ಕನ್ನಡ ವನ್ನು ಯಾರು ಹೆಚ್ಚು ಬಳಕೆ ಮಾಡೊದಿಲ್ಲ ಯಾಕೆ?

ಉ: ಕನ್ನಡವನ್ನು ಓದಲು ಬರುವ ವ್ಯಕ್ತಿಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದಾರೆ, ಹಾಗೂ ಜನರಿಗೆ ವಿಕಿಪೀಡಿಯಕ್ಕಿಂತ ಒಳ್ಳೆಯ ಮಾಹಿತಿಯನ್ನು ಬ್ಲಾಗುಗಳು ಕೊಡುತ್ತಿವೆ. ಹಾಗಾಗಿ, ಬ್ಲಾಗ್ ಬರೆಯುವ ಜನರು, ವಿಕಿಪೀಡಿಯ ಸಂಪಾದಿಸಿದರೆ ಮಾತ್ರ ಇದರ ಉಳಿವು ಸಾಧ್ಯ. ಜೊತೆಗೆ, ಕನ್ನಡ ವಿಕಿಪೀಡಿಯ ಸಮುದಾಯದಲ್ಲಿ ಒಗ್ಗಟ್ಟು ಮಾಯವಾಗಿದೆಯೆಂದು ವಿಕಿಮೀಡಿಯ ಸಮೇಕ್ಷೆಯಲ್ಲಿ ತಿಳಿದು ಬಂದಿದೆ. ಅಭಿರಾಮ ೧೨:೪೮, ೪ ಜನವರಿ ೨೦೧೨ (UTC)
ಕನ್ನಡದ ಬಳಕೆ ಕಡಿಮೆಯಾಗಲು ಕನ್ನಡಿಗರು ಆಂಗ್ಲ, ಹಿಂದೀ, ತಮಿಳು - ಹೀಗೆ ಇತರ ಭಾಷೆಗಳನ್ನೇ ಬಳಸುವುದೇ ಕಾರಣವಿರಬಹುದು. ಅಭಿರಾಮ ಅವರು ಹೇಳಿರುವ ವಿಷಯ ಸ್ವಲ್ಪ ಮಟ್ಟಿಗೆ ನಿಜವೇ ಆಗಿದ್ದರೂ, ಕನ್ನಡವನ್ನು ಹೆಚ್ಚು ಜನ ಬಳಕೆ ಮಾಡುತ್ತಿಲ್ಲ ಎನ್ನುವ ಬದಲು, ನಾವೇ ಕೆಲವು ಲೇಖನಗಳನ್ನಾಗಲಿ, ಹೊಸ ವಿಷಯಗಳನ್ನಾಗಲಿ ಸೇರಿಸಬಹುದು. ಅಲ್ಲದೆ, ನಮಗೆ ಪರಿಚಿತರಿಗೂ ಕೂಡ ವಿಕಿಪೀಡಿಯದ ಬಗ್ಗೆ ತಿಳಿಸಿ, ಅವರೂ ಸಂಪಾದನೆ ಮಾಡುವಂತೆ ಮಾಡಬಹುದು. ಬ್ಲಾಗುಗಳಲ್ಲಿ ಕಂಡ ಉತ್ತಮ ಮಾಹಿತಿಗಳನ್ನೂ ಸಹ ಆಯಾ ಲೇಖಕರ ಒಪ್ಪಿಗೆ ಪಡೆದು ವಿಕಿಪೀಡಿಯಕ್ಕೆ ಸೇರಿಸಬಹುದು. ಅದರಿಂದ ಅವರಿಗೂ ವಿಕಿಪೀಡಿಯದ ಬಗ್ಗೆ ಅಭಿಮಾನ ಮೂಡಿ, ಅವರೂ ಸಹ ಸಂಪಾದಕರಾಗಲು ಸಹಾಯವಾಗುತ್ತದೆ. ~ ಹರೀಶ / ಚರ್ಚೆ / ಕಾಣಿಕೆಗಳು ೧೭:೪೪, ೪ ಜನವರಿ ೨೦೧೨ (UTC)
ಕನ್ನಡದ ಬಳಕೆ ಕಡಿಮೆಯಾಗಲು ಕನ್ನಡಿಗರು ಬೇರೆ ಭಾಷೆಗಳನ್ನು ಬಳಸುತ್ತಾರೆನ್ನುವುದನ್ನು ಹೇಳಲಾಗುವುದಿಲ್ಲ, ಆದರೆ, ಕನ್ನಡಿಗರು ಬೇರೆ ಭಾಷೆಯ ಜೊತೆಗೆ ಕನ್ನಡವನ್ನ್ನೂ ಬಳಸಬೇಕು ಹಾಗು ಓದಲು, ಬರೆಯಲು ಕಲಿಯಬೇಕು. ಬೇರೆ ಭಾಷೆ ಬಳಸಿದ ಮಾತ್ರಕ್ಕೆ ಕನ್ನಡವನ್ನು ಬಿಡಬೇಕು ಎನ್ನುವುದು ಸತ್ಯವಲ್ಲ ಅಭಿರಾಮ ೧೩:೩೮, ೫ ಜನವರಿ ೨೦೧೨ (UTC)
ನಿಮ್ಮ ಮಾತು ಸತ್ಯ, ವಿಕಿಪೀಡಿಯ ಅಥವಾ ಇನ್ಯಾವುದೇ ಸಾಮಾಜಿಕ ತಾಣಗಳಲ್ಲಿ ವಿಹರಿಸುವ ಹೊಸಬರನ್ನು, ಆಗಾಗ್ಗೆ ಬಂದು ಹೋಗುವವರನ್ನು ಒಂದೆಡೆ ಸೇರಿಸಿ ಕಲೆಹಾಕಿ, ಎಲ್ಲರಿಗೂ ಬೇಕೆನಿಸುವ ಯೋಜನೆಗಳಿಗೆ ಮುನ್ನುಡಿ ಬರೆಯಬೇಕು. ಪ್ರೋತ್ಸಾಹ , ಸಹಾಯ , ಸ್ಪೂರ್ತಿ ಇದೇ ಮುಂತಾದವುಗಳು ಕನ್ನಡ ವಿಕಿಪೀಡಿಯದ ಪುಟಗಳನ್ನು ಉತ್ಕೃಷ್ಟ ಮಾಡಬಲ್ಲವು. ೧೨ನೇ ಜನವರಿ ೨೦೧೨ ಕನ್ನಡ ವಿಕಿಪೀಡಿಯಕ್ಕೆ ೯ ವರ್ಷದ ಪ್ರಾಯ. ಈ ದಿನವನ್ನು ಹೊಸಬರಿಗೆ ವಿಕಿಪೀಡಿಯ ಪರಿಚರಿಸುವುದರಿಂದ ಮತ್ತು ಹಳಬರನ್ನು ಮತ್ತೆ ಕರೆತರುವುದರ ಮೂಲಕ ಪ್ರಾರಂಭಿಸೋಣವೇ? ~ ಓಂಶಿವಪ್ರಕಾಶ್ / ಚರ್ಚೆ ೨೦:೫೭, ೫ ಜನವರಿ, ೨೦೧೨ (UTC)
ಓಂಶಿವಪ್ರಕಾಶರವರೇ, ಇದು ಕನ್ನಡ ವಿಕಿಪೀಡಿಯಾಕ್ಕೆ ಒಂದು ಹೊಸ ಆಯಾಮ ತಂದು ಕೊಡುತ್ತದೆ.. ಇದರ ಪರವಾಗಿ ಎಲ್ಲಾ ಸದಸ್ಯರ ಜೊತೆ ಚರ್ಚಿಸಿ ಅನಂತರ ಮುಂದುವರಿಯುವುದು ಸೂಕ್ತ ಆದರೆ, ಜನವರಿ ೧೨ರಂದು ಎಲ್ಲರನ್ನು ಕಲೆ ಹಾಕ ಬೇಕಾಗಿದೆ. ಇದನ್ನು ವಿಚಾರಮಂಡಪದಲ್ಲಿ ವಿಚಾರಮಾಡಬೇಕು. ಇವೆಲ್ಲದರ ಬಗ್ಗೆ ನನ್ನ ಸಮ್ಮತವಿದೆ. ಉಳಿದ ಸದಸ್ಯರನ್ನು ಒಂದುಗೂಡಿಸುವುದು ಅತ್ಯಂತ ಉತ್ತಮ ಹಾಗು ಕಷ್ಟಕರ ಆದರೆ ಅಸಾಧ್ಯವೆಂದಲ್ಲ. ನನ್ನನ್ನು ವಿದ್ಯುನ್ಮಾನಪತ್ರ ಅಥವಾ ಸಂದೇಶದ ಮೂಲಕ ಸಂಪರ್ಕಿಸಿ. ನನ್ನ ದೂರವಾಣಿ ಸಂಖ್ಯೆಯನ್ನು ನಿಮಗೆ ವಿದ್ಯುನ್ಮಾನಸಂದೇಶದ ಮೂಲಕ ಕಳುಹಿಸಿರುತ್ತೇನೆ. ಸಂಪರ್ಕಿಸಲು ಮರೆಯಬೇಡಿ.ಅಭಿರಾಮ ೧೬:೦೯, ೫ ಜನವರಿ ೨೦೧೨ (UTC)

ನಿಮ್ಮ ಖಾತೆಯ ಹೆಸರನ್ನು ಬದಲಾಯಿಸಲಾಗುತ್ತದೆ

ಬದಲಾಯಿಸಿ

೦೩:೦೪, ೧೮ ಮಾರ್ಚ್ ೨೦೧೫ (UTC)

೦೯:೨೦, ೧೯ ಏಪ್ರಿಲ್ ೨೦೧೫ (UTC)