ಋತುಗಳು

ಓ ಋತುವೇ ನೀನೆಷ್ಟು ಅಮರ ನೀನಿಲ್ಲದಿರೆ ಮನುಷ್ಯ ಸಮರ ನಿನ್ನ ಅರಿತು ಬಾಳಿದರೆ ಜೀವನವೆಷ್ಟು ಸುಂದರ

ಮಳೆಗಾಲದಲ್ಲಿ ನೀ ಬರುವೆ ಒಡಲು ತುಂಬಿ ಹರಿಯಲು ನಾ ಮೆಚ್ಚಿದ್ದು ನಿನ್ನ ಬಳುಕಿಗೆ ನಿನ್ನ ಬಿಳುಪಿಗೆ, ನಿನ್ನ ರೂಪಕ್ಕೆ ನಿನ್ನ ರಭಸಕ್ಕೆ ಯಾವುದಕ್ಕೂ ಅಲ್ಲಾ ನಾ ಮೆಚ್ಚಿದ್ದು ಜನರ ಜೀವನ ಹಸಿರಾಗುವುದಕ್ಕೆ.

ನಿನ್ನಲ್ಲೇ ಕಣ್ಣಿಟ್ಟು ಕಾಯುತ್ತಿರುವೆ, ನೀ ನಿಲ್ಲದಿರೆ ಬದುಕು ಬರಡಾಗುವುದು ಚಳಿಗಾಲದಿ ನೀ ಬರುವೆ ಎಲ್ಲರನ್ನು ಕೊರೆದು ಕೂರಿಸಿ ಬಿಡುವೆ ನಡುಗುತ್ತಾ, ನಾಚುತ್ತಾ ಕಂಬಳಿಯ ಒಳಗೆ ಸೇರಿಸಿ ಬಿಡುವೆ.