ಅಕ್ಕಮಹಾದೇವಿ ಉಡುತಡಿಯಲ್ಲಿ ನೀ ಹುಟ್ಟಿ ಬಂದೆ. ಶಿವಶರಣೆಯಾಗಿ ನೀ ಬೆಳೆದು ನಿಂದೆ. ಚೆನ್ನಮಲ್ಲಿಕಾರ್ಜುನನೇ ಗಂಡನೆಂದು ಅರುಹಿ, ಇಹದ ಗಂಡನ ತೊರೆದೆ ಕೇಶದ ಆಸರೆಯ ಬಯಸಿ, ಅರಿವೆಯ ಆಸರೆಯ ತೊರೆದೆ. ಶರಣ ಸಂಗದಲಿ ನೀ ಮಿಂದು, ಜ್ಞಾನ ಜ್ಯೋತಿಯಾಗಿ ಹೊರಬಂದೆ ಲಿಂಗವನು ಅಂಗದಲಿರಿಸಿ ನೀ ಲಿಂಗಾಂಗವಾದೆ. ಚೆನ್ನಮಲ್ಲಿಕಾರ್ಜುನನಲಿ ಒಂದಾದ ನಿನಗೆ ನಮೋ ನಮೋ ಎಂದೆ.


ಶಾರದಾಮಣಿದೇವಿ ಶ್ರೀ ಶಾರದಾಮಾತೆ, ನೀನಾದೆ ಆದರ್ಶದೇವತೆ ಪರಮಹಂಸರ ಜ್ಞಾನ ಸಂಗಾತೆ ಪತಿಯ ಸೇವೆಯ ಮಾಡಿ ನೀ ಪಡೆದೆ ಧನ್ಯತೆ ಭಾರತದ ಸ್ತ್ರೀಯರಿಗೆ ನೀತಂದೆ ಘನತೆ ದೀನದಲಿತರಿಗೆ ಆಶ್ರಯದಾತೆ ಆದರ್ಶ ಜೀವನದ ಸಾರ್ಥಕತೆ ಜಗ ಕಂಡುದು ನಿನ್ನಲ್ಲಿ ಮಾತೆಯ ಮಮತೆ ಪರಮಹಂಸರ ಸಂದೇಶವ ಜಗಕೆ ಸಾರುತೆ ನೀನಾದೆ ನಮಗೆಲ್ಲರಿಗೆ ಮಹಾಮಾತೆ