ಗಿನ್ನೆಸ್ ದಾಖಲೆ ಬರೆದ ಈಜು ವೀರ- ಗೋಪಾಲ ಖಾರ್ವಿ ಕೋಡಿ ಕನ್ನಾನದ ನಾಗೇಶ ಖಾರ್ವಿ ಮತ್ತು ರಾಧಾ ಖಾರ್ವಿ ದಂಪತಿಗಳ ಪುತ್ರನಾಗಿ ಜನಿಸಿದ ಗೋಪಾಲ ಖಾರ್ವಿ ಬಾಲ್ಯದಲ್ಲಿಯೇ ಈಜಿನ ಬಗ್ಗೆ ಒಲವನ್ನು ಹೊಂದಿದ್ದರು. ಅದರೆ ಕಿತ್ತು ತಿನ್ನುವ ಬಡತನದಿಂದಾಗಿ ಶಾಲೆಗೆ ತಿಲಾಂಜಲಿ ಇಟ್ಟು ಮೀನುಗಾರಿಕೆ ವೃತ್ತಿಯಲ್ಲಿ ತೊಡಗಗಿದರು. ಮುಂಜಾನೆ ಮೂರು ಗಂಟೆಗಗೆಎ ಎದ್ದು ಮೀನು ಹಿಡಿತಲು ಹೋದರೆ.ಹಗಲಲ್ಲಿ ಗೊಡ್ಸ್ ಟೆಂಪೋ ಓಡಿಸಿ ಜೀವನ ಸಾಗಿಸುತ್ತದ್ದರು. ಆದರೆ ಅವರಲ್ಲಿ ಸಾಧಿಸಬೇಕೆಂಬ ಛಲ ಆಚಳವಾಗಿ ಮೂಡಿತ್ತು. ಅವರ ಛಲಕ್ಕೆತೊಂದರೆಯಾಗಿ ಪರಿಣಮಿಸಿದ್ದು ಹಣ. ಬಡಕುಡುಂಬದ ಗೋಪಾಲ ಖಾರ್ವಿಯವರಿಗೆ ದಾಖಲೆಯನ್ನು ಮಾಡಬೇಕೆಂದು ಛಲವಿದ್ದರೂ ಅದಕ್ಕಾಗಿ ೧೦.೫೦ ಲಕ್ಷ ರೂ. ಹೋಂದಿಸಬೇಕಾದ ಅನಿವಾರ್ಯತೆ ಎದುರಾಯಿತು.

ಖಾರ್ವಿಯವರ ಗಿನ್ನೆಸ್  ದಾಖಲೆಯ ಪರಿ.

ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಮತ್ತೆ ತನ್ನ ಕೈ-ಕಾಲುಗಳನ್ನು ಕಬ್ಬಿಣದ ಸಂಕೋಲೆಯಲ್ಲಿ ಬಂಧಿಸಿ ಕೈಯನ್ನು ಬೆನ್ನಿನ ಹಿಂಭಾಗಕ್ಕೆ ಕಟ್ಟಿ ಕೇವಲ ಎದೆ ಮತ್ತು ಸೊಂಟದ ಸಹಾಯದಿಂದ ಸೈಂಟ್ ಮೀರಿಸ್ ದ್ದೀಪದಿಂದ ಮಲ್ಪೆ ಬೀಚ್ನವರೆಗೆ ೩.೭ ಕಿ.ಮೀ ಈಜಿ ಹೊಸ ಗಿನ್ನೆಸ್ ದಾಳಲೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕೈ ಕಾಲುಗಳನ್ನು ಕಬ್ಬಿಣದ ಸಂಕೋಲೆಯಲ್ಲಿ ಬಬಿಗಿದು ಬೆನ್ನಿನ ಹಿಂಭಾಂಗಕ್ಕೆ ಕಟ್ಟಿ ಬೀಗ ಜಡಿದು ಬೆಳಗ್ಗೆ ೭.೩೭ರ ವೇಳೆಗೆ ಸೈಂಟ್ ಮೀರಿಸ್ ದ್ವೀಪದಿಂದ ಭೋರ್ಗರೆವ ಕಡಲಿಗೆ ಧುಮುಕಿದ ಖಾರ್ವಿಯವರು ಮಲ್ಪೆ ಬೀಚ್ವರೆಗೆ ೩.೦೭ ಕಿ ಮೀ. ದೊರವನ್ನು ಕೇವಲ ೨ ಗಂಟೆ ೪೩ ನಿಮಿಷ ೩೫ ಸೆಕೆಂಡುಗಳಲ್ಲಿ ಕ್ರಮಿಸಿ ಗಿನ್ನೆಸ್ ಸಾಖಲೆ ಬುಕೆನಲ್ಲಿ ತನ್ನ ಹೆಸರನ್ನು ದಾಖಲಿಸಿಯೇ ಬಿಟ್ಟರು. ಇವರ ಈ ಸಾಧನೆಯನ್ನು ಈವರೆಗೆ ಯಾರೂ ಗಿನ್ನೆಸ್ ದಾಖಲೆ ಮಾಡಿಲ್ಲ ಎನ್ನುವುದು ವಿಶೇಷ . ಈಹಿಂದೆಯೀ ಕೈ ಕಾಲುಗಳನ್ನು ಸಂಕೋಲೆಯಿಂದ ಬಿಗಿದು ಸೈಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಬೀಚ್ವರೆಗೆ ೩ ಗಂಡೆ ೨೬ ನಿಮಿಷ ೪೦ ಸೆಕೆಂಡುಗಳಲ್ಲಿ ಈಜಿ ಲಿಮ್ಕಾ ದಾಖಲೆಯನ್ನು ಮಾಡಿದ್ದರು. ಅಲ್ಲದೆ ೨೦೦೩ ಹಂಗಾರಕಟ್ಟೆ ಸೈಂಟೆ ಮೀರಸೆ ದ್ವೀಪ -ಕಟಪಾಡಿ ಮಟ್ಟುವರೆಗೆ ೪ಕಿ.ಮೀ ದೂರವನ್ನು ನಿರಂತರವಾಗಿ ಫ್ರೀಸ್ಟೈಲಲ್ಲಿ ಕೇವಲ ಆರು ಗಂಟೆಯಲ್ಲಿ ಹಾಗೂ ೨೦೦೪ ರಲ್ಲಿ ಗಂಗೋಳ್ಳಿಯಿಂದ ಮಲ್ಪೆಯವರೆಗೆ ೮೦ ಕಿ.ಮೀ ದೂರವನ್ನು ೧೧ ಗಂಟೆಯಲ್ಲಿ ಕ್ರಮೀನಿ ಸಾಧನೆಗೈದಿದ್ದಾರೆ.