ಸದಸ್ಯರ ಚರ್ಚೆಪುಟ:Karthik Rao/ನನ್ನ ಪ್ರಯೋಗಪುಟ

 
ಲಾಡು

ಲಾಡು ಭಾರತೀಯ ಉಪಖಂಡದಲ್ಲಿ ಜನಪ್ರಿಯವಿರುವ ಒಂದು ಚೆಂಡಿನಾಕಾರದ ಸಿಹಿತಿನಿಸು.ಲಾಡುಗಳನ್ನು ಹಿಟ್ಟು, ಮೃದುಮಾಡಲಾದ ಕಣಕ, ಸಕ್ಕರೆ, ಜೊತೆಗೆ ಪಾಕವಿಧಾನದೊಂದಿಗೆ ಬದಲಾಗುವ ಇತರ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ. ಅವುಗಳನ್ನು ಹಲವುವೇಳೆ ಹಬ್ಬದ ಅಥವಾ ಧಾರ್ಮಿಕ ಸಂದರ್ಭಗಳಲ್ಲಿ ಬಡಿಸಲಾಗುತ್ತದೆ. ಬೂಂದಿಲಾಡು ಇದು ಲಾಡುಗಳ ಒಂದು ವಿಧ.ಬೂಂದಿಲಾಡನ್ನು ಉಪನಯನ, ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

ಸಾಮಗ್ರಿಗಳು

ಬದಲಾಯಿಸಿ

ಲಾಡುಗಳನ್ನು ತಯಾರಿಸಲು ಕಡಲೆ ಹಿಟ್ಟು, ರವೆ, ತೆಂಗಿನಕಾಯಿಯನ್ನು ಸಾಧಾರಣವಾಗಿ ಉಪಯೋಗಿಸುತ್ತಾರೆ. ಇದರ ಜೊತೆ ಸಕ್ಕರೆ ಮತ್ತು ತುಪ್ಪವನ್ನು ಮಿಶ್ರಿಸಿ ಚೆಂಡಿನ್ ಆಕಾರಕ್ಕೆ ತರುತ್ತಾರೆ.ಲಾಡುವಿನಲ್ಲಿ ಪಿಸ್ತ, ಗೋಡಂಬಿ, ಒಣ ದ್ರಾಕ್ಶಿ, ಲವಂಗ, ಮುಂತಾದುವುಗಳನ್ನು ಪರಿಮಳಕ್ಕಾಗಿ ತುಂಬುತ್ತಾರೆ.

ಲಾಡುವಿನಲ್ಲಿ ಬಹಳಷ್ಟು ವಿಧದ ಲಾಡುಗಳಿವೆ:

ಬದಲಾಯಿಸಿ

೧. ಬೂಂದಿ ಲಾಡು:

ಬದಲಾಯಿಸಿ
 
ಬೂಂದಿ ಲಾಡು

ಬೂಂದಿ ಲಾಡು ಒಂದು ಮುಖ್ಯ ವಿಧದ ಲಾಡು, ಇದು ಬಹಳ ಸಾಮಾನ್ಯವಾಗಿ ತಯಾರಿಸುವ ಲಾಡು. ಇದನ್ನು ಸಾಧಾರಣವಾಗಿ ಮದುವೆಗಳಲ್ಲಿ, ರಕ್ಷಾ ಬಂಧನ, ದೀಪಾವಳಿಗಳಂತಹ ಹಬ್ಬಗಳಲ್ಲಿ ತಯಾರಿಸುತ್ತಾರೆ. ಇದು ಉತ್ತರ ಭಾರತದ ಮುಖ್ಯವಾದ ಸಿಹಿ ತಿನಿಸು, ಆದರೆ ಈಗ ಇದು ದಕ್ಷಿಣ ಭಾರತದದೆಲ್ಲೆಡೆ ಕಾಣಬಹುದಾಗಿದೆ.

೨.ಕಡ್ಲೆಹಿಟ್ಟಿನ ಲಾಡು:

ಬದಲಾಯಿಸಿ

ಇದು ಬಹಳ ಜನಪ್ರಿಯ ಬಗೆಯ ಲಾಡು. ಇದನ್ನು ಕಡ್ಲೆಹಿಟ್ಟು, ಸಕ್ಕರೆ, ಮತ್ತು ತುಪ್ಪದಿಂದ ಮಾಡಲಾಗುತ್ತದೆ. ಕಡ್ಲೆಹಿಟ್ಟನ್ನು ತುಪ್ಪದಲ್ಲಿ ಕಂದು ಬಣ್ಣ ಬರುವವರೆಗೆ ಹುರಿದು, ಸಕ್ಕರೆಯನ್ನು ಹಾಕಿ ಉಂಡೆ ಕಟ್ಟಿ ತಯಾರಿಸುತ್ತಾರೆ. ಇದನ್ನು ಸಾಮಾನ್ಯವಾಗಿ ಧಾರ್ಮಿಕ ಸಮಾರಂಭಗಳಲ್ಲಿ ಬಳಸುತ್ತಾರೆ.

೩. ತೆಂಗಿನಕಾಯಿಯ ಲಾಡು:

ಬದಲಾಯಿಸಿ
 
ತೆಂಗಿನಕಾಯಿ ಲಾಡು

ಬಹಳ ತರಹದ ತೆಂಗಿನಕಾಯಿ ಲಾಡುಗಳನ್ನು ಕಾಣಬಹುದು. ಇದರ ಮೂಲ ಚೋಲರ ಕಾಲದಲ್ಲಿ ಕಾಣಬಹುದು,ಈ ಸಿಹಿ ತಿನಿಸನ್ನು ಪ್ರಯಾಣಿಕರಿಗೆ, ಯೋಧರಿಗೆ ಒಳ್ಳೆಯ ಅದೃಷ್ಟ ಬರಲು ಕೊಡುತಿದ್ದರು.

೪. ಮಲೈ ಲಾಡು:

ಬದಲಾಯಿಸಿ

ಇದು ಭಾರತ ಹಾಗೂ ಪಾಕಿಸ್ತಾನದಲ್ಲಿ ಪ್ರಸಿದ್ಧವಾದ ಬಗೆಯ ಲಾಡು. ಇದನ್ನು ಕೋವದಿಂದ ತಯಾರಿಸಲಾಗುತ್ತದೆ. ಇದನ್ನು ಪೇಡಯೆಂದು ಸಹ ಕರೆಯುತ್ತಾರೆ, ಸಾಮಾನ್ಯವಾಗಿ ದೇವರ ಸಮರ್ಪಣೆಗಾಗಿ ಇದನ್ನು ಮಾದುತ್ತಾರೆ.

೫. ಖಾದ್ಯ ಗಮ್ನಿಂದ ಮಾಡಿದ ಲಾಡು:

ಬದಲಾಯಿಸಿ

ಭಾರತದಲ್ಲಿ ಬಾಣಂತಿ ಮಹಿಳೆಯರಲ್ಲಿ ಎದೆ ಹಾಲಿನ ಉದ್ಪತ್ತಿಗಾಗಿ ಸಹಾಯ ಮಾಡಲು ಈ ಲಾಡುವನ್ನು ಕೊಡಲಾಗುತ್ತದೆ. ಇದನ್ನು ಡಿನ್ಕಚೆ ಲಾಡು ಎಂದು ಮರಾಠಿಯಲ್ಲಿ ಹಾಗೂ ಗೊಂದ್ ನ ಲಾಡು ಎಂದು ಹಿಂದಿಯಲ್ಲಿ ಕರೆಯಲಾಗುತ್ತದೆ. ಇದಕ್ಕೆ ಮುಖ್ಯವಾದ ಸಾಮಗ್ರಿ ಗಮ್ ಅರೇಬಿಕ್, ಇದನ್ನು ಬಾಬೂಲ್ ಮರದಿಂದ ಪಡೆಯಲಾಗುತ್ತದೆ. ಇದಕ್ಕೆ ತೆಂಗಿನಕಾಯಿ, ಬಾದಾಮಿ, ಗೋಡಂಬಿ, ಖರ್ಜೂರ, ತುಪ್ಪ, ಸಕ್ಕರೆ ಮುಂತಾದವುಗಳನ್ನು ಉಪಯೋಗಿಸುತ್ತಾರೆ.

ಲಾಡುವನ್ನು ಮುಖ್ಯವಾಗಿ ಮದುವೆಗಳಲ್ಲಿ, ಹಬ್ಬಗಳಲ್ಲಿ ಉಪಯೋಗಿಸುವುದನ್ನು ಕಾಣಬಹುದು. ಮುಖ್ಯವಾಗಿ ಲಾಡುಗಳನ್ನು ದೇವಸ್ಥಾನಗಳಲ್ಲಿ ಪ್ರಸಾದವಾಗಿ ಕೊಡುತ್ತಾರೆ. ಆಂಧ್ರದ ತಿರುಪತಿಯಲ್ಲಿ ಕೊಡುವ ಪ್ರಸಾದ ಬಹಳ ಪ್ರಸಿದ್ಧವಾದುದು, ಇದನ್ನು ತಿರುಪತಿ ಲಾಡು ಎಂದೆ ಕರೆಯುತ್ತಾರೆ.

ತಿರುಪತಿಯ ಲಾಡು

ಬದಲಾಯಿಸಿ
 
ತಿರುಪತಿ ಕೋದಂಡರಾಮ ದೇವಸ್ಥಾನ

ತಿರುಪತಿಯ ಲಾಡು ಇತಿಹಾಸದ ಪ್ರಕಾರ ಆಗಸ್ಟ್ ೨, ೧೭೧೫ ರಲ್ಲಿ ಶುರುವಾದ ಸಂಪ್ರದಾಯ. ಲಾಡು ಪೊಟು ಎಂಬುದು ಲಾದುಗಳನ್ನು ತಯಾರಿಸುವ ಅಡಿಗೆ ಕೊಠಡಿ. ಇಲ್ಲಿ ದಿನಕ್ಕೆ ಸಾಧಾರಣವಾಗಿ ೧.೫ ಲಕ್ಷ ಲಾಡುಗಳನ್ನು ತಯಾರಿಸಲಾಗುತ್ತದೆ. ೮ ಲಕ್ಷದವರೆಗೆ ಲಾಡುಗಳನ್ನು ತಯಾರಿಸಬಹುದಾದ ಸಾಮರ್ಥ್ಯ ಪೊಟುವಿನ ಉಪಕರಣಗಳಿಗಿವೆ.

ತಿರುಪತಿಯಲ್ಲಿ ಲಾಡು ತಯಾರಿಸಲು ಕಡಲೆ ಹಿಟ್ಟು, ಗೋಡಂಬಿ, ಲವಂಗ, ತುಪ್ಪ, ಸಕ್ಕರೆ, ಕಬ್ಬು, ಒಣ ದ್ರಾಕ್ಷಿಯನ್ನು ಬಳಸುತ್ತಾರೆ. ಸುಮಾರು ೨೦೦ ಅಡುಗೆಯವರು ಪೊಟುವಿನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇವರನ್ನು ಪೊಟು ಕಾರ್ಮಿಕರೆಂದು ಕರೆಯುತ್ತಾರೆ.

ತಿರುಪತಿಯಂತೆ ಬಹಳಷ್ಟು ಬೇರೆ ದೇವಾಲಯಗಳಲ್ಲಿ ಲಾಡುವನ್ನು ಪ್ರಸಾದವನ್ನಗಿ ಕೊಡುತ್ತಾರೆ. ಧರ್ಮಸ್ಥಳ, ಸುಬ್ರಮಣ್ಯ ಕ್ಷೇತ್ರಗಳು ಇದಕ್ಕೆ ಉದಾಹರಣೆ. ಭಾರತದಲ್ಲಿ ಲಾಡುವಿನ ಪ್ರಾಮುಖ್ಯತೆ ಇಲ್ಲಿ ಕಾಣಬಹುದು. ಈದ್ ಸಂದರ್ಭದಲ್ಲಿ ಲಾಡುವನ್ನು ಸಂತೋಶದಿಂದ ಹಂಚುತ್ತಾರೆ. ಇದು ಲಾಡುವಿನ ವೈವಿಧ್ಯತೆಯನ್ನು ತೋರಿಸುತ್ತದೆ.

ಉಲ್ಲೆಖಗಳು

ಬದಲಾಯಿಸಿ

Laddu.[] Page text.[] Page text.[]

  1. Laddu, additional text.
  2. "Sweet shops make hay in Diwali shine". The New Indian Express. ], additional text.
  3. Sangeetha Devi Dundoo. "As good as home". The Hindu., additional text.
Return to the user page of "Karthik Rao/ನನ್ನ ಪ್ರಯೋಗಪುಟ".