ಗಣಪತಿರಾವ್ ಐಗಳ್

ಅನೇಕ ಕ್ಷೇತ್ರಗಳ ಇತಿಹಾಸವನ್ನು ಬರೆದ ಚರಿತ್ರೆಕಾರರು ಒಂದಲ್ಲ ಒಂದು ಸಿದ್ಧಾಂತದಿಂದ ಪ್ರೇರೇಪಿತರಾದವರೆ. ಇವೆಲ್ಲವೂ ಅವರ ಗ್ರಂಥಗಳಲ್ಲಿ ಪ್ರತಿಬಿಂಬಿಸುತ್ತವೆ. ಆದರೆ ಕೆಲವೊಂದು ಗ್ರಂಥಗಳು ಪ್ರೇರಣೆಗೊಳಗಾಗದೆ ಸಮಾಜದ ನಡತೆಯನ್ನು ಕಂಡು ಅದರ ಕೊರಗಿನಿಂದ ರಚಿತವಾಗಿರುತ್ತದೆ. ಅಂತಹ ಚರಿತ್ರೆಕಾರರಲ್ಲಿ ಗಣಪತಿರಾವ್ ಐಗಳು ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಇವರು ತುಳುನಾಡಿನ ಚರಿತ್ರೆಯ ರಚನೆಗೆ ಅಡಿಪಾಯವನ್ನಿರಿಸಿದ ಧೀಮಂತರು. ಅದೆಷ್ಟೋ ರಾಜರುಗಳು ಆಳಿದ ಈ ತುಳುನಾಡಿನ ಇತಿಹಾಸವನ್ನು ಹುಡುಕಲು ಹೋದರೆ ಮಾಹಿತಿ ದೊರಕುವುದು ಇವರಿಂದ. ತಮ್ಮ "ದಕ್ಷಿಣ ಕನ್ನಡ ಜಿಲ್ಲೆಯವರೇ ಪ್ರಾಚೀನ ಇತಿಹಾಸ" ಗ್ರಂಥದ ಮೂಲಕ ತುಳುನಾಡಿನ ಇತಿಹಾಸದ ಪರಿಚಯ ಮಾಡಿದ್ದಾರೆ. ಮಂಜೇಶ್ವರದ ಗಣಪತಿರಾವ್ ಐಗಳ್ ಕೊಂಕಣಿ ಮನೆತನದ ಗೌಡ ಸಮಾಜಕ್ಕೆ ಸೇರಿದವರು. ಬಂಟ್ವಾಳದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 1881ರಿಂದ 1944ರ ಇವರ ಜೀವಿತಾವಧಿಯಲ್ಲಿ ಇತಿಹಾಸ ಕ್ಷೇತ್ರದಲ್ಲಿ ಹೆಚ್ಚಿನ ಕೃಷಿ ನಡೆಸಿದ್ದಾರೆ. ಇವರು ದಕ್ಷಿಣ ಖನ್ನದ ಜಿಲ್ಲೆಯಲ್ಲಿ ಸಂಚರಿಸಿ ಶೇಖರಿಸಿದ ಗ್ರಂಥಗಳ ಪೈಕಿ ಮುಖ್ಯವಾದವೆಂದರೆ "ಬಾರಕೂರು ಮಹಾತ್ಮೆ", " ಗ್ರಾಮ ಪದ್ಧತಿ", "ಮಯೂರವರ್ಮ ಚರಿತ್ರೆ" ಮುಂತಾದವುಗಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸಿ ಇತಿಹಾಸ ರಚಿಸಿ ಮುಂದಿನ ಪೀಳಿಗೆಗೆ ಇವರು ಅದ್ಭುತ ಕೊಡುಗೆ ನೀಡಿದ್ದಾರೆ.

Return to the user page of "Swathi Abhyankar/sandbox".