ಪುಲಿಗೆರೆಯ ಸೋಮನಾಥ : ಇವರ ಕಾಲ ಕ್ರಿ.ಶ.ಸು.೧೪೦೦. 'ಸೋಮೇಶ್ವರ ಶತಕ'ದ ಕರ್ತೃವಿನ ಬಗ್ಗೆ ವಿದ್ವಾಂಸರೊಳಗೆ ಭಿನ್ನಾಭಿಪ್ರಾಯಗಳಿವೆ. ಹೆಚ್ಚಿನ ವಿದ್ವಾಂಸರು ಈ ಶತಕ ಕಾವ್ಯದ ಭಾಷೆ ಮೊದಲಾದ ಅಂಶಗಳನ್ನು ಪರಿಶೀಲಿಸಿ ಈ ಶತಕವನ್ನು ೧೪ನೆಯ ಶತಮಾನದಲ್ಲಿದ್ದ ಪುಲಿಗೆರೆಯ ಸೋಮನಾಥ ರಚಿಸಿದ್ದಾನೆ ಎಂದು ನಿರ್ಧರಿಸಿದ್ದಾರೆ. ಸೋಮೇಶ್ವರ ಶತಕವನ್ನು ಸಂಪಾದಿಸಿದ ಚಿನ್ನಪ್ಪಗೌಡ ಮಾಸ್ತರ್ ಎಂಬವರು ಈ ಶತಕದ ಕರ್ತೃ ಪುಲಿಗಿರಿಯ ಸೋಮನಾಥನೆಂದೂ, ಈತನ ಊರು ಯಲಬುರ್ಗಿ ತಾಲೂಕಿನ ಹುಲಿಯಗುಡ್ಡವೆಂದೂ ತಿಳಿಸಿದ್ದಾರೆ. 'ಸೋಮೇಶ್ವರ ಶತಕ' ಕನ್ನಡ ಶತಕ ಕಾವ್ಯಗಳಲ್ಲಿ ಹೆಚ್ಚು ಪ್ರಸಿದ್ಧವೂ ಜನಪ್ರಿಯವೂ ಆದ ಕಾವ್ಯ. ಇದರಲ್ಲಿ ವೃತ್ತ ಛಂದಸ್ಸಿನಲ್ಲಿ ರಚನೆಯಾದ ಸುಮಾರು ನೂರ ಏಳು ಪದ್ಯಗಳಿವೆ.

Return to the user page of "Chaithanya Gowda Chaithu/sandbox".