ಸದಸ್ಯ:Chaithanya Gowda Chaithu/sandbox

ನನ್ನ ಹೆಸರು ಚೈತನ್ಯ ಎಂ.ಎಸ್. ನಾನು ಪ್ರಥಮ ಬಿ.ಬಿ.ಎಂ ಸಂತ ಆಲೋಶಿಯಸ್ ಕಾಲೇಜಿನಲ್ಲಿ ಒದುತ್ತಿದ್ದೆನೆ.

ರನ್ನ : ಹತ್ತನೆಯ ಶತಮಾನದ ಪ್ರಸಿದ್ಧ ಕವಿಗಳಲ್ಲಿ ಹಾಗೂ 'ರತ್ನತ್ರಯ'ರಲ್ಲಿ ರನ್ನನೂ ಒಬ್ಬ. ಅಲ್ಲದೆ ಈತ ಕನ್ನಡದ 'ಕವಿಚಕ್ರವರ್ತಿತ್ರಯ'ರಲಿಯೂ ಒಬ್ಬನಾಗಿದ್ದಾನೆ. ಈತನ ಕಾಲ ಕ್ರಿ.ಶ.ಸು.೯೪೯. ಬೆಳುಗಲಿ ಐನೂರರ ಜಂಬುಖಂಡಿ ಸೀಮೆಯ ಎಪ್ಪತ್ತರ ಮುದುವೊಳಲು ರನ್ನನ ಜನ್ಮ ಸ್ಥಳ. ತಂದೆ ಜಿನವಲ್ಲಭ. ತಾಯಿ ಅಬ್ಬಲಬ್ಬೆ. ಗುರುಗಳು ಅಜಿತಸೇನಾಚಾರ್ಯರು. ಪೋಷಕರು ದಾನಚಿಂತಾಮಣಿ ಅತ್ತಿಮಬ್ಬೆ ಹಾಗೂ ಗಂಗರಸರ ಮಂತ್ರಿ ಚಾವುಂಡರಾಯ. ಆಶ್ರಯದಾತರು ಚಾಲುಕ್ಯ ಚಕ್ರವರ್ತಿ ಇಮ್ಮಡಿ ತೈಲಪ ಹಾಗೂ ಆತನ ಮಗನಾದ ಸತ್ಯಾಶ್ರಯ ಇಱುವಬೆಡಂಗ.

     ರನ್ನನ ಕೃತಿಗಳು ಯಾವುವೆಂದರೆ 'ಪರಶುರಾಮಚರಿತ', 'ಚಕ್ರೇಶ್ವರ ಚರಿತ', 'ಸಾಹಸಭೀಮ ವಿಜಯ'ಅಥವಾ 'ಗದಾಯುದ್ಧ'ಹಾಗೂ 'ಅಜಿತ ತೀರ್ಥಕರ ಪುರಾಣ ತಿಲಕ'.  ಅಲ್ಲದೆ 'ರನ್ನಕಂದ' ಎಂಬ ನಿಘಂಟೊಂದನ್ನು ರಚಿಸಿದ್ದಾರೆ.  ಚಾಲುಕ್ಯ ಚಕ್ರವರ್ತಿಯ ಅಸ್ಥಾನದಲ್ಲಿ 'ಸಾಹಸಭೀಮವಿಜಯ'ವನ್ನು ರಚಿಸಿ 'ಕವಿಚಕ್ರವರ್ತಿ' ಎಂಬ ಬಿರುದಿಗೆ ಪಾತ್ರನಾಗಿದ್ದಾರೆ.