ಭಾರತೀಯ ರಿಸರ್ವ್ ಬ್ಯಾಂಕ್

ಆರಂಭ : ರಿಸರ್ವ ಬ್ಯಾಂಕಿನ ಕೇಂದ್ರ ಕಛೇರಿಯನ್ನು ಮೊದಲಿಗೆ ಕೊಲ್ಕತ್ತದಲ್ಲಿ ಪ್ರಾರಂಭಿಸಿದರಾದರೂ ನಂತರ ೧೯೩೭ರಲ್ಲಿ ಮುಂಬೈಗೆ ಬದಲಾಯಿಸಲಾಯಿತು. ೧೯೪೯ರಿಂದ ಭಾರತ ಸರ್ಕಾರವು ಇದರ ಒಡೆತನವನ್ನು ಹೊಂದಿದೆ. ರಘುರಾಮ್ ರಾಜನ್ ಬ್ಯಾಂಕ್‌ನ ಹಾಲಿ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದಾರೆ. ಇದು ೨೨ ಪ್ರಾದೇಶಿಕ ಶಾಖೆಗಳನ್ನು ಹೊಂದಿದೆ. ರಿಜರ್ವ್ ಬ್ಯಾಂಕು ದೇಶದ ಅತ್ಯುನ್ನತ ಬ್ಯಾಂಕ್ ಆಗಿದೆ.

ಇತಿಹಾಸ : ರಿಜರ್ವ್ ಬ್ಯಾಂಕನ್ನು ೧೯೩೪ರ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ ಯನ್ವಯ ಒಂದು ಖಾಸಗಿ ಷೇರುದಾರರ ಬ್ಯಾಂಕ್ ಆಗಿ ೧೯೩೫ ರ ಏಪ್ರಿಲ್ ೧ ರಂದು ಸ್ಥಾಪಿಸಲಾಯಿತು.[೩] ಸ್ವಾತಂತ್ಯ ನಂತರ ಸರ್ಕಾರಿ ಸ್ವಾಮ್ಯದ ಕೇಂದ್ರ ಬ್ಯಾಂಕ್ ಒಂದರ ಅವಶ್ಯಕತೆ ಬಿತ್ತಾದ್ದರಿಂದ ಸರ್ಕಾರ ರಿಜರ್ವ್ ಬ್ಯಾಂಕನ್ನು ೧೯೪೭ ರ ಜನವರಿ ೧ ರಂದು ರಾಷ್ಟ್ರೀಕರಿಸಿ ಕೇಂದ್ರ ಬ್ಯಾಂಕನ್ನಾಗಿ ಪರಿವರ್ತಿಸಿತು. ಈ ಬ್ಯಾಂಕು ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನ ಪಡೆದಿದ್ದು ಎಲ್ಲಾ ಬ್ಯಾಂಕ್ ಗಳು ಮತ್ತು ಹಣಕಾಸಿನ ಸಂಸ್ಥೆಗಳ ನೇರ ನಿಯಂತ್ರಣ ಸಾಧಿಸುತ್ತಿದೆ. ಇದು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿದೆ.

ಸಂಪನ್ಮೂಲ : ರಿಜರ್ವ್ ಬ್ಯಾಂಕು ರೂ. ೫ ಕೋಟಿ ಪಾವತಿಯಾದ ಬಂಡಾವಾಳ ಹೋಂದಿದೆ. ಈ ಬಂಡವಾಳವನ್ನು ಪೂರ್ತಿ ಪಾವತಿಯಾದ ರೂ. ೧೦೦ ರ ಮುಖಬೆಲೆಯ ೫ ಲಕ್ಷ ಷೇರುಗಳನ್ನಾಗಿ ವಿಭಜಿಸಲಾಗಿದೆ. ಎಲ್ಲಾ ಷೇರುಗಳನ್ನು ಕೇಂದ್ರ ಸರ್ಕಾರವೇ ಹೊಂದಿದೆ.

ಆಡಳಿತ : ರಿಜರ್ವ್ ಬ್ಯಾಂಕಿನ ಆಡಳಿತ ಮತ್ತು ಮೇಲ್ವಿಚಾರಣೆಯು ೨೦ ಸದಸ್ಯರನ್ನೊಳಗೊಂಡ ಕೇಂದ್ರ ನಿರ್ದೇಶಕರ ಮಂಡಳಿಗೆ ಒಳಪಟ್ಟಿದೆ. ಈ ೨೦ ನಿರ್ದೇಶಕರುಗಳಲ್ಲಿ ಒಬ್ಬ ಗೌರ್ನರ್, ನಾಲ್ವರು ಉಪ ಗೌರ್ನರ್ಗ್ ಗಳು, ಹಣಕಾಸು ಇಲಾಖೆಯ ಒಬ್ಬ ನಿರ್ದೇಶಕ, ವಿವಿಧ ಪ್ರಮುಖ ಕ್ಷೇತ್ರ ಗಳಿಂದ ಆಯ್ದು ಸರ್ಕಾರ ನಾಮಕರಣ ಮಾಡಿದ ಹತ್ತು ಮಂದಿ ನಿರ್ದೇಶಕರು ಹಾಗೂ ಕೋಲ್ಕತ್ತ, ಮುಂಬೈ, ಚೆನ್ನೈ ಮತ್ತು ದೆಹಲಿಯಲ್ಲಿರುವ ನಾಲ್ಕು ಪ್ರಾದೇಶಿಕ ಮಂಡಳಿಗಳ ನಾಲ್ಕು ಪ್ರತಿನಿಧಿಗಳಿರುತ್ತಾರೆ.

ಪ್ರಸ್ತುತ ಡಾರಘುರಾಂ ರಂಜನ್ ಅವರು ರಿಜರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದಾರೆ. ರಿಜರ್ವ್ ಬ್ಯಾಂಕ್ ನ ಕೇಂದ್ರ ಕಛೇರಿ ಮುಂಬೈನಲ್ಲಿದೆ. ಇದಲ್ಲದೆ ಚೆನ್ನೈ, ದೆಹಲಿ, ಕೋಲ್ಕತಾ ಮತ್ತು ಮುಂಬೈನಲ್ಲಿ ನಾಲ್ಕು ಸ್ಥಾನೀಯ ಕಛೇರಿಗಳನ್ನು ಹೊಂದಿದೆ. ಜೊತೆಗೆ ಬೆಂಗಳೂರು, ಹೈದರಾಬಾದ್, ಕಾನ್ ಪುರ್, ಲಕ್ನೋ ಮುಂತಾದೆಡೆ ಶಾಖೆಗಳನ್ನು ಹೊಂದಿದೆ.

ಆರ್.ಬಿ.ಐ. ನ ಕಾರ್ಯಗಳು : ಭಾರತದ ರಿಜರ್ವ್ ಬ್ಯಾಂಕು ದೇಶದ ಕೇಂದ್ರ ಬ್ಯಾಂಕ್ ಆಗಿರುವುದರಿಂದ ಅದು ಇತರ ದೇಶಗಳ ಕೇಂದ್ರ ಬ್ಯಾಂಕುಗಳು ನಿರ್ವಹಿಸುವ ಪ್ರಾಥಮಿಕ ಮತ್ತು ಸಾಂಪ್ರದಾಯ ಕಾರ್ಯಗಳನ್ನು ನಿರ್ವಹಿಸುತ್ತದೆ. ಈ ಸಾಮಾನ್ಯ ಕಾರ್ಯಗಳ ಜೊತೆಗೆ ಅದು ಕೆಲವು ಅಭಿವೃದ್ಧಿ ಪ್ರಧಾನ ಕಾರ್ಯಗಳಲ್ಲೂ ಪಾಲ್ಗೊಳ್ಳುತ್ತದೆ. ಆದ್ದರಿಂದ ರಿಜರ್ವ್ ಬ್ಯಾಂಕ್ ನ ಕಾರ್ಯಗಳನ್ನು ಒಟ್ಟಾರೆಯಾಗಿ


ಸಾಂಪ್ರದಾಯಿಕ ಕಾರ್ಯಗಳು,

ಅಭಿವೃದ್ಧಿ ಕಾರ್ಯಗಳು ಮತ್ತು

ಇತರೆ ಕಾರ್ಯಗಳೆಂದು ಮೂರು ವರ್ಗಗಳಾಗಿ ವಿಂಗಡಿಸಬಹುದು.

ಸಾಂಪ್ರದಾಯಿಕ ಕಾರ್ಯಗಳು: ರಿಜರ್ವ್ ಬ್ಯಾಂಕ್ ನಿರ್ವಹಿಸುತ್ತಿರುವ ಸಾಂಪ್ರದಾಯಿಕ ಕಾರ್ಯಗಳು ಈ ಕೆಳಗಿನಂತಿವೆ.

ನೋಟು ಚಲಾವಣೆ : ರಿಜರ್ವ್ ಬ್ಯಾಂಕ್ ದೇಶದಲ್ಲಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುವ ಪರಮಾಧಿಕಾರ ಹೊಂದಿದೆ. ಒಂದು ರೂಪಾಯಿಯನ್ನು ಹೊರತುಪಡಿಸಿ ಎರಡರಿಂದ ಸಾವಿರದ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುತ್ತದೆ. ನಾಣ್ಯಗಳು ಮತ್ತು ಒಂದು ರೂಪಾಯಿ ನೋಟನ್ನು ಕೇಂದ್ರದ ಹಣಕಾಸು ಸಚಿವಾಲಯ ಮುದ್ರಿಸುತ್ತದೆ.

ಸರ್ಕಾರದ ಬ್ಯಾಂಕು : ರಿಸರ್ವ್ ಬ್ಯಾಂಕು ಸರ್ಕಾರದ ಬ್ಯಾಂಕ್ ಆಗಿ, ಪ್ರತಿನಿಧಿಯಾಗಿ ಮತ್ತು ಸಲಹೆಗಾರನಾಗಿ ಕೆಲಸ ಮಾಡುತ್ತಿದೆ. ಸರ್ಕಾರದ ಸಲಹೆಗಾರನಾಗಿ ರಿಜರ್ವ್ ಬ್ಯಾಂಕು ಎಲ್ಲಾ ಹಣಕಾಸಿನ ವಿಚಾರಗಳ ಮೇಲೆ ಸರ್ಕಾರಕ್ಕೆ ಸಲಹೆ ನೀಡುತ್ತದೆ.

ಬ್ಯಾಂಕುಗಳ ಬ್ಯಾಂಕು : ರಿಸರ್ವ್ ಬ್ಯಾಂಕು ಬ್ಯಾಂಕುಗಳ ಬ್ಯಾಂಕ್ ಆಗಿ ಕೆಲಸ ಮಾಡುತ್ತಿದೆ. ೧೯೪೯ ರ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆಯ ಪ್ರಕಾರ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕೇಂದ್ರ ಬ್ಯಾಂಕ್ ನೊಡನೆ ತಮ್ನ್ಮ ಠೇವಣಿಗಳ ಒಂದಾಂಶವನ್ನು ಕಾಯ್ದಿರಿಸಿದ ಹಣವಾಗಿ ಇಟ್ಟಿರಬೇಕು.

ಸಾಲ ನಿಯಂತ್ರಣ : ಪ್ರಮಾಣಾತ್ಮಕ ಮತ್ತು ಗುಣಾತ್ಮಕ ನಿಯಂತ್ರಣಗಳನ್ನು ರಿಜರ್ವ್ ಬ್ಯಾಂಕು ಸಾಲ ಮನ್ನಾ ಮಾಡಲು ಉಪಯೋಗಿಸುತ್ತದೆ.

ಹಣದ ಪೇಟೆಯ ನೇತಾರ : ರಿಜರ್ವ್ ಬ್ಯಾಂಕು ಭಾರತದ ಹಣದ ಮಾರುಕಟ್ಟೆಯ ನೇತಾರನಾಗಿದೆ. ಅದು ಹಣದ ಮಾರುಕಟ್ಟೆಯ ವಿವಿಧ ಅಂಗಾಂಗಗಳಾದ ಬ್ಯಾಂಕ್ ಗಳು ಮತ್ತು ಹಣಕಾಸಿನ ಸಂಸ್ಥೆಗಳನ್ನುನಿಯಂತ್ರಿಸುವ ಪೂರ್ಣ ಅಧಿಕಾರ ಹೊಂದಿದೆ.
ವಿದೇಶಿ ವಿನಿಮಯ ಪಾಲಕ : ರಿಜರ್ವ್ ಬ್ಯಾಂಕ್ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುತ್ತದೆ.

'ಕಟ್ಟಕಡೆಯ ಸಾಲದಾತ :'ದಪ್ಪಗಿನ ಅಕ್ಷರ ರಿಜರ್ವ್ ಬ್ಯಾಂಕು ವಾಣಿಜ್ಯ ಬ್ಯಾಂಕ್ ಗಳಿಗೆ ಕಟ್ಟ ಕಡೆಯ ಸಾಲದಾತನಾಗಿ ಕಾರ್ಯನಿರ್ವಹಿಸುತ್ತದೆ.

ತಿರುವೆ ಮನೆ : ರಿಜರ್ವ್ ಬ್ಯಾಂಕು ವಾಣಿಜ್ಯ ಬ್ಯಾಂಕ್ ಗಳಿಗೆ ತಿರುವೆ ಮನೆಯಾಗಿ ಕಾರ್ಯನಿರ್ವಹಿಸುತ್ತದೆ.

ಅಭಿವೃದ್ಧಿ ಕಾರ್ಯಗಳು : ಅಭಿವೃದ್ಧಿ ಕಾರ್ಯಗಳು ಕೆಳಗಿನಂತಿವೆ : ಕೃಷಿ ಹಣಕಾಸು : ರಿಜರ್ವ್ ಬ್ಯಾಂಕು ಕೃಷಿ ಕ್ಷೇತ್ರಕ್ಕೆ ಹಣಕಾಸನ್ನು ಒದಗಿಸುವುದಕ್ಕಾಗಿ ಒಂದು ಬೇರೆಯೇ ಅದು ಕೃಷಿ ವಿಭಾಗವನ್ನು ಹೊಂದಿದೆ. ನಬಾರ್ಡ್ ಬ್ಯಾಂಕು, ಗ್ರಾಮೀಣಾಭಿವೃದ್ಧಿ ಬ್ಯಾಂಕು ಮತ್ತು ರಾಜ್ಯ ಸರ್ಕಾರಿ ಬ್ಯಾಂಕುಗಳ ಮೂಲಕ ಪರೋಕ್ಷವಾಗಿ ಹಣಕಾಸು ಪೂರೈಸುತ್ತಿದೆ.

ಕೈಗಾರಿಕಾ ಹಣಕಾಸು : ರಿಜರ್ವ್ ಬ್ಯಾಂಕು ಕೈಗಾರಿಕಾ ಅಭಿವೃದ್ಧಿಯಲ್ಲೂ ಸಹ ವಿಶೇಷ ಆಸಕ್ತಿ ವಹಿಸಿದೆ. ಕೈಗಾರಿಕಾ ಹಣಕಾಸು ಸಂಸ್ಥೆಗಳಾದ ಇಂಡಸ್ಟ್ರಿಯಲ್ ಫೈನಾನ್ಸ್ ಕಾರ್ಪೊರೇಷನ್, ಸ್ಟೇಟ್ ಫೈನಾನ್ಸ್ ಕಾರ್ಪೊರೇಷನ್, ಇಂಡಸ್ಟ್ರಿಯಲ್ ಬ್ಯಾಂಕ್ ಆಫ್ ಇಂಡಿಯಾ ಮುಂತಾದವು. ಇತರೆ ಕಾರ್ಯಗಳು : ಇತರೆ ಕಾರ್ಯಗಳು ಈ ಕೆಳಗಿನಂತಿವೆ ಸಂಶೋಧನಾ ಕಾರ್ಯಗಳು ರಿಜರ್ವ್ ಬ್ಯಾಂಕು ಆರ್ಥಿಕ ವ್ಯವಸ್ಥೆಯ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ಸಂಗ್ರಹಿಸಿ ನಿಯತಕಾಲಿಕೆಗಳನ್ನು ಪ್ರಕಟಿಸುತ್ತಿದೆ.
ವಿಶೇಷ ಕಾರ್ಯಗಳು ಬ್ಯಾಂಕಿಂಗ್ ಸಂಸ್ಥೆಗಳ ನೌಕರರಿಗೆ ತರಬೇತಿ ನೀಡುತ್ತದೆ. ರಿಜರ್ವ್ ಬ್ಯಾಂಕು ದೇಶದ ಕೇಂದ್ರದ ಬ್ಯಾಂಕಾಗಿ ಸಾಲ ನೀಡಿಕೆ, ಕೃಷಿ, ಕೈಗಾರಿಕಾ ಮುಂತಾದ ಕ್ಷೇತ್ರಗಳ ಸಮಸ್ಯೆಗಳ ಅಧ್ಯಯನ ನಡೆಸಿ ಈ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಸೂಚಿಸುತ್ತದೆ. ಹೀಗೆ ರಿಜರ್ವ್ ಬ್ಯಾಂಕು ದೇಶದ ಕೇಂದ್ರ ಬ್ಯಾಂಕಾಗಿ ಹಣಕಾಸು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಪ್ರಸ್ತುತ ಹಣಕಾಸಿನ ಸಚಿವರಾಗಿ ಪಿ.ಚಿದಂಬರಂ ಕಾರ್ಯನಿರ್ವಹಿಸುತ್ತಿದ್ದಾರೆ.
ಹಣಕಾಸು ನೀತಿ ಕೇಂದ್ರ ಬ್ಯಾಂಕು ಅನುಸರಿಸುವ ನೀತಿಗೆ "ಕೇಂದ್ರ ಬ್ಯಾಂಕಿನ ನೀತಿ" ಹಣಕಾಸಿನ ನೀತಿ ಎಂದು ಕರೆಯುತ್ತಾರೆ. ಇನ್ನೂ ವಿವರವಾಗಿ ಅರ್ಥೈಸಬೇಕೆಂದರೆ ಚಲಾವಣೆಯಲ್ಲಿ ಇರುವ ಹಣದ ನಿಯಂತ್ರಣ ಮತ್ತು ಹಣಕ್ಕೆ ಸಂಬಂಧಿಸಿದ ವ್ಯವಸ್ಥೆಯ ನಿರ್ವಹಣೆಗೆ ಕೇಂದ್ರ ಬ್ಯಾಂಕ್ ರೂಪಿಸಿ ಜಾರಿಗೆ ತರುವ ನೀತಿಗೆ "ಹಣಕಾಸಿನ ನೀತಿ" ಎಂದು ಹೆಸರು. ಹಣಕಾಸಿನ ನೀತಿಯು ಕೇಂದ್ರ ಬ್ಯಾಂಕ್ ಮುದ್ರಿಸಿ ಚಲಾವಣೆಗೆ ತರುವ ಹಣದ ಗಾತ್ರ, ವಾಣಿಜ್ಯ ಬ್ಯಾಂಕುಗಳ ಸಾಲದ ನಿರ್ಮಾಣದ ಹಾಗೂ ಬಡ್ಡಿ ದರದ ಅಂಶಗಳಿಗೆ ಸಂಬಂಧಿಸಿರುತ್ತದೆ.
ಹಣಕಾಸಿನ ನೀತಿಯ ಉದ್ದೇಶಗಳು ಹಣಕಾಸಿನ ನೀತಿಯು ಕಾಲಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ. ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಕೇಂದ್ರ ಬ್ಯಾಂಕಿನ ಹಣಕಾಸಿನ ನೀತಿಯ ಉದ್ದೇಶವು ಬೇರೆ ಬೇರೆಯಾಗಿರುವುದು ಕಂಡುಬರುತ್ತದೆ. ಈ ಉದ್ದೇಶವು ದೇಶದಲ್ಲಿನ ಆರ್ಥಿಕ ಪರಿಸ್ಥಿತಿಗಳನ್ನವಲಂಭಿಸಿರುತ್ತದೆ. ಹಣಕಾಸಿನ ನೀತಿಯನ್ನು ರೂಪಿಸುವಾಗ ಕೇಂದ್ರ ಬ್ಯಾಂಕು ಹೊಂದಿದ ಪ್ರಮುಖ ಉದ್ದೇಶಗಳನ್ನು ಐದು ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ

1. ತಟಸ್ಥ ಹಣದ ನೀತಿ ,2. ಸ್ಥಿರವಾದ ವಿದೇಶಿ ವಿನಿಮಯದ ನೀತಿ 3. ಆಂತರಿಕ ಬೆಲೆಗಳ ಸ್ಥಿರತೆ 4. ಪೂರ್ಣೋದ್ಯೋಗ 5. ಆರ್ಥಿಕ ಬೆಳವಣಿಗೆ

2021 Wikimedia Foundation Board elections: Eligibility requirements for voters ಬದಲಾಯಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.