Bhavana sakleshpur
ಮನುಷ್ಯರಿಗೆ ಮತ್ತು ಪರಿಸರಕ್ಕೆ ಹಾನಿಯನ್ನುಂಟುಮಾಡಬಲ್ಲ ಗಾಳಿಯಲ್ಲಿನ ವಸ್ತುವೊಂದಕ್ಕೆ ವಾಯು ಮಾಲಿನ್ಯಕಾರಕ ಎಂದು ಹೆಸರು. ಮಾಲಿನ್ಯಕಾರಕಗಳು ಘನರೂಪದ ಕಣಗಳು, ದ್ರವರೂಪದ ಸಣ್ಣಹನಿಗಳು ಅಥವಾ ಅನಿಲಗಳ ಸ್ವರೂಪದಲ್ಲಿರಬಹುದು. ಇವೆಲ್ಲದರ ಜೊತೆಗೆ ಅವು ಸ್ವಾಭಾವಿಕ ಅಥವಾ ಮಾನವ ನಿರ್ಮಿತವಾಗಿಯೂ ಇರಬಹುದು.
ಮಾಲಿನ್ಯಕಾರಕಗಳನ್ನು ಪ್ರಾಥಮಿಕ ಅಥವಾ ದ್ವಿತೀಯಕಗಳೆಂದು ವರ್ಗೀಕರಿಸಬಹುದು.ಅಗ್ನಿಪರ್ವತದ ವಿಸ್ಫೋಟದಿಂದ ಹೊರಬಂದ ಬೂದಿ, ಮೋಟಾರು ವಾಹನವು ಹೊರಬಿಟ್ಟ ಗಾಳಿಯಿಂದ ಬಂದ ಇಂಗಾಲದ ಮಾನಾಕ್ಸೈಡ್ ಅನಿಲ ಅಥವಾ ಕಾರ್ಖಾನೆಗಳಿಂದ ಬಿಡುಗಡೆ ಮಾಡಲ್ಪಟ್ಟ ಗಂಧಕದ ಡೈಯಾಕ್ಸೈಡ್- ಈ ರೀತಿಯಲ್ಲಿ ಒಂದು ಪ್ರಕ್ರಿಯೆಯಿಂದ ನೇರವಾಗಿ ಹೊರಹೊಮ್ಮಿರುವ ವಸ್ತುಗಳನ್ನು ಸಾಮಾನ್ಯವಾಗಿ ಪ್ರಾಥಮಿಕ ಮಾಲಿನ್ಯಕಾರಕಗಳು ಎನ್ನಲಾಗುತ್ತದೆ.
ದ್ವಿತೀಯಕ ಮಾಲಿನ್ಯಕಾರಕಗಳು ನೇರವಾಗಿ ಹೊರಹೊಮ್ಮಿದ ವಸ್ತುಗಳಲ್ಲ. ಕೆಲವೊಂದು ಮಾಲಿನ್ಯಕಾರಕಗಳು ಪ್ರಾಥಮಿಕ ಮತ್ತು ದ್ವಿತೀಯಕ ಸ್ವರೂಪಗಳೆರಡರಲ್ಲಿಯೂ ಇರುತ್ತವೆ ಎಂಬುದನ್ನಿಲ್ಲಿ ಗಮನಿಸಬೇಕು. ಅಂದರೆ ಅವು ನೇರವಾಗಿಯೂ ಹೊರಹಾಕಲ್ಪಟ್ಟಿರುತ್ತವೆ ಮತ್ತು ಇತರ ಪ್ರಾಥಮಿಕ ಮಾಲಿನ್ಯಕಾರಕಗಳಿಂದಲೂ ಸಹ ರೂಪುಗೊಂಡಿರುತ್ತವೆ.
ಮಾನವನ ಕಾರ್ಯಚಟುವಟಿಕೆಯ ಕಾರಣದಿಂದ ಉತ್ಪತ್ತಿಯಾಗುವ ಪ್ರಮುಖ ಪ್ರಾಥಮಿಕ ಮಾಲಿನ್ಯಕಾರಕಗಳಲ್ಲಿ ಈ ಕೆಳಗಿನವು ಸೇರಿವೆ:
ವಾಹನಗಳಲ್ಲಿ, ವಿದ್ಯುತ್ ಸ್ಥಾವರಗಳಲ್ಲಿ ಹಾಗೂ ಬಗೆಬಗೆಯ ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಪಳೆಯುಳಿಕೆ ಇಂಧನಗಳನ್ನು ಉರಿಸುವುದು ಇವೇ ಮೊದಲಾದ ಮಾನವ ಚಟುವಟಿಕೆಗಳೂ ಸಹ ಗಣನೀಯ ಪ್ರಮಾಣದ ದೂಳನ್ನು (ಎರೊಸೋಲ್) ಉತ್ಪತ್ತಿ ಮಾಡುತ್ತವೆ.
Start a discussion with Bhavana sakleshpur
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Bhavana sakleshpur. What you say here will be public for others to see.