ಕನ್ನಡ ಜನಪ್ರಿಯ ಗಾದೆಗಳು


    1.ವೇದ ಸುಳ್ಳಾದರು ಗಾದೆ ಸುಳ್ಳಾಗದು.                                       
    2.ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ. 
    3.ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ. 
    4.ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ. 
    5.ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ. 
    6.ಯಾರದೋ ದುಡ್ಡು; ಎಲ್ಲಮ್ಮನ ಜಾತ್ರೆ. 
    7.ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು. 
    8.ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣ ಎರಡೂ ಒಂದೆ. 
    9.ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು. 
   10.ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.
   11.ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.
   12.ನಾನು ಅಗೆಯುವಲ್ಲಿ ಕಲ್ಲು, ಅಜ್ಜ ಅಗೆಯುವಲ್ಲಿ ಮಣ್ಣು.
   13.ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನಕ್ಕೆ ಖಾರ.
   14.ದಡ್ಡನಿಗೆ ಹಗಲು ಕಳೆಯುವುದಿಲ್ಲ, ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ.
   15.ಹುಲಿಯ ಬಣ್ಣವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿಕೊಂಡಂತೆ. 
   16.ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.
   17.ತಿನ್ನಲು, ಉಣ್ಣಲು ಇದ್ದರೆ ಯಾವತ್ತೂ ನೆಂಟರು.
   18.ಶರೀರಕ್ಕೆ ಸುಖ, ಹೊಟ್ಟೆಗೆ ದುಃಖ.
   19.ನೂರಾರು ರೋಗಿಗಳನ್ನು ಕೊಂದು ಒಬ್ಬ ವೈದ್ಯ ಆದಂತೆ.
   20.ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ.
   21.ಅಡಿಕೆಕಾಯಿಯನ್ನು ಚೀಲದೊಳಗೆ ಹಾಕಬಹುದು, ಮರ ಆದ ನಂತರ ಹಾಕಬಹುದೇ?
   22.ಲಾಭ ನೋಡಿ ಬಾಳೆ ಹಣ್ಣು ತಿಂದಂತೆ.
   23.ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
   24.ಹತ್ತು ಮಕ್ಕಳ ತಾಯಿ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದಂತೆ.
   25. ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು.
   26.ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲು ನಮ್ಮಿಂದ ಆಗುವುದೇ?
   27.ಬೆಲ್ಲ ಇದ್ದಲ್ಲಿ ನೊಣ ತಿರುಗಾಡಿದಂತೆ.
   28.ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ.
   29.ಮೃತ್ಯು ಬಂದ ಮೇಲೆ ವೈದ್ಯ ಬಂದ.
   30.ಶಸ್ತ್ರದಿಂದಾದ ಗಾಯ ಮಾಯುತ್ತದೆ, ನಾಲಿಗೆಯಿಂದಾದ ಗಾಯ ಮಾಯುವುದಿಲ್ಲ.
   31.ಚರ್ಮ ಹೋದರೂ ಪರವಾಗಿಲ್ಲ, ಕಾಸು ಹೋಗಬಾರದು ಎಂದಂತೆ.
   32.ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಹೇಳಿದ ಹಾಗೆ.
   33.ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ?
   34.ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.
   35.ದುಷ್ಟರ ಸಂಗದಿ ನೆರಳು ಕೊಯ್ಯದೆ ಬಿಡದು ಕೊರಳು.
   36.ನೀನಾಗದೆ ರಣಹೇಡಿ, ಕೀರ್ತಿ ಪಡೆ ಪ್ರಾಣ ನೀಡಿ.
   37.ನಿನ್ನಲ್ಲಿ ನೀ ಹುಡುಕು, ಅರಿಷಡ್ವರ್ಗಗಳ ಹೊರ ಹಾಕು.
   38.ಸಜ್ಜನರ ಮಾತು ಸಿಹಿ, ದುರ್ಜನರ ತುತ್ತು ಕಹಿ.
   39.ಬುದ್ಧಿ ಇದ್ದವನಲ್ಲಿ ಶ್ರದ್ಧೆ, ನಿದ್ದೆ ಬಾರದವನಲ್ಲಿ ವಿದ್ಯೆ.
   40.ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.
   41.ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.
   42.ಆಳಾಗದವ ಅರಸನಲ್ಲ, ಹಟ ಹಿಡಿದವ ಸಾಮ್ರಾಟನಲ್ಲ.
   43.ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
   44.ವಿಶ್ವಾಸಿ ನೀನಾಗು, ಘಾತುಕಕ್ಕೆ ಬಗ್ಗದೆ ಮುನ್ನುಗ್ಗು.
   45.ಹೆಂಡತಿಯ ಮಾತು ಆಗದಿರಲಿ ಕೊಯ್ದುಕೊಳ್ಳುವಂತೆ ಕತ್ತು.
   46.ಕಣ್ಣಿಗೆ ಕಂಡದ್ದೆಲ್ಲಾ ನುಣ್ಣಗಿರುವುದಿಲ್ಲ.
   47.ನಿನ್ನದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ.
   48.ಮನಸ್ಸು ಇಲ್ಲದಿದ್ದರೆ ಗಟ್ಟಿ, ಎಲ್ಲವೂ ಮೂರಾಬಟ್ಟಿ.
   49.ಮಾಡಿ ಉಣ್ಣು ಬೇಡಿದಷ್ಟು, ತಗಾದೆ ಮಾಡದೇ ಉಣ್ಣು ನೀಡಿದಷ್ಟು.
   50.ಒಣ ಮಾತು ಒಣಗಿದ ಹುಲ್ಲು, ಒಳ್ಳೆಯ ಮಾತು ಬೆಳ್ಳಗಿನ ಹಾಲು.

Start a discussion with Nakulgk9738

Start a discussion