ಭಾಗಮಂಡಲ 


ಭಾರತದಲ್ಲಿನ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿನ ಒಂದು ತೀರ್ಥಯಾತ್ರಾ ಸ್ಥಳವಾಗಿದೆ. ಕಾವೇರಿ ನದಿಯ ದಂಡೆಯ ಮೇಲಿನ ನದಿಯ ಹರಿವಿಗೆ ಎದುರು ದಿಕ್ಕಿನಲ್ಲಿರುವ ವಿಸ್ತರಣೆಗಳ ಮೇಲೆ ಇದು ನೆಲೆಗೊಂಡಿದೆ. ಈ ಸ್ಥಳದಲ್ಲಿ, ಕಾವೇರಿಗೆ ಎರಡು ಉಪನದಿಗಳು ಬಂದು ಸೇರಿಕೊಳ್ಳುತ್ತವೆ; ಕನ್ನಿಕೆ ಮತ್ತು ಕಾಲ್ಪನಿಕ ನದಿಯಾದ ಸುಜ್ಯೋತಿ ಇವೇ ಆ ಎರಡು ನದಿಗಳಾಗಿವೆ. ಒಂದು ನದಿ ಸಂಗಮಸ್ಥಾನವಾಗಿ (ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಕ್ರಮವಾಗಿ ಕೂಡಲ ಅಥವಾ ತ್ರಿವೇಣಿ ಸಂಗಮ ) ಇದು ಪವಿತ್ರ ಸ್ಥಳವೆಂದು ಪರಿಗಣಿಸಲ್ಪಟ್ಟಿದೆ.

ಯಾತ್ರಾರ್ಥಿಗಳು ಕಾವೇರಿಯ ಜನ್ಮಸ್ಥಳವಾದ ತಲಕಾವೇರಿಯೆಡೆಗೆ ಮುಂದುವರಿಯುವುದಕ್ಕೆ ಮುಂಚಿತವಾಗಿ, ತ್ರಿವೇಣಿ ಸಂಗಮದಲ್ಲಿ ಒಮ್ಮೆ ಸ್ನಾನಮಾಡಿ ತಮ್ಮ ಪೂರ್ವಜರ ಕುರಿತಾದ ಕರ್ಮಾಚರಣೆಗಳನ್ನು ನಿರ್ವಹಿಸುವುದು ಒಂದು ಸಾಮಾನ್ಯ ಪರಿಪಾಠವಾಗಿದೆ. ಅಕ್ಟೋಬರ್‌ ತಿಂಗಳ 17ನೇ ಅಥವಾ 18ನೇ ತಾರೀಖಿನಂದು ಬರುವ ತುಲಾ ಸಂಕ್ರಮಣದ ಸಂದರ್ಭದಲ್ಲಿ, ಯಾತ್ರಾರ್ಥಿಗಳು ಇಲ್ಲಿ ಬೃಹತ್‌‌ ಸಂಖ್ಯೆಯಲ್ಲಿ ಜಮಾವಣೆಯಾಗುತ್ತಾರೆ.

ಭಾಗಮಂಡಲ ದೇವಸ್ಥಾನದ ಸಮೀಪವಿರುವ ತ್ರಿವೇಣಿ ಸಂಗಮದಿಂದ ಸ್ವಲ್ಪವೇ ದೂರದಲ್ಲೊಂದು ಪ್ರಸಿದ್ಧ ದೇವಸ್ಥಾನವಿದ್ದು, ಶ್ರೀ ಭಗಂಡೇಶ್ವರ ದೇವಸ್ಥಾನ ಎಂದು ಅದು ಸುಪರಿಚಿತವಾಗಿದೆ; ಇಲ್ಲಿ ಭಗಂಡೇಶ್ವರ (ಈಶ್ವರ), ಸುಬ್ರಹ್ಮಣ್ಯ, ಮಹಾವಿಷ್ಣು ಮತ್ತು ಗಣಪತಿ ದೇವರುಗಳ ವಿಗ್ರಹಗಳು ಪ್ರತಿಷ್ಠಾಪಿಸಲ್ಪಟ್ಟಿವೆ. ಈ ಸ್ಥಳವು ಭಗಂಡೇಶ್ವರ ಕ್ಷೇತ್ರ ಎಂಬ ಹೆಸರಿನಿಂದಲೂ ಪ್ರಸಿದ್ಧಿಯಾಗಿದ್ದು, ಇದರಿಂದಲೇ ಭಾಗಮಂಡಲ ಎಂಬ ಹೆಸರು ಜನ್ಯವಾಗಿದೆ. ಈ ಪ್ರದೇಶದಲ್ಲಿನ ದೇವಸ್ಥಾನಗಳು ಕೇರಳ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಈ ಶೈಲಿಯು ನೇಪಾಳದಲ್ಲಿರುವ ದೇವಸ್ಥಾನಗಳನ್ನೂ ಹೋಲುವಂತಿದೆ.

1785–1790ರ ಅವಧಿಯಲ್ಲಿ, ಸದರಿ ಪ್ರದೇಶವು ಟಿಪ್ಪು ಸುಲ್ತಾನ್‌‌ನಿಂದ ಆಕ್ರಮಿಸಲ್ಪಟ್ಟಿತು. ಆತ ಭಾಗಮಂಡಲವನ್ನು ಅಫ್ಸಲಾಬಾದ್ ಎಂಬುದಾಗಿ ಮರು-ನಾಮಕರಣ ಮಾಡಿದ. 1790ರಲ್ಲಿ ದೊಡ್ಡ ವೀರ ರಾಜೇಂದ್ರ ರಾಜನು ಭಾಗಮಂಡಲವನ್ನು ಒಂದು ಸ್ವತಂತ್ರ ಕೊಡಗು ರಾಜ್ಯದೊಳಗೆ ಮರಳಿ ಪಡೆದ.

ಭಾಗಮಂಡಲವು ಮಡಿಕೇರಿ ಜಿಲ್ಲಾ ಕೇಂದ್ರದಿಂದ ಸುಮಾರು 33 ಕಿ.ಮೀ.ಗಳಷ್ಟು ದೂರದಲ್ಲಿ ನೆಲೆಗೊಂಡಿದೆ ಮತ್ತು ಇದು ಮಡಿಕೇರಿ, ವಿರಾಜಪೇಟೆಗಳಿಂದ ಹಾಗೂ ಕೇರಳದಲ್ಲಿನ ಸನಿಹದ ಸ್ಥಳಗಳಿಂದ ಬರುವ ಸುಸಜ್ಜಿತ ರಸ್ತೆಗಳಿಂದ ಸಂಪರ್ಕಿಸಲ್ಪಟ್ಟಿದೆ. ಈ ಎಲ್ಲಾ ಮಾರ್ಗಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಲಭ್ಯವಿವೆ.

ಭಾಗಮಂಡಲದಿಂದ ಸ್ವಲ್ಪವೇ ದೂರದಲ್ಲಿರುವ ಪಾಡಿ ಎಂಬಲ್ಲಿ ಒಂದು ದೇವಸ್ಥಾನವಿದ್ದು, ಇದರಲ್ಲಿ ಸ್ವಾಮಿ ಇಗ್ಗುತಪ್ಪ ದೇವರು ನೆಲೆಗೊಂಡಿದ್ದಾನೆ ಮತ್ತು ಕೊಡವರು ಇದನ್ನು ತಮ್ಮ ತಾಯಿನಾಡಿನಲ್ಲಿನ ಅತ್ಯಂತ ಪವಿತ್ರ ದೇವಾಲಯ ಎಂಬುದಾಗಿ ಪರಿಗಣಿಸಿದ್ದಾರೆ.

Start a discussion with Niroop Sampath Bananda

Start a discussion