ಮಗುವಿನ ಶಿಕ್ಷಣ ಮತ್ತು ತಂದೆ-ತಾಯಿ

ಮಕ್ಕಳ ಉಜ್ವಲ ಭವಿಷ್ಯದಲ್ಲೇ ಅಪರಿಮಿತ ಆನಂದವನ್ನು ಕಾಣುವ ತಂದೆ-ತಾಯಿಗಳು ಮಕ್ಕಳ ಉಜ್ವಲ ಭವಿಷ್ಯದ ನಿರ್ಮಾಣಕ್ಕಾಗಿ ಏನೆಲ್ಲಾ ತ್ಯಾಗ ಮಾಡಲು ಸಿದ್ಧರಿರುತ್ತಾರೆ. ಅವರ ಈ ನಿರೀಕ್ಷೆಯನ್ನು ಮಕ್ಕಳು ಎಷ್ಟರ ಮಟ್ಟಿಗೆ ಸಾಕಾರಗೊಳಿಸುತ್ತಾರೆ? ಎಂಬುದು ಇಂದಿನ ಯುವಪೀಳಿಗೆಯಲ್ಲಿನ ಕೆಲ ಅಂಶಗಳನ್ನು ಗಮನಿಸಿದಾಗ ಸಹಜವಾಗಿ ಕಾಡುವ ಪ್ರಶ್ನೆಯಾಗಿದೆ. ಇಂದಿನ ಸ್ಪರ್ಧಾತ್ಮಕವಾದ, ಯಾಂತ್ರಿಕ ಜೀವನದಲ್ಲಿ ಶಿಕ್ಷಣಕ್ಕೆ ಅತ್ಯಧಿಕ ಮಹತ್ವ ದೊರೆತಿದೆಯಲ್ಲದೇ, ಶಿಕ್ಷಣದ ಮೂಲಕವೇ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ತಂದೆ-ತಾಯಿಗಳು ಬಯಸುವದು ಸೂಕ್ತವೂ, ಸಹಜವೂ ಆಗಿದೆ. ಅದಕ್ಕೆಂದೇ ಮಗು ಹುಟ್ಟುವ ಮುಂಚೆಯೇ ಸಾಕಷ್ಟು ಡೊನೇಷನ್ ಕೊಟ್ಟು ಮುಂಗಡವಾಗಿಯೇ ಪ್ರತಿಷ್ಠಿತ ಶಾಲೆಗಳಲ್ಲಿ ಸ್ಥಳ ಕಾಯ್ದಿರಿಸುವ ಪರಿಪಾಠ, ಬೃಹತ್ ನಗರಗಳಲ್ಲಿ ಆರಂಭವಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಎಷ್ಟು ಬೇಕಾದರೂ ಹಣ ಖರ್ಚು ಮಾಡಲು ತಂದೆ-ತಾಯಿಗಳು ಹೀಮಜರಿಯುವದಿಲ್ಲ. ಕೆಲವರಿಗೆ ಅದು ಪ್ರತಿಷ್ಠೆಯ ಸಂಕೇತವಾಗಿಯೂ ಪರಿಣಮಿಸಿದೆ. ಮಗುವನ್ನು ಎಲ್.ಕೆ.ಜಿ., ಯು.ಕೆ.ಜಿ. ಸ್ಕೂಲ್ ಗಳಲ್ಲಿ ಸೇರಿಸುವ ಮೂಲಕವೇ ತಂದೆ-ತಾಯಿಗಳು ಪ್ರತಿಷ್ಠೆಯ ಪೈಪೋಟಿಗೆ ಇಳಿಯುತ್ತಾರೆ. ಇತರರ ಮಕ್ಕಳಿಗಿಂತ ತಾವು ಹೆಚ್ಚಿಗೆ ಡೊನೇಷನ್ ಕೊಟ್ಟಿದ್ದು, ತಮ್ಮ ಮಗು ಅತ್ಯಧಿಕ ದುಬಾರಿ ವೆಚ್ಚದಲ್ಲಿ ಪ್ರತಿಷ್ಠಿತ ಶಾಲೆಯಲ್ಲಿ ಕಲಿಯುತ್ತಿದ್ದಾನೆಂದು ಹೇಳುವದರಲ್ಲೇ ತಂದೆ-ತಾಯಿಗಳಿಗೆ ಎಲ್ಲಿಲ್ಲದ ಹೆಮ್ಮೆ! ಮಗ ಅಥವಾ ಮಗಳು ಪ್ರಾಥಮಿಕ, ಮಾಧ್ಯಮಿಕ, ಕಾಲೇಜು ಸ್ನಾತಕೋತ್ತರ ಶಿಕ್ಷಣವನ್ನು ಮುಗಿಸುವವರೆಗೂ ತಂದೆ-ತಾಯಿಗಳ ಪ್ರತಿಷ್ಠಯ ಪೈಪೋಟಿಗೆ ದಣಿವು ಎಂಬುದೇ ಇರುವದಿಲ್ಲ.

Start a discussion about ಸದಸ್ಯ:Sushmithaau123/sandbox

Start a discussion
Return to the user page of "Sushmithaau123/sandbox".