Shobha bk
ಮೋದಿ ಪ್ರಧಾನಿ
ಮೋದಿ ಯುಗಾರಂಭ
ರಾಷ್ಟ್ರಪತಿ ಭವನದ ಮುಂದಿನ ವಿಶಾಲ ಪ್ರಾಂಗಣದಲಿ ಸೋಮವಾರ ಸಂಜೆ ನಡೆದ ಭವ್ಯ ಸಮಾರಂಭದಲ್ಲಿ ೬೩ ವರ್ಷದ ನರೇಂದ್ರ ದಾಮೋದರದಾಸ್ ಮೋದಿ ಅವರು ದೇಶದ ೧೫ನೇ ಪ್ರದಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಸಮಾಜ ವಿ : ಗಾಳ ನುಂಗಿದ ಮೀನು ಇಂದು ಮಕ್ಕಲಳನ್ನು ಕಾಲೇಜಿಗೆ ಸೇರಿಸುವ ಹೊತ್ತು. ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳೆಲ್ಲಾ ಹಿಂದುಮುಂದು ಯೋಚಿಸದೆ ವಿಗ್ಣನವನ್ನು ಆಯ್ಕೆ ಮಾಡಿಕೊಳ್ಳುವುದು ಸಹಜ ಮನೋಧರ್ಮವೆನ್ನುವಂತಾಗಿದೆ. ಅದಲ್ಲದೆ ಬೇರೆ ವಿಷಯಗಳನ್ನು ಮನುಷ್ಯಮಾತ್ರದವರು ಓದಲಾರರು ಎಂಬಂತೆ ನಡೆದುಕೊಳ್ಳುವ ತಂದೆತಾಯಂದಿರು ಇದ್ದಾರೆ. ಇಲ್ಲವಾದಲ್ಲಿ ಮಕ್ಕಳ ಭವಿಷ್ಯದ ಕಾರಣವನ್ನು ಮುಂದಿತಟ್ಟುಕೊಂಡು ಮಾನವಿಕ ವಿಷಯಗಳ ಮೂದಲಿದೆ ನಡೆಸೇ ಇರುತ್ತಾರೆ. ಅದರಾಚೆಗೂ 'ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತರು' ಕಲಾ ವಿಭಾಗಕ್ಕೆ ಬರಬೇಕಾದರೆ ಯಾರಾದರೂ ಅವರ ಮೇಲೆ ವಿಶೇಷ ಪ್ರಭಾವ ಬೀರಿರಬೇಕು.
ಕಲೆ, ಮಾನವಿಕ, ಸಮಾಜ ವಿಘ್ನಾನ ಎಂದು ಕರೆಸಿಕೊಲಳ್ಳುವ ತತ್ವಶಾಸ್ತ್ರ, ಚರಿತ್ರೆ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜವಿಜ್ಣಾನ ಎಂದು ಕರೆಸಿಕೊಳ್ಳುವ ತತ್ವ ಶಾಸ್ತ್ರ, ಚರಿತ್ರೆ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರಗಳ ಅಳಿವು ಉಳಿವಿನ ಪ್ರಶ್ನೆ ಇಂದು ಕಾಣಮಬರುತ್ತಿದೆ. ಈ ಆತಂಕ ಭಾರತದಲ್ಲಿ ಮಾತ್ರವಲ್ಲ ಅಮೆರಿಕದ ವಿದ್ವಾಂಸರು ಆ ದೇಶದ ಭವಿಷ್ಯದ ಬಗೆಗೆ ಚಿಂತಿತರಾಗಿದ್ದಾರೆ. ಮಾರುಕಟ್ಟೆಯ ಬೇಡಿಕೆಯ ತತ್ವದ ಆಧಾರದ ಮೇಲೆ ಇಂದಿನ ವಿಶ್ವವಿದ್ಯಾಲಯಗಳನ್ನು ರೂಪಿಸಲು ಹೊರಟಿರುವ ಪಾಶ್ಚಿಮಾತ್ಯರಿಗೆ ಕಾಣುವ ಪ್ರಶ್ನೆಗಳು ಬೇರೆಯದೇ ಆಗಿರುತ್ತವೆ. ತನ್ನ ಬೆಂಬಲದಲ್ಲಿ ನಡೆಯುವ ವಿಶ್ವವಿದ್ಯಾಲಯಗಳ ಮೂಲಕ ಸರ್ಕಾರ ತನ್ನ ರಾಜಕೀಯ ನೀತಿಯನ್ನು ಪ್ರತಿಪಾದಿಸುತ್ತದೆಂಬುದು ಆ ದೇಶಗಳಲ್ಲಿ ಕೇಳಿಬರುವ ಟೀಕೆ.
ಇಲ್ಲಿ ನಮ್ಮನ್ನು ಕಾಡಿಸುತ್ತಿರುವ ಪ್ರಶ್ನೆಗಳು ಭಿನ್ನವಾಗಿವೆ. ಈ ವಿಷಯಗಳನ್ನು ಭಾರತದಲ್ಲಿ ಪರಿಚಯಿಸುವಾಗ ಅದರ ಹಿಂದೆ ಇರಬಹುದಾದ ರಾಜಕಾರಣವನ್ನು ಮರುಪರಿಶೀಲಿಸಿ ಕೊಳ್ಳಬೇಕಾಗಿದೆ. ಪಾಶ್ಚಿಮಾತ್ಯ ಮಾದರಿಯ ಉನ್ನತ ಶಿಷಣವನ್ನು ೧೮೫೭ರಲ್ಲಿ ಭಾರತದಲ್ಲಿ ಆರಂಭಿಸಲಾಯಿತು. ಭಾರತದ ಮೂರು ಪ್ರೆಸಿಡೆನ್ಸಿಗಳಾದ ಕಲ್ಕತ್ತ, ಮುಂಬೈ, ಮದ್ರಾಸುಗಳಲ್ಲಿ ವಿಶ್ವವಿದ್ಯಾಲಯಗಳು ಆರಂಭವಾದವು. ಬ್ರಿಟಿಷರು ತಮ್ಮಂತೆ ಆಲೋಚಿಸುವ, ತಮಗೆ ವಿಧೇಯವಾಗಿರುವ ವರ್ಗವನ್ನು ಹುಟ್ಟುಹಾಕುವ ದಿಸೆಯಲ್ಲಿ ಉನ್ನ್ತ ಶಿಷಣವನ್ನು ಇಂಗ್ಲಿಷ್ ನಲ್ಲಿ ನೀಡಲು ನಿರ್ಧರಿಸಿದರು. ಅಂದರೆ ಚರ್ಮ ಕಪ್ಪಾಗಿದ್ದರೂ ಇಂಗ್ಲಿಷ್ ನಲ್ಲೇ ನಗುವ, ವರ್ತಿಸುವ ಜನರು ಅವರಿಗೆ ಬೇಕಾಗಿದ್ದರು. ಅವರನ್ನು ಬೆಂಬಲಿಸುವ ಬೌದ್ಧಿಕವರ್ಗದ ಸೃಷ್ಟಿ ವಿಶ್ವವಿದ್ಯಾಲಯಗಳ ಹಿಂದಿನ ಉದ್ದೇಶವಾಗಿತ್ತು. ಅದರಲ್ಲಿ ಅವ್ರು ಹಿಂದೆ ಬೀಳಲಿಲ್ಲ. ಬ್ರಿಟಿಷರು ಈ ದೇಶವನ್ನು ಬಿಟ್ಟರೂ ವಿಧೇಯತೆಯನ್ನು ನಾವು ಬಿಟ್ಟುಕೊಡಲಿಲ್ಲ. ಅವರು ಹಾಕಿದ ಯಾವುದೇ ಚೌಕಟ್ಟನ್ನು ಮುರಿಯುವುದು ಅಷ್ಟೇನು ಸುಲಭದ ವಿಚಾರವಾಗಿಲ್ಲ. ಇಂದಿಗೂ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಷಣವನ್ನು ಅಧೀಕೃತವಾಗಿ ಇಂಗ್ಲೀಷ್ ಮಾಧ್ಯಮದಲ್ಲೇ ನೀಡಲಾಗುತ್ತಿದೆ. ಕನ್ನಡದಲ್ಲಿ ಓದಲು, ಬರೆಯಲು ಅನುಮತಿಯನ್ನು ನೀಡಲಾಗಿದೆ ಅಷ್ಟೆ. ವಿಪರ್ಯಾಸವೆಂದರೆ ಚರಿತ್ರೆ, ಸಮಾಜ ಶಾಸ್ತ್ರದಂತಹ ವಿಭಾಗಗಳಲ್ಲಿ ನೂರಕ್ಕೆ ತ್ತೊಂಬತ್ತು ಮಂದಿ ವಿದ್ಯಾರ್ಥಿಗಳು ಕನ್ನಡದಲ್ಲಿ ಓದಿ ಕನ್ನಡದಲ್ಲೇ ಉತ್ತರಿಸುತ್ತಿರುತ್ತಾರೆ. ಕನ್ನಡದಲ್ಲಿ ಉತ್ತಮ ಪುಸ್ತಕಗಳಿಲ್ಲ ಎಂಬ ಅವರ ದೂರು ನರಳಾಟವಾಗಿ ಸದಾ ಕಾಲಕ್ಕೂ ಕೇಳಿಬರುತ್ತಿದೆ.
ಬ್ರಿಟಿಷರಿಂದ ಪರಿಚಯವಾದ ಸಾಹಿತ್ಯ ಮತ್ತು ಸಮಾಜ ವಿಜ್ಣಾನ ಈ ಹೊತ್ತಿಗೆ ಬೃಹತ್ತಾಗಿ ಬೆಳೆದು ತನ್ನದೇ ಆದ ಸ್ವತಂತ್ರವಾದ ಅಸ್ತಿತ್ವವನ್ನು ಪಡೆದುಕೊಳ್ಳಲೇಬೇಕಾಗಿತ್ತು. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾನವಿಕ ವಿಷಯಗಳ ಕುರಿತ ಚರ್ಚೆಯೊಂದನ್ನು ಏರ್ಪಡಿಸಲಾಗಿತ್ತು. ಅಲ್ಲಿ ಸೇರಿದ್ದ ವಿದ್ವತ್ ಮಿತ್ರರೆಲ್ಲರಿಗೂ ಸ್ವಷ್ಟವಾಗಿ ಕಂಡುಬಂದ ಅಂಶವೆಂದರೆ ಪ್ರತಿ ವಿಷಯದ ಹಿನ್ನೆಲೆಯನ್ನು ಹುಡುಕುತ್ತಾ ಹೋದರೆ ಮಾನವಿಕ ವಿಜಾನಗಳಲ್ಲಿ ನಾವು ಅಷ್ಟೇನೂ ಬೆಳವಣಿಗೆಗಳನ್ನು ಸಾಧಿಸಿಲ್ಲ. ಬ್ರಿಟಿಷರು ಹಾಕಿಕೊಟ್ಟ ಜಾಡಿನಲ್ಲೇ ಚಾಚೂ ತಪ್ಪದೆ ಮುಂದುವರಿಯುತ್ತಿದ್ದೇವೆ.
ಕನ್ನಡ ಅಂದರೆ ಸ್ಥಳೀಯ ಭಾಷೆಯಲ್ಲಿ ನಡೆದಷ್ಟು ಸಂಶೋಧನೆ ಹಾಗೂ ಬರವಣಿಗೆಗಳು ಮಾನವಿಕ ವಿಷಯಗಳಲ್ಲಿ ನಡೆಯಲೇ ಇಲ್ಲ. ಕರ್ನಾಟಕದ ಸಂದರ್ಭದಲ್ಲಿ ಸಾಹಿತ್ಯದ ವಿದ್ಯಾರ್ಥಿಗಲಿಗೆ ಕನ್ನಡ ತಮ್ಮ ಭಾಷೆಯೂ ಆಗಿರುವ ಕನ್ನಡ ವಿಭಾಗದ ವಿದ್ಯಾರ್ಥಿಗಳು ಉನ್ನತ ಶಿಷಣದ ನಂತರವೂ ಸಂಶೋಧನೆ ಅಥವಾ ಸಾಹಿತ್ಯ ಬರವಣಿಗೆಯಲ್ಲಿ ತೊಡಗಿಕೊಳ್ಳುತ್ತಾರೆ. ಅದೇ ಚರಿತ್ರೆ ಅಥವಾ ರಾಜ್ಯಶಾಸ್ತ್ರವನ್ನು ಉದಾಹರಣೆಯಾಗೆ ತೆಗೆದುಕೊಂಡರೆ ವಿದ್ಯಾರ್ಥಿಯೊಬ್ಬ ಎಂ.ಎ ಮಾಡಲು ಬಂದರೆ ಮೊದಲಿಗೆ ಎದುರಾಗುವ ಸಮಸ್ಯೆ ಭಾಷಾ ಮಾಧ್ಯಮ. ಅವನಿಗೆ ಆಪ್ಯಾಯಮಾನವಾದ ಕನ್ನಡದಲ್ಲಿ ಪುಸ್ತಕಗಳ ಕೊರತೆಯಿಂದಾಗಿ ಕೈಗೆ ಎಟುಕಬಹುದಾದ ಕನ್ನಡದ ಕೆಲವೇ ಪುಸ್ತಕಗಳನ್ನು ಆಧರಿಸುತ್ತಾನೆ. ಉತ್ತಮ ಪರಾಮರ್ಶನ ಕೃತಿಗಳು ಇಂಗ್ಲಿಷ್ ನಲ್ಲಿ ಇರುವ ಕಾರಣಕ್ಕೆ ಅರ್ಧದಷ್ಟು ವಿದ್ಯಾರ್ಥಿಗಳು ಓದುವ ಪ್ರಯತ್ನವನ್ನೂ ಮಾಡದೇ ಉಳಿಯುತ್ತಾರೆ. ಆನಂತರ ಸಂಶೋಧನಾ ಬರವನಿಗೆ ಇಂಗ್ಲಿಷ್ ನಲ್ಲಿ ಮಾಡುವಂತೆ ಒತ್ತಾಯವಿರುತ್ತದೆ. ವಿದ್ಯಾರ್ಥಿಗಳ ಅರ್ಧಭಾಗದ ಶ್ರಮ ತಮ್ಮದಲ್ಲದ ಭಾಷೆಯಲ್ಲಿ ವಿಚಾರವನ್ನು ಆಲೋಚಿಸುವ, ಬರೆಯುವ ಸಾಹಸದಲ್ಲೇ ಕಳೆದು ಹೋಗುತ್ತದೆ. ಈ ಸಮಸ್ಯೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮಾತ್ರವಲ್ಲ, ಇಂಗ್ಲಿಷ್ ಮಾಧ್ಯಮದಲ್ಲಿ ಓದಿಬಂದವರನ್ನೂ ಹಿಂಡುತ್ತಿದೆ.
ಆಯಾ ಭಾಷಾ ಪ್ರಯೋಗಗಳು ಆಯಾ ಸಮಜದ ಬದುಕಿನ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುತ್ತವೆ. ಆದ್ದರಿಂದ ನಮ್ಮ ಸಮಾಜದ ವಿಚಾರವನ್ನು ಮತ್ತೊಬ್ಬರ ನಾಲಗೆಯಲ್ಲಿ ಹೇಳಿಸುವುದು, ಅಥವಾ ನಮ್ಮನ್ನು ಒಗ್ಗಿಸುವ ಒಗ್ಗಿಕೊಳ್ಳುವ ಹರಸಾಹಸವನ್ನು ಮಾದುತ್ತಾ ಬಂದಿದ್ದೇವೆ. ಇಷ್ಟೆಲ್ಲಾ ಮಾಡಿ ನಮ್ಮ ವಿಚಾರವನ್ನು ಇಂಗ್ಲಿಷ್ ನವರ ಮುಂದಿಟ್ಟಾಗ ಮಾಹಿತಿಯನ್ನು ತೆಗೆದುಕೊಂಡು ಹೋಗಿರುತ್ತೇವೆಯೋ ಹೊರತು ಹೊಸದೊಂದು ಸಿದ್ಧಾಂತವನ್ನೋ ಚಿಂತನೆಯನ್ನೋ ಕಟ್ಟಿಕೊಡಲು ಸೋಲುತ್ತೇವೆ. ಇಷ್ಟಾಗಿಯೂ ಇಂಗ್ಲಿಷ್ ನಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಈ ಪ್ರೋತ್ಸಾಹ ಅಥವಾ ಒತ್ತಡ ಬೇರೆ ಬೇರೆ ಆಯಾಮಗಳಲ್ಲಿ ನಡೆದಿದೆ. ಅಧ್ಯಾಪಕನೊಬ್ಬ ಮುಂಬಡ್ತಿ ಪಡೆಯಬೇಕಾದರೆ ತನ್ನ ಸಂಶೋಧನೆಗಳು ಅಂತರರಾಷ್ಟ್ರೀಯ ಪ್ರಕಟಣಿಯಾಗಿದ್ದಲ್ಲಿ ಅತಿಹೆಚ್ಚು ಅಂಕಗಳನ್ನು ನೀಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಬರೆದ ಬರಹವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಕಟ ಮಾಡಲು ಸಾಧ್ಯವಿಲ್ಲದಿರುವುದರಿಂದ ಮೊದಲ ಹಂತದಲ್ಲಿ ಕನ್ನಡದಲ್ಲಿ ಬರೆಯುವ ವಿದ್ವಾಂಸರಿಗೆ ತಣ್ಣೀರು ಎರಚಿದಂತಾಗುತ್ತದೆ. ಈ ಮಾನದಂಡ ಯಾರದು ನೀತಿ ನಿಯಮಗಳನ್ನು ರೂಪಿಸಿದ್ದು ಯಾರು?
ಕನ್ನಡ ನಾಡಿನ ದೊಡ್ಡ ಸಂಶೋಧಕರು ಅಂತರರಾಷ್ಟ್ರೀಯ ಮನ್ನ್ಣೆಯನ್ನ್ ಪಡೆದವರು ಷ. ಷೆಟ್ಟರು ಅವರು. ಅವರ ಹಲವು ಮಹತ್ವದ ಸಂಶೋಧನೆಗಳು 'ಇನ್ ವೈಟಿಂಗ್ ಡೆತ್', ಪರ್ಸೀವಿಂಗ್ ಡೆತ್' ,ಇತ್ಯಾದಿ ಇಂಗ್ಲಿಷ್ ನಲ್ಲಿ ಪ್ರಕಟಗೊಂಡಿವೆ. ಅಂತರರಾಷ್ಟ್ರೀಯ ಮಟ್ಟದ ವಿದ್ವಾಂಸರ ಮನ್ನಣೆಯನ್ನೂ ಪಡೆದಿವೆ. ಆದರೆ ಅವರು ಬರೆದ 'ಷಂಗಂ ತಮಿಳಗಂ' ಕೃತಿ ಅವರಿಗೆ ತಂದುಕೊಟ್ಟ ಗೌರವವನ್ನು ಇಂಗ್ಲಿಷ್ ಕೃತಿಗಳು ತಂದುಕೊಟ್ಟಿರಲಿಲ್ಲ. ಕನ್ನಡ ಭಾಷೆ ಮತ್ತು ಲಿಪಿಯ ಪ್ರಾಚೀನತೆ ಕುರಿತು ಮಾತನಾಡುವ ಈ ಕೃತಿ ತಮ್ಮ ನೆಲದಲ್ಲೂ ಮತ್ತು ಹೊರಗೂ ಮೆಚ್ಚುಗೆಯನ್ನು ಪಡೆಯಿತು. ಅದಾದ ನಂತರ ಹಲವು ವರ್ಷಗಳ ಅವರ ಸಂಶೋಧನೆಯ ಫಲವಾಗಿ ಮೂಡಿಬಂದ ಬೃಹತ್ ಕೃತಿ ಹಳಗನ್ನಡ. ಅದನ್ನು ಇಂಗ್ಲಿಷ್ ನಲ್ಲಿ ಬರೆಯುವುದು ಅವ್ರಿಗೆ ತ್ರಾಸವೇನೂ ಆಗುತ್ತಿರಲಿಲ್ಲ. ಕನ್ನಡದಲ್ಲಿ ಅದರ ಬರವಣಿಗೆ ಸುಲಲಿತವಾಗಿ ಸಾಗಿದೆ. ಕರ್ನಾಟಕ ಚರಿತ್ರೆಗೊಂದು ಬೆರಳೆಣಿಕೆಯ ವಿದ್ವಾಂಸರು ಮಾತ್ರವೇ ಸಮಾಜ ವಿಜಾನದಲ್ಲಿ ಮೂಡಿಬಂದಿದ್ದಾರೆ.
ಈವರೆಗಿನ ಸಮಾಜಶಾಸ್ತ್ರ ಸಂಶೋಧನೆಗಳನ್ನು ಗಮನಿಸಿದರೆ ಅವೆಲ್ಲಾ ಫೋರ್ಡ್ ಫೌಂಡೇಷನ್ ಅಥವಾ ಅಂತಹ ಬೃಹತ್ ಪ್ರಾಯೋಜಕರಿಗಾಗಿ ನಡೆಸಿದ ಸಂಶೋಧನೆಗಳಾಗಿವೆ. ಅಂದರೆ ಈ ಸಂಶೋಧನೆಗಳ ಮೂಲಕ ಸಮಾಜವನ್ನು ನಿರ್ದೇಶಿಸುವ ಪ್ರಯತ್ನ ಈ ಸಂಸ್ಥೆಗಳಿಗಿರುತ್ತದೆಂಬುದನ್ನು ನಿರಾಕರಿಸಲಾಗದು. ನಮ್ಮ ಸಮಾಜದ ಒಳಗೆ ಚಿಟುಕು ಮುಳ್ಳಾಗಿ ಆಡುವ ನೂರಾರು ಯೋಜನೆಗಳನ್ನು ನಾವು ಗುಮಾನಿಯಿಂದ ನೋಡಬೇಕಾಗಿದೆ. ನಾವು ಕಲೆಹಾಕುವ ಮಾಹಿತಿ ಅದು ನಮಗಾಗಿ ಮಾತ್ರವೇ ಆಗಿ ಉಳಿದಿರುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಜಾಗತಿಕ ಮಾರುಕಟ್ಟೆ ಅದರ ಲಾಭ ಪಡೆಯಲು ಕಾಯುತ್ತಿರುತ್ತದೆ ಅಥವಾ ನಮ್ಮನ್ನು ಅವರ ಅಗತ್ಯಗಲಿಗಾಗಿ ಬಳಸಿಕೊಂಡಿರುತ್ತದೆ. ಭಾರತದ ಸರ್ಕಾರೇತರ ಸಂಸ್ಥೆಗಳಿಗೆ ಹರಿದು ಬರುವ ಹಣದ ಬಗ್ಗೆ ಇಂತಹ ಅನುಮಾನ, ಎಚ್ಚರ ಪ್ರಾಜ್ಝರ ಗಮನಕ್ಕೆ ಬಂದ ವಿಚಾರವೇ ಆಗಿದೆ. ಹಾಗೆಯೇ ಸಂಶೋಧನೆಗಳಿಗೆ ಬರುವ ವಿದೇಶಿ ಹಣದ ಹಿಂದೆ ಖಚಿತವಾದ ಉದ್ದೇಶವಿರುತ್ತದೆ. ಇಂತಹ ಭಯ ಭಾರತಕ್ಕೆ ಮಾತ್ರವಲ್ಲ, ಭಾರತದಂತಹ ದೇಶದವರನ್ನೆಲ್ಲಾ ಆವರಿಸಿದೆ. ಆಫ್ರಿಕದ ಜನತೆ ತಮ್ಮ ಬಗೆಗೆ ಕೀಳಾಗಿ ಕಂಡ ವಿಷಯಗಳನ್ನು ಅವರು ಓದಿ ಬರೆಯುವಾಗ ಅವರ ಕರುಳು ಚುರುಗುಟ್ಟುತ್ತದೆ.
ನಾವು ಬ್ರಿಟಿಷರು ಹಾಕಿಕೊಟ್ಟ ಜಾಡಿನಲ್ಲಿ ಹೋಗುತ್ತಾ ಇಂಗ್ಲಿಷ್ ಹೊರೆಯನ್ನು ಮಾತ್ರ ಹೊತ್ತಿಲ್ಲ. ವಿಚಾರಗಳಿಗೂ ಅವರೇ ಅದಿದೈವವಾಗಿ ಕಾಣುತ್ತಾರೆ. ಯಾವುದನ್ನು ಅವರು ಚರಿತ್ರೆ ಎಂದು ಹೇಳಿಕೊಟ್ಟರೋ, ಅಥವಾ ಅರ್ಥಶಾಸ್ತ್ರವೆಂದು ಕರೆದರೋ, ಸಮಾಜಶಾಸ್ತ್ರವೆಂದು ಬೋಧಿಸಿದರೋ ಚಾಚೂ ತಪ್ಪದೆ ಅದೇ ಬಟ್ಟೆಯಲ್ಲಿ ಸಾಗುತ್ತಿದ್ದೇವೆ. ಇಂಗ್ಲಿಷ್ ಭಾಷೆಯಲ್ಲಿ ಮಾತ್ರವಲ್ಲ, ಇಂಗ್ಲಿಷ್ ಪರಿಭಾಷೆಯಲ್ಲೇ ನಮ್ಮ ಸಮಾಜವನ್ನು ಅರ್ಥೈಸುತ್ತಿದ್ದೇವೆ. ಭಾರತದ ಪ್ರಾಚೀನ ರಾಜರನ್ನು ಕಿಂಗ್ ಎಂತಲೂ ರಾಣಿಯರನೂ ಕ್ವೀನ್ ಎಂತಲೂ ಕರೆಯಲಾಗಿದೆ. ಭಾರತದಲ್ಲಿ ರಾಣಿಯರಿಗೆ ಎಷ್ಟು ಮಾತ್ರ ಅಧಿಕಾರವಿತ್ತೆಂದು ನಮಗೆ ತಿಳಿದೇ ಇದೆ. ಅವಳು ರಾಜನ ಹೆಂಡತಿಯಾಗಿದ್ದಳೇ ಹೊರತು ಅವ್ಳೇ ಅಧಿಕಾರ ನಿರ್ವಹಿಸುವ ಅವಕಾಶವಿರಲಿಲ್ಲ.
ಭಾರತದಲ್ಲಿಂದು ೫೭೩ ವಿಶ್ವವಿದ್ಯಾಲಯಾಗಲಿದ್ದೂ, ಸಮಾಜ ವಿಜಾನಗಳಲ್ಲಿ ಬರವಣಿಗೆಗಳೇಕೆ ಸೊರಗಿವೆ? ಪ್ರತಿ ವಿಚಾರವನ್ನು ಪಶ್ಚಿಮದ ಆಲೋಚನಾ ಕ್ರಮದಿಂದಲೇ ಆರಂಭಿಸುತ್ತಿದ್ದೇವೆ. ಪೂರ್ವದ ಚಿಂತನೆಗಳು ಏನು ಎಂದು ತಿಳಿಯುವ ಹೊಸದೊಂದು ಕಣ್ಣೋಟವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮದೇ ನೆಲದ ಜನಪಕವನ್ನು ಅರಿಯುವಾಗಲೂ ಫೋಕ್ಲೋರ್ ನಲ್ಲಿ ಬ್ಳಸುವ ಮಾದರಿಗಳನ್ನು ಅಳವಡಿಸಿಕೊಳ್ಳುತ್ತೇವೆ. ನಮ್ಮದೇ ಆದ ಆಲೋಚನಾ ಕ್ರಮವನ್ನು ಕಂಡುಕೊಳ್ಳಲಾಗದ್ದೂ ಸಹ ನಮ್ಮ ಕೀಳರಿವೆಗೆ ಕಾರಣವಾಗಿದೆ. ಕನ್ನಡ ಸಾಹಿತ್ಯವನ್ನೇ ಓದುವವರು ನಿಸ್ಸಂಕೋಚವಾಗಿ ಕನ್ನ/ದದಲ್ಲಿ ಸಂಶೋಧನೆಯನ್ನು ನಡೆಸುವುದರಿಂದ ಅಲ್ಲಿ ಬರವಣಿಗೆಗಳು ನಿರಂತರವಾಗಿವೆ ಮತ್ತು ಸಮಾಜ ವಿಜಾನಗಳ ಬರವಣಿಗೆಗಳನ್ನೂ ಮಾಡುತ್ತಾ ಬಂದಿದ್ದಾರೆ.
ಸಮಾಜ ವಿಜಾನಗಳ ಸಂಶೋಧನೆಗಳಿರಲಿ ನಾವೆಲ್ಲರೂ ಓದುತ್ತಾ ಬೋಧಿಸುತ್ತಾ ಬಂದ ವಿಷಯಗಳ ಕಡೆಯೂ ಗಮನ ಹರಿಸಬೇಕಾಗಿದೆ. ಖಾಸಗಿ ವಿಶ್ವವಿದ್ಯಾಲಯಗಳು, ವಿದೇಶಿ ವಿದ್ಯಾಲಯಗಳು ಆರಂಭವಾಗಿರುವ ಈ ಕಾಲದಲ್ಲಿ ಬೋದನಾ ವಿಷಯ ಎಷ್ಟರ ಮಟ್ಟಿಗೆ ನಮ್ಮದಾಗಿ ಉಳಿಯಬಲ್ಲದು ಕಾದು ನೋಡಬೇಕಾದಗಿದೆ.ಯೊರೋಪಿನ ಚರಿತ್ರೆಗೆ ಗಮನಕೊಟ್ಟಂತೆ ಏಷ್ಯಾದ ಚರಿತ್ರೆಯನ್ನು ನಾವು ಬೋಧಿಸಲಿಲ್ಲ. ಅಮೆರಿಕದ ಚರಿತ್ರೆಗೆ ಜಾಗ ಕೊಟ್ಟಂತೆ ಆಫ್ರಿಕದ ಚರಿತ್ರೆ ನಮಗೆ ಲಾಭಕರವಾಗಿ ಕಾಣಲಿಲ್ಲ. ಭವಿಷ್ಯದಲ್ಲಿ ಸಮಾಜ ಅಧ್ಯಯನಗಳೂ ಮಾರುಕಟ್ಟೆಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಒತ್ತಡವನ್ನು ಹೊರಲೇ ಬೇಕಾಗಿರುವುದರಿಂದ ಭವಿಷ್ಯದ ಬೌದ್ಧಿಕ ಗುಲಾಮಗಿರಿಯ ಕೋಳ ಹಾಕಿಸಿಕೊಳ್ಳಲೂ ಎಲ್ಲ ರೀತಿಯಲ್ಲೂ ಸಿದ್ಧತೆ ಹದವಾಗಿ ನಡೆದಿದೆ. ಈ ಎಲ್ಲಕ್ಕೂ ಭಾಷಾ ಮಾಧ್ಯಮದ ನಿರ್ಣಯ ಸಹಜವಾಗಿ ಪೂರಕವಾಗಿದೆ.
ನೂರು ದಿನಕ್ಕೆ ಹತ್ತು ಆದ್ಯತೆ
ಕೇವಲ ಮೂರು ದಿನ ಹಳೆಯದಾದ ಸರ್ಕಾರಕ್ಕೆ 'ನೂರು ದಿನಗಳ ದಿಕ್ಸೂಚಿ' ನೀಡಿರುವ ಪ್ರಧಾನಿ ನರೇಂದ್ರ ಮೋದಿ, ೧೦ ಅಂಶಗಳ ಕಾರ್ಯಸೂಚಿ ಸಿದ್ಧಪದಿಸಿದ್ದಾರೆ. ಜಡವಾಗಿರುವ ಆಡ್ಳಿತ ವ್ಯವಸ್ಥೆ ಚುರುಕುಗೊಳಿಸುಲು ನಿಗದಿತ ಅವಧಿಯೊಳಗೆ ಗುರಿ ಮುಟ್ಟುವಂತೆ ಸಂಪುಟ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ, ಸರ್ಕಾರದ ಹತ್ತು ಅಂಶಗಳ ಕಾರ್ಯಸೂಚಿಯನ್ನು ಸಹೋದ್ಯೋಗಿಗಳಿಗೆ ವಿವರಿಸಿದರು. ಎಲ್ಲ ಸಚಿವರು ಇದೇ ಹಾದಿ ತುಳಿದು ಉತ್ತವು ಆಡಳಿತಕ್ಕೆ ಒತ್ತು ನೀಡುವಂತೆ ಸಲಹೆ ಮಾಡಿದರು. ಬಂಡವಾಳ ಹೂಡಿಕೆ ಹೆಚ್ಚಳ, ನಿಗದಿತ ಕಾಲಮಿತಿಯಲ್ಲಿ ಮೂಲ ಸೌಲಭ್ಯ ಯೋಜನೆಗಳ ಪೂರ್ಣಗೋಳಿಸುವಿಕೆ ಮತ್ತು ಸೌಲಭ್ಯ ಯೋಜನೆಗಳ ಪೂರ್ಣಗೊಳಿಸುವಿಕೆ ಮತ್ತು ದೇಶದ ಪ್ರಗತಿಗೆ ನೈಸರ್ಗಿಕ ಸಂಪನ್ಮೂಲದ ಬಳಕೆ ಸೇರಿದಂತೆ ಅನೇಕ ಮಹತ್ವದ ಅಂಶಗಳು ಮೋದಿ ಅವರ ನೂರು ದಿನಗಳ ಕಾರ್ಯಸೂಚಿಯಲ್ಲಿವೆ.
ಪ್ರಧಾನಿ ಕಾರ್ಯಸೂಚಿಗಳು
೧. ಪರಿಣಾಮದ ಬಗ್ಗೆ ತಲೆಕೆಡಿಸಿಕೊಳ್ಳದೇ ಕೆಲಸ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಲ್ಲಿ ಆತ್ಮವಿಶ್ವಾಸ ತುಂಬಿ. ೨. ನವನವೀನ ಪರಿಕಲ್ಪನೆಗಳಿಗೆ ಮನ್ನಣೆ, ನಾಗರಿಕ ಸೇವಾ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ. ೩. ಶಿಷಣ, ಆರೋಗ್ಯ, ಜಲ, ರಸ್ತೆ, ಇಂಧನ ಷೇತ್ರಗಳ ಅಭಿವೃದ್ಧಿಗೆ ಆದ್ಯತೆ. ೪. ಆಡಳಿತದಲ್ಲಿ ಪಾರದರ್ಶಕತೆ, ಟೆಂಡರ್ ಸೇರಿದಂತೆ ಸರ್ಕಾರದ ಇತರ ಕೆಲಸಲಳ ಜಾರಿಗೆ ಇ-ಹರಾಜು. ೫. ಯೋಜನೆಗಳ ಅನುಶ್ಃ
Start a discussion with Shobha bk
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Shobha bk. What you say here will be public for others to see.