯ, ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಕಲ್ಯಾಣಿ. ಅಲ್ಲಿಂದ ಮುಂದಕ್ಕೆ ಕಾಲ್ನಡಿಗೆಯಲ್ಲಿ ಬೆಟ್ಟ ಏರಬಹುದು. ಬೆಟ್ಟವನ್ನು ಕೆಳಗಿಂದ ನೋಡಿದರೆ ಹತ್ತುವುದು ಕಷ್ಟ ಅಂತ ಅನಿಸುತ್ತದೆ. ಆದರೆ, ಅಷ್ಟೇನೂ ಕಠಿಣವಲ್ಲ. ಕೆಲವೊಂದು ಕಡೆ ರಸ್ತೆಯೂ ಸರಿಯಾಗಿ ಕಾಣದಿರುವ ಸಾಧ್ಯತೆ ಇದೆ. ಆದರೆ ಹಾದಿ ತಪ್ಪುವುದಿಲ್ಲ ಎನ್ನುವು ಭರವಸೆ ಇದ್ದರೆ ಬೆಟ್ಟದ ತುತ್ತ ತುದಿಗೆ ತಲುಪುದು ಕಷ್ಟವೇನಲ್ಲ.
ಬಂಡೆಗಳ ರಹಸ್ಯ ರೂಪ ಸೌಂದರ್ಯ ನೋಡುಗರ ಕಣ್ಣಲ್ಲಿ ಅಡಗಿರುತ್ತದೆ ಅನ್ನುವುದಕ್ಕೆ ಕುಂತಿ ಬೆಟ್ಟಗಳ ಸರಣಿಯಲ್ಲಿರುವ ಕೆಲವು ಕಲ್ಲುಗಳೇ ಉದಾಹರಣೆ. ಯಾಕೆಂದರೆ ಬೆಟ್ಟವನ್ನು ಏರುತ್ತ ಹೋದಂತೆ ಕೆಲವು ಕಲ್ಲುಗಳು ನಿಮಗೆ ಎದುರಾಗುತ್ತವೆ. ಅವುಗಳನ್ನು ಸರಿಯಾಗಿ ನೋಡಿದರೆ ವಿವಿಧ ಪ್ರಾಣಿಗಳ ಮುಖದಂತೆ ಗೋಚರವಾಗುತ್ತವೆ. ಜಿಂಕೆಯ ಮತ್ತು ಮಲಗಿರುವ ತೋಳದ ಮುಖದಂತೆ ತೋರುವ ಕಲ್ಲುಗಳು ಆಶ್ಚರ್ಯ ಹುಟ್ಟಿಸುತ್ತವೆ. ಬೆಟ್ಟದಿಂದ ಕೆಳಕ್ಕೆ ನೋಡುತ್ತಿರುವ ಮೊಸಳೆ ರೂಪದ ಕಲ್ಲೂಂದು ಚಾರಣಿಗರಿಗೆ ಥ್ರಿಲ್ ನೀಡುತ್ತದೆ. ಬೆಟ್ಟದ ತುತ್ತ ತುದಿಯಲ್ಲಿ ಶಿಥಿಲಾವಸ್ಥೆಯಲ್ಲಿ ಇರುವ ದೇವಸ್ಥಾನ ಇದೆ. ಅದೇ ರೀತಿ ಒನಕೆ ರೂಪದ ಕಲ್ಲೂಂದು ಇದ್ದು, ಅದರ ಮೂಲಕ ಪಾಂಡವರ ಅಜ್ಞಾತ ವಾಸದಲ್ಲಿ ಇದ್ದ ಸಮಯದಲ್ಲಿ ಕುಂತಿ ತಮ್ಮ ಮಕ್ಕಳಿಗೆ ಇಲ್ಲಿ ಅಡುಗೆ ಮಾಡಿ ಬಡಿಸುತ್ತಿದ್ದಳು ಎಂದು ಹೇಳಲಾಗುತ್ತಿದೆ. ಅದೇ ರೀತಿ ಇಲ್ಲೊಂದು ಕಡೆ ಕಲ್ಲಿನಲ್ಲಿ ಪಾದದ ಹೆಜ್ಜೆ ಇದೆ. ಭೀಮ ಊರಿದ ಹೆಜ್ಜೆ ಅದು ಎಂದು ನಂಬಲಾಗಿದೆ.
ಪ್ರಕೃತಿಯ ಆಸ್ವಾದ ಪ್ರಕೃತಿಯನ್ನು ಆಸ್ವಾದಿಸಬೇಕು ಎನ್ನುವ ಕಾರಣಕ್ಕೂ ಕುಂತಿಬೆಟ್ಟಕ್ಕೆ ಭೇಟಿ ನೀಡಬಹುದು. ಈ ಅನುಭವ ಬೆಟ್ಟದ ಈ ಹಿಂದೆ ತುದಿ ತಲುಪಿದವರಿಗೆ ಆಗಿರುತ್ತದೆ. ಬೆಟ್ಟದ ತುತ್ತ ತುದಿಯಿಂದ ಕೆಳಕ್ಕೊಂದು ಪಕ್ಷಿ ನೋಟ ಹರಿಸಿದ್ದಾದರೆ, ತೊನ್ನೂರು ಕೆರೆಯ ಹಿನ್ನೆಲೆಯಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ಕಬ್ಬು ಮತ್ತು ತೆಂಗಿನ ಬೆಳೆ ಇರುವ ಈ ಪ್ರದೇಶವನ್ನು ಮೇಲಿಂದ ನೋಡಿದರೆ, ಹಸಿರು ಹಸಿರಾಗಿ ಕಾಣುತ್ತದೆ. ಇದು ಪ್ರವಾಸಿಗರಿಗೆ ಅನನ್ಯ ಅನುಭವ ನೀಡುವುದಂತೂ ಗ್ಯಾರಂಟಿ.
ಪೌರಾಣಿಕ ಹಿನ್ನೆಲೆ ಕುಂತಿ ಬೆಟ್ಟಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಮಹಾಭಾರತದಲ್ಲಿ ಪಾಂಡವರಿಗೆ ವನವಾಸದ ಅನಿವಾರ್ಯತೆ ಬಂದಾಗ ಕೆಲವು ದಿನಗಳ ಕಾಲ ಇಲ್ಲಿ ಜೀವನ ಮಾಡಿದ್ದರು. ಹೀಗಾಗಿ ಪಕ್ಕದ ಪಟ್ಟಣಕ್ಕೆ ಪಾಂಡವಪುರ ಎನ್ನುವ ಹೆಸರು. ಅದೇ ರೀತಿ ಬಕಾಸುರನೂ ಕುಂತಿಬೆಟ್ಟಗಳೊಂದರಲ್ಲಿ ವಾಸ ಮಾಡಿದ್ದು, ಆತನನ್ನು ಭೀಮ ಸಂಹರಿಸಿದ ಪೌರಾಣಿಕ ಹಿನ್ನೆಲೆಗಳು ಬೆಟ್ಟದ ಪ್ರಸಿದ್ಧಿಯನ್ನು ಇನ್ನಷ್ಟು ಹೆಚ್ಚಿಸಿದೆ.
Start a discussion with Yashaswini
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Yashaswini. What you say here will be public for others to see.