ನನ್ನ ಹೆಸರು ಪೂಜಿತಾ. ನನಗೆ ಈಗ ಹತ್ತೊಂಬತ್ತು ವರ್ಷ. ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ನನ್ನ ತಂದೆ ಶ್ರೀ ಕೇಶವ ರೆಡ್ಡಿ ಸಿವಿಲ್ ಇಂಜಿನಿಯರ್ ಮತ್ತು ನನ್ನ ತಾಯಿ ಶ್ರೀಮತಿ ಸುರೇಖಾ ಶಿಕ್ಷಕಿ.ನಾನು ಬೆಥನಿ ಹೈಸ್ಕೂಲ್‌ನಲ್ಲಿ ಓದಿದ್ದೇನೆ ಮತ್ತು ಈಗ ನಾನು ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನನ್ನ ಬಿಬಿಎ ಪದವಿಯನ್ನು ಮಾಡುತ್ತಿದ್ದೇನೆ. ನಾನು ಸಂತೋಷದ ವ್ಯಕ್ತಿ ಮತ್ತು ನನ್ನ ಕುಟುಂಬ ಮತ್ತು ಸ್ನೇಹಿತರನ್ನು ತುಂಬಾ ಪ್ರೀತಿಸುತ್ತೇನೆ.ನನ್ನ ಜೀವನದಲ್ಲಿ ಅದ್ಭುತವಾದ ಪೋಷಕರು ಮತ್ತು ಸ್ನೇಹಿತರನ್ನು ಹೊಂದಲು ನಾನು ಆಶೀರ್ವದಿಸಿದ್ದೇನೆ. ಈಗ, ನನ್ನ ಬಗ್ಗೆ ಸ್ವಲ್ಪ...

ನನ್ನ ಕುಟುಂಬ

              ನನ್ನ  ನಗರ  ಬೆಂಗಳೂರು , ರಾಷ್ಟ್ರ  ಕರ್ನಾಟಕ  ಮತ್ತು  ದೇಶ  ಭಾರತ  ಎಂದರೆ  ನನಗೆ  ಪ್ರಾಣ . ನಾನು  ನನ್ನನು  ದೇಶಾಭಿಮಾನಿ  ಎಂದು  ಪರಿಗಣಿಸುತ್ತೇನೆ .

ನನ್ನ ಬಾಳ್ಯಾ, ದೇವರ ದಾಯೆಯಿಂದ ತುಂಬಾ ಸುಖಕರವಾಗಿತ್ತು. ನನಗೊಬ್ಬಳು ಅಕ್ಕ, ಅವಳು ನನಗಿಂತ ಎಂಟು ರ್ಷ ದೊಡ್ಡವಳು. ನನ್ನ ತಾಯಿಯ ಪೋಷಕರು ಹಾಗು ನನ್ನ ತಂದೆಯ ತಾಯಿ ನನ್ನನು ಅತ್ಯಂತ ಮುದ್ದು ಮಾಡಿ ಬೆಳೆಸಿದರು. ನನ್ನ ಅವ್ವ, ಎಂದರೆ ನನ್ನ ಅಪ್ಪನ ತಾಯಿ, ನನ್ನನು ಉದ್ಯಾನವನಕ್ಕೆ ಕರೆದುಕೊಂಡು ಹೋಗುತಿದ್ದರು, ನಾನು ಶಾಲೆಯಿಂದ ಮನೆಗೆ ಬಂದಾಗ, ನನಗೆ ಬೇಕಾದ ತಿಂಡಿಗಳನ್ನು ಮಾಡಿ, ನನ್ನನು ಸದಾ ಪುಟ್ಟಮಗುವಿನಂತೆ ನೋಡುತಿದ್ದರು. ನನ್ನ ಅಮ್ಮನ ತಂದೆ ತಾಯಿ ಅಂದೂ, ಇಂದೂ ಕೂಡ ಬಹಳ ಪ್ರೀತಿಯಿಂದ ಸಾಕುತ್ತಾರೆ. ಅವರಿಬ್ಬರೂ ಬಹಳ ಶಿಸ್ತಿನಿಂದ ಬದುಕುತ್ತಾರೆ ಹಾಗು ಅವರು ಮಾಡುವ ಊಟವಾಗಲಿ, ಅವರ ಧ್ಯಾನದ ನೀತಿ ಆಗಲಿ, ಅವರು ಆಡುವ ಮಾತಾಗಲಿ, ಎಲ್ಲದರಲ್ಲೂ ತುಂಬಾ ನಿಯಂತ್ರಣವಿರುತ್ತದೆ. ಅಪ್ಪ ಮತ್ತು ಅಮ್ಮ ಅವರ ಕೆಲಸಗಲ್ಲಲಿ ತಲ್ಲೀನರಾಗಿದ್ದರು ನನ್ನ ಮತ್ತೆ ನನ್ನ ಅಕ್ಕನ ಚಿಂತೆ ಮತ್ತೆ ಧ್ಯಾನ ಸದಾ ಮಾಡುತ್ತಿದ್ದರು. ನಮ್ಮನು ನಿರ್ಲಕ್ಷಿಸದೆ, ಎಲ್ಲಾ ಅನುಕೂಲಗಳ ಜೊತೆ ಬೆಳೆಸಿದರು. ನನ್ನ ಅಕ್ಕ ನನಗಿಂತ ಎಂಟು ವರ್ಷ ಹಿರಿಯವಳಗಿದಲ್ಲಿಂದ, ನನ್ನ ಜೊತೆ ಆಟ ಮತ್ತು ನನ್ನ ತರಲೆಗಳಲ್ಲಿ ಭಾಗಿ ಆಗುತಿರಲಿಲ್ಲ, ಆದರೆ, ನನಗೆ ಪಾಠಗಳಲ್ಲಿ ಸಹಾಯ ಮಾಡುತ್ತಿದಳು. ನಾನೇ ನನ್ನ ಮನೆಯಲ್ಲಿ, ಕುಟುಂಬದಲ್ಲಿ ಚಿಕ್ಕವಳಾಗಿದರಿಂದ, ನನ್ನನು ಎಲ್ಲರೂ ತುಂಬ ಮುದ್ದು ಮಾಡುತ್ತಾರೆ.

ನೃತ್ಯ ಮತ್ತು ಕಲೆ

               ನನ್ನ  ಅಪ್ಪ  ಅಮ್ಮ  ನನ್ನನು  ಯಾವಾಗಲು ಪ್ರೋತ್ಸಾಹಿಸಿ, ಚಿಕ್ಕಂದಿನಿಂದ ಭರತನಾಟ್ಯ, ಸಂಗೀತ, ಮತ್ತೆ ಬೇರೆ ತರಗತಿಗಳಿಗೆ ಸೇರಿಸಿದರು. ಅದರಲ್ಲಿ ನಾನು ಕೂಡ ತುಂಬಾ ಆಸೆ ತೋರಿಸಿದರಿಂದ,

ಅದನ್ನು ನಾನು ಮುಂದುವರೆಸಿದೆ. ಭರತನಾಟ್ಯ ಇಲ್ಲದ ಜೀವನವನ್ನೂ ನಾನು ಉಹಿಸಲು ಸಾಧ್ಯವಿಲ್ಲ. ನಾನು ಆರು ವರ್ಷವಿದ್ದಾಗ, ಭರತನಾಟ್ಯವನ್ನು ಕಲಿಯಲು ಪ್ರಾರಂಭಿಸಿದೆ. ನನ್ನ ಅಜ್ಜಿ ನನ್ನನು ನಾಟ್ಯಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ನಾನು ಅದರಲ್ಲಿ ಬಹಳ ಆಸಕ್ತಿ ತೋರಿಸಿ ಬೇಗ ಕಳೆಯಲು ಶುರು ಮಾಡಿದೆ. ಕೆಲವು ಸಮಯದ ನಂತರ ನಾನು ಬೇರೆ ನಾಟ್ಯಶಾಲೆಯನ್ನು(ಶ್ರೀ ದುರ್ಗಾ ಪರಮೇಶ್ವರಿ ನೃತ್ಯ ನಿಕೇತನ) ಸೇರಿಕೊಂಡೆ ಮತ್ತು ಅಲ್ಲಿನ ಸ್ಪಾರ್ಧಾತ್ಮಕ ಭಾವ, ಒಳ್ಳೆಯ ಶಿಕ್ಷಣ ಮತ್ತು ನೃತ್ಯ ಕಲಿಸುವ ಶ್ಯಲಿ ನನಗೆ ಬಹಳ ಹಿಡಿಸಿತು. ನಾನು ಆ ನಾಟ್ಯಶಾಲೆಯಲ್ಲೇ ಹತ್ತು ವರ್ಷಗಳ ಕಾಲ ಭರತನಾಟ್ಯವನ್ನು ಅಭ್ಯಾಸ ಮಾಡಿದೆ. ನರ್ತಕಿಯರಿಗೆ ಸಂಗೀತ ಗೊತ್ತಿಲದೇ ಹೋದರೆ ನಡೆಯುತ್ತದೆಯೇ? ಅದರಿಂದಾಗಿ, ನಾನು ಎಂಟು ವರ್ಷ ತುಂಬಿದಾಗ, ನಾನು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಳೆಯಲು ಪ್ರಾರಂಭಿಸಿದೆ. ನನ್ನ ಸಂಗೀತ ಶಿಕ್ಷಕಿ ಶ್ರೀಮತಿ ವಿದೂಷಿ ಸುಮಾ ಶ್ರೀನಾಥ್ ರವರು ನಮಗೆ ತುಂಬಾ ಪ್ರೀತಿಯಂದ ಸಂಗೀತವನ್ನು ಹೇಳುಕೊಟ್ಟರು. ನಾನು ಹತ್ತನೇ ತರಗತಿಗೆ ಬರುವವರೆಗೂ, ನಾನು ಅದೇ ಶಾಲೆಯಲ್ಲಿ ನೃತ್ಯ ಮತ್ತು ಸಂಗೀತವನ್ನು ಕಲಿತುಕೊಂಡೆ. ಭರತನಾಟ್ಯವನ್ನು ಪ್ರದರ್ಶಿಸಲು ನನಗೆ ತಿರುಪತಿ, ಪಾಲಕ್ಕಾಡ್,ತ್ರಿಶೂರ್,ಚೆನ್ನೈ ಮತ್ತು ಇತರ ನಗರಗಳಿಗೆ ಹೋಗಲು ಅವಕಾಶ ದೊರೆಯಿತು . ನಂತರ, ಸೌದಿ ಅರೇಬಿಯಾದ ಬಹರೇನ್ ಗೆ ಕೂಡ ಹೋಗಿ ನೃತ್ಯವನ್ನು ಪ್ರದರ್ಶಿಸಲು ಸಾಧ್ಯವಾಯಿತು. ಏವಲ್ಲ ನನಗೆ ಹೆಮ್ಮೆಯ ವಿಷಯಗಳು. ನಾಟ್ಯಶಾಲೆಗೆ ಮನೆಯಿಂದ ಪ್ರಯಾಣಿಸಲು ತುಂಬಾ ಕಷ್ಟವಾಗುತಿತ್ತು, ಅದರಿಂದ ನಾನು ಬೇರೆ ನಾಟ್ಯಶಾಲೆಯನ್ನು ಮನಸ್ಸಿಲ್ಲದೆ ಸೇರಿಕೊಂಡೆ. ಇಲ್ಲಿ, ಶ್ಯಲಿ ಬೇರೆ ಆಗಿತ್ತು, ಹೇಳಿಕೊಡುವ ವಿಧಾನ ಬೇರೆ ಆಗಿತ್ತು, ನಾವು ನಾಟ್ಯ ಮಾಡುವ ಹಾಡುಗಳು ಬದಲಾಗಿದ್ದವು. ನಿಧಾನವಾಗಿ, ನಾನು ಇದಕ್ಕೂ ಹೊಂದುಕೊಂಡು ಮುಂದುವರೆದೇ. ಎತ್ತೀಚಿಗೆ, ಈ ನಾಟ್ಯಶಾಲೆಯ ಮೂಲಕ, ನಾನು ಒಡಿಶಾ ಗೆ ಭೇಟಿ ನೀಡಿ, ನೃತ್ಯ ಪ್ರದರ್ಶನವನ್ನು ಶ್ರೀ ಜಗನ್ನಾಥ್ ಪುರಿ ದೇವರ ಸನ್ನಿಧಾನದಲ್ಲಿ ಮಾಡಿದೆ. ಈಗ ನಾನು ಸಂಗೀತವನ್ನು ಕಳೆಯಲು ನಿಲ್ಲಿಸಿದರು ಸಹ, ಸಂಗೀತವನ್ನು ಇಬ್ಬರು ಹೆಣ್ಣು ಮಕ್ಕಳಿಗೆ ಹೇಳಿಕೊಡುತಿದ್ದೇನೆ. ನಾನು ಇಂದಿಗೂ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದೇನೆ. ಹಾಗು ಇತ್ತೀಚೆಗೆ ಒಂದು ಕಲಿಕಾಕೇಂದ್ರದಲ್ಲಿ ಉಚಿತವಾಗಿ ಬಡ ಮಕ್ಕಳಿಗೆ ನಾಟ್ಯ ಮತ್ತು ಅಭಿನಯವನ್ನು ಹೇಳಿಕೊಡುತಿದ್ದೇನೆ, ಅವರು ಅನೇಕ ಸ್ಥಳಗಳಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ. ಅವರ ಶಿಕ್ಷಕಿಯಾಗಿ, ಅವರು ಗೆಲುವನ್ನು ಹೊಂದಿದರೆ, ಅದಕ್ಕಿಂತ ಹೆಚ್ಚು ಖುಷಿ ಬೇರೇನೂ ಇಲ್ಲ.


ನಾನು ಶಾಸ್ತ್ರೀಯ ಭರತನಾಟ್ಯ ನರ್ತಕಿ ಮತ್ತು ಶಾಸ್ತ್ರೀಯ ಗಾಯಕಿ.ನಾನು 13 ವರ್ಷಗಳಿಂದ ನೃತ್ಯ ಮತ್ತು ಸಂಗೀತವನ್ನು ಕಲಿಯುತ್ತಿದ್ದೇನೆ. ನನಗೆ ಸಂತೋಷ ಮತ್ತು ಗುರುತನ್ನು ನೀಡುತ್ತದೆ ಮತ್ತು ನಾನು ನರ್ತಕಿ ಅಲ್ಲ ಎಂದು ಊಹಿಸಲು ಸಾಧ್ಯವಿಲ್ಲ. ಭಗವಾನ್ ಶಿವನ ಮೇಲೆ ನೃತ್ಯ ಸಂಯೋಜನೆ ಮಾಡುವುದನ್ನು ನಾನು ಇಷ್ಟಪಡುತ್ತೇನೆ ಏಕೆಂದರೆ ಅವುಗಳು ಅತ್ಯಂತ ಶಕ್ತಿಯುತವಾದ ಮತ್ತು ಸ್ಪೂರ್ತಿದಾಯಕ ನೃತ್ಯಗಳಾಗಿವೆ.ಕಾಲೇಜಿನಲ್ಲಿ ದರ್ಪಣ, ಭಾಷಾ ಉತ್ಸವ ಮತ್ತು ಸಫರ್ನಾಮ ಎಂಬ ಅಂತರ ವಿಭಾಗೀಯ ಉತ್ಸವಕ್ಕೂ ನೃತ್ಯ ಮಾಡಿದ್ದೇನೆ.ನಮ್ಮನ್ನು ಸಂತೋಷಪಡಿಸಲು ನಾವು ನೃತ್ಯ ಮಾಡಬೇಕು ಎಂದು ನಾನು ನಂಬುತ್ತೇನೆ, ಆದರೆ ನಾವು ವೇದಿಕೆಯಲ್ಲಿ ಪ್ರದರ್ಶನ ನೀಡುವಾಗ ಇತರರು ಕೂಡ ನಮ್ಮ ನೃತ್ಯವನ್ನು ನೋಡಿ ಆನಂದಿಸಬೇಕು ಎಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ನಂಬುತ್ತೇನೆ.

ಚಿಕ್ಕ ವಯಸ್ಸಿನಿಂದಲೂ, ನಾನು ಚಿನ್ಮಯ ಮಿಷನ್‌ನ ಭಾಗವಾಗಿದ್ದೇನೆ ಮತ್ತು ಆಧ್ಯಾತ್ಮಿಕತೆ, ಭಗವದ್ಗೀತೆ, ಉಪನಿಷತ್ತುಗಳು ಮತ್ತು ಅವುಗಳ ಅರ್ಥದಲ್ಲಿ ಬಹಳ ಆಸಕ್ತಿ ಹೊಂದಿದ್ದೇನೆ. ಚಿನ್ಮಯ ಮಿಷನ್ ಸ್ವಾಮಿ ಚಿನ್ಮಯಾನಂದರಿಂದ 1953 ರಲ್ಲಿ ಪ್ರಾರಂಭವಾದ ಆಧ್ಯಾತ್ಮಿಕ ಸಂಸ್ಥೆಯಾಗಿದೆ. ಇಂದು ನನ್ನ ವ್ಯಕ್ತಿತ್ವವನ್ನು ರೂಪಿಸಿರುವ ಈ ಸಂಸ್ಥೆ ಮತ್ತು ಅವರು ನನಗೆ ಕಲಿಸಿದ ಸಂಸ್ಕೃತಿಗೆ ನಾನು ಕೃತಜ್ಞನಾಗಿದ್ದೇನೆ.ಚಿನ್ಮಯ ಮಿಷನ್ ಸ್ವಾಮಿ ಚಿನ್ಮಯಾನಂದರಿಂದ 1953 ರಲ್ಲಿ ಪ್ರಾರಂಭವಾದ ಆಧ್ಯಾತ್ಮಿಕ ಸಂಸ್ಥೆಯಾಗಿದೆ. ಇಂದು ನನ್ನ ವ್ಯಕ್ತಿತ್ವವನ್ನು ರೂಪಿಸಿದ ಈ ಸಂಸ್ಥೆ ಮತ್ತು ಅವರು ನನಗೆ ಕಲಿಸಿದ ಸಂಸ್ಕೃತಿಗೆ ನಾನು ಕೃತಜ್ಞನಾಗಿದ್ದೇನೆ. ಈ ಸಂಸ್ಥೆಯಿಂದ ನಾನು ಕಲಿತ ಒಂದು ಪ್ರಮುಖ ವಿಷಯವೆಂದರೆ ಜನರು ಏನಾಗಿದ್ದರೂ ಪ್ರತಿಯೊಬ್ಬರನ್ನು ಪ್ರೀತಿಸುವುದು ಮತ್ತು ಸ್ವೀಕರಿಸುವುದು.

ಸಾಮಾಜಿಕ ಕಾರಣಗಳಿಗಾಗಿ ಕೆಲಸ ಮಾಡುವುದು ಮತ್ತು ನಿರ್ಗತಿಕರನ್ನು ಮೇಲಕ್ಕೆತ್ತುವುದು ನನಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ ಮತ್ತು ನಾನು ಅದಕ್ಕಾಗಿ ಕೆಲಸ ಮಾಡುವ ಉದ್ಯಮಗಳ ಭಾಗವಾಗಿದ್ದೇನೆ. ಅಂತಹ ಒಂದು ಉದಾಹರಣೆ, ಸೀಖ್, ಸಾಮಾಜಿಕವಾಗಿ ವಂಚಿತ ವಿದ್ಯಾರ್ಥಿಗಳನ್ನು ನನ್ನಂತಹ ಸ್ವಯಂಸೇವಕರೊಂದಿಗೆ ಸಂಪರ್ಕಿಸುವ ಅಪ್ಲಿಕೇಶನ್ ಆಗಿದೆ,ಈ ಸ್ವಯಂಸೇವಕರು ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯೂಷನ್ ತೆಗೆದುಕೊಳ್ಳುತ್ತಾರೆ.ನಾನು ಚರ್ಚೆಗಳು, ವ್ಯಾಪಾರ ಉತ್ಸವಗಳು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಲು ಇಷ್ಟಪಡುತ್ತೇನೆ ಮತ್ತು ಅನೇಕವನ್ನು ಗೆದ್ದಿದ್ದೇನೆ. ನಮ್ಮ ಪೀಳಿಗೆಯ ಪೋಷಕರು ಟ್ಯೂಷನ್‌ಗೆ ತುಂಬಾ ಖರ್ಚು ಮಾಡುತ್ತಾರೆ, ಆದರೆ ಅದನ್ನು ಭರಿಸಲಾಗದ ಕೆಲವರು ಇದ್ದಾರೆ ಮತ್ತು ಸೀಖ್ ಅವರಿಗಾಗಿಯೇ ಇದೆ. ಅಲ್ಪಾವಧಿಯಲ್ಲಿ, ನಾವು ಭಾರತದಾದ್ಯಂತ 100 ಮಕ್ಕಳನ್ನು ಮತ್ತು ಜಗತ್ತಿನಾದ್ಯಂತ 56 ಸ್ವಯಂಸೇವಕರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದೇವೆ. ನಾನು ಸೀಖ್ ಆ್ಯಪ್‌ನಲ್ಲಿ ಡ್ಯಾನ್ಸ್ ವಿಂಗ್ ಅನ್ನು ಸಹ ಪ್ರಾರಂಭಿಸಿದೆ, ಅದು ತುಂಬಾ ಪ್ರವೀಣವಾಗಿ ಮತ್ತು ಉತ್ತಮವಾಗಿ ನಡೆಸಲ್ಪಡುತ್ತದೆ ಮತ್ತು ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿತರು.




ಇದು ನನ್ನ ಬಗ್ಗೆ ಸ್ವಲ್ಪ, ನಿಮ್ಮ ಬಗ್ಗೆ ಏನು?

Start a discussion with Poojithareddy1184

Start a discussion