Joyjohn
'"ಆರೋಗ್ಯವೇ ಭಾಗ್ಯ"'
"ಆರೋಗ್ಯವೇ ಭಾಗ್ಯ" ಎಂಬ ನುಡಿಯ ನಾವು ಕೇಳಿದ್ದೆವೇ ಬೇರೆ ಏನೇ ಸಂಪತ್ತೀದ್ದರು ನಾವು ಎಷ್ಟೇ ಶೀಮಂತರಾಗಿದ್ದರೂ,ನಮಗೆ ಒಳ್ಳೇಯ ಆರೋಗ್ಯ ಎಲ್ಲದಿದ್ದರೆ ಉಳಿದೆಲ್ಲ ಶೊನ್ಯಕ್ಕೆ ಸಮಾನ. ಆರೋಗ್ಯ ಪ್ರತಿಯೊಬ್ಬ ಮಾನವನಿಗೂ ಪ್ರತಿಯೊಂದು ಜೀವಿಗೊ ಅತ್ಯುತ್ತಮವಾದದ್ದು. ಈ ಜಗತ್ತಿನಲ್ಲಿ ಒಂದು ಹೆಣ್ಣು, ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಎಲ್ಲರು ದೇವರ ಬಳಿ ಆರೋಗ್ಯವಂತ ಮಗುವಿಗಾಗಿ ಬೇಡುತಾರೇ. ಎಕೆಂದರೆ ಆರೋಗ್ಯ ಎಷ್ಟು ಮಹತ್ವದ್ದು ಎಂದು ನಮಗೆ ಅರಿತಿದೆ. ಈಗಿನ ಕಾಲದಲ್ಲಿ ನಮ್ಮ ಆರೋಗ್ಯವನ್ನು ಕೆಡಿಸುವ ಮತ್ತು ಹಾನಿ ಮಾಡುವ ಹಲವಾರು ಕಾರಣಗಳಿವೆ. ಅದರಲ್ಲಿ ಪ್ರಮುಖವಾದುದು ನಮ್ಮ ಆರೋಗ್ಯವನ್ನು ಹಾಳು ಮಾಡುವ ಅಡ್ಡ ತಿನಿಸುಗಳು. ಮೊದಲಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಪ್ರಚಲಿತದಲ್ಲಿದ್ದವು. ಅಜ್ಜ ಅಜ್ಜಿ ಅತ್ತೆ ಮಾವ ಎಲ್ಲ ಹಿರಿಯರಿಂದ ತುಂಬಿದಂತಹ ಮನೆಯಲ್ಲಿ ಯಾವಾಗಲೂ ಆರೋಗ್ಯಕರ ಹಾಗೂ ರುಚಿಕರ ತಿನಿಸುಗಳು ಸಿಗುತ್ತಿದ್ದವು. ಈಗಿನ ಚಿಕ್ಕ ಸಂಸಾರ ಎಂಬ ಅಪ್ಪ ಅಮ್ಮ ಹಾಗೂ ಒಂದೇ ಮಗುವನ್ನು ಹೊಂದಿದ ವಿಭಕ್ತ ಕುಟುಂಬದಲ್ಲಿ ಮಾರುಕಟ್ಟೆಯಲ್ಲಿ ಯಾವುದು ಬಹಳ ಸುಲಭವಗಿ ದೊರೆಯುತ್ತದೆಯೋ ಅದನ್ನೆ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಕೊಡಿಸುತ್ತಾರೆ. ಗಂಡ ಹೆಂಡತಿ ಇಬ್ಬರು ಹೊರಗಡೆ ದುಡಿಯುವ ಈ ಕಾಲದಲ್ಲಿ ತಮ್ಮ ಮಕ್ಕಳು ಯಾವುದನ್ನು ತಿಂದರೆ ಆರೋಗ್ಯಕ್ಕೆ ಹಾನಿಕರವೋ ಹಿತಕರವೋ ಎಂದು ಅರಿಯದೆ ಮಕ್ಕಳು ಕೇಳಿದ ತಿನಿಸುಗಳನ್ನು ಅವರು ಕೊಡಿಸುತ್ತಾರೆ. ಈಗಿನ ಯಾವುದೇ ಮಕ್ಕಳನ್ನು ನೀವು ಕೇಳಿದರೂ ನಿಮ್ಮ ಇಷ್ಟದ ತಿನಿಸು ಯಾವುದು ಎಂದು, ಆಗ ಕೇಳಿ ಬರುವ ಉತ್ತರ ಪೀಜಾ, ಬರ್ಗರ್, ಪಾನಿ ಪುರಿ, ಗೋಬಿ ಮಂಚೂರಿ, ಕೆಕ್, ಪೆಪ್ಸಿ, ಲೇಸ್, ನೊಡಲ್ಸ್ ಇತ್ಯಾದಿ.. ಈಗಿನ ಮಕ್ಕಲು ಆರೋಗ್ಯ ಹಾಳುಮಾಡುವ ತಿನಿಸುಗಳ ಕಡೆ ಬಹಳ ಬೇಗ ಆಕಷ್ರಿತರಾಗುತ್ತರೆ.ಇದಕ್ಕೆ ಕಾರಣ ದೊರದರ್ಶನದಲ್ಲಿ ಬರುವ ಜಾಗೀರಾತುಗಳು ಇದನ್ನು ಕಂಡು ಒಮ್ಮೆಯಾದರು ಅದನ್ನು ಸೇವಿಸುವ ಆಸೆಯನ್ನು ಮಕ್ಕಳು ವ್ಯಕ್ತಪಡಿಸುತ್ತಾರೆ ಹಾಗೂ ಒಮ್ಮೆ ಅದನ್ನು ಸೇವಿಸಿ ನಂತರ ಪದೇ ಪದೇ ಅದನ್ನು ಸವಿಯಲು ಬಯಸುತ್ತಾರೆ. ತಂದೆ ತಾಯಿಯರು ಈ ವಿಷಯದ ಬಗ್ಗೆ ಎಚ್ಚೆತ್ತು ತಮ್ಮ ಹಾಗೂ ತಮ್ಮ ಕುಟುಂಬದವರ ಆರೋಗ್ಯದ ಬಗ್ಗೆ ಗಮನ ಹರಿಸಿದಲ್ಲಿ ನಮ್ಮ ಆರೋಗ್ಯವನ್ನು ನಾವು ಚೆನ್ನಾಗಿ ಕಾಪಾಡಬಹುದು................
ಜೋಯಲ್ ಸಂದೀಪ್ ದ್ವಿತೀಯ ಬಿ.ಕಾಮ್ ೧೩೩೩೦೬
Start a discussion with Joyjohn
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Joyjohn. What you say here will be public for others to see.