Anusha alfonsa
ಅಮ್ಮಂದಿರ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದ ಅಮ್ಮಂದಿರ ಪ್ರಪಂಚವೇ ಅಂಥಹದು. ತನ್ನ ಮಕ್ಕಳು, ಗಂಡ ಇವೇ ಅವಳಿಗೆ ಗೊತ್ತಿರುವ ಜಗತ್ತು. ಅಲ್ಲಿಂದ ಹೊರ ಬರುವ ಅವಕಾಶ ಇದ್ದರೂ ಆಕೆಗೆ ಅದರಲ್ಲೇ ಸಂತೋಷವಿದೆ. ತೃಪ್ತಿಯಿದೆ. ಪ್ರತಿಯೊಂದು ದಿನವೂ ಅಮ್ಮಂದಿರ ದಿನವೇ. ಅಮ್ಮನ ವಾತ್ಸಲ್ಯ, ಪ್ರೀತಿಯ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ.
"ತಾಯಿಗಿಂತ ಬಂಧುವಿಲ್ಲ. ಉಪ್ಪಿಗಿಂತಾ ರುಚಿ ಇಲ್ಲ" ಹೌದು... ಗಾದೆಗಳೆಲ್ಲಾ ಅನುಭವದ ಮಾತುಗಳೇ. ಈ ಗಾದೆ ಎಷ್ಟು ಅರ್ಥಬದ್ಧವಾಗಿ ತಾಯಿಯ ಪ್ರಾಮುಖ್ಯತೆಯನ್ನು ಹೇಳುತ್ತಿದೆ. ತಾಯಿಯೇ ಮಕ್ಕಳ ಪಾಲಿಗೆ ಅಪರಂಜಿ ಮನಸಿನ ಸಂಬಂಧಿ. ತಾಯಿಯೇ ಜೀವಂತ ದೇವತೆ. ಮಕ್ಕಳನ್ನು ಹೆತ್ತು ಹೊತ್ತು ಒಂದು ಒಳ್ಳೆಯ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಪ್ರಧಾನವಾದದ್ದು. ತಾಯಿಯೇ ಮಕ್ಕಳ ಒಳ್ಳೆಯ ಭವಿಷ್ಯ ನಿರ್ಮಿಸುವ ಶಿಲ್ಪಿಯಾಗಿರುತ್ತಾಳೆ ಎಂಬುದೆಲ್ಲ ಸರ್ವಕಾಲಿಕ ಸತ್ಯ. ಇದು ಯಾವ ಕಾಲಕ್ಕೂ ಬದಲಾಗಲೂ ಸಾಧ್ಯವೇ ಇಲ್ಲ.[ಮಕ್ಕಳ ಕಳೆದುಕೊಂಡ ಅಮ್ಮಂದಿರ ಗೋಳು ಕೇಳೋರ್ಯಾರು?] ನಾನು ಬೆಳಗ್ಗೆ ಏಳುವದು ದಿನಾಲೂ ತಡವಾಗುತ್ತದೆ. ಕಾಲೇಜಿಗೆ ಹೋಗಬೇಕು ,ಬೇಗ ಏಳೋಕೆ ಆಗಲ್ಲಾ ಎನ್ನುವ ಅಮ್ಮನ ಮಂತ್ರಾಕ್ಷತೆ ದಿನವೂ ತಪ್ಪದೇ ಸಿಗುತ್ತದೆ. ಒಂದು ದಿನ ಕಾಲೇಜಿಗೆ ಹೊರಡುವದು ಸ್ವಲ್ಪ ತಡವಾಗಿತ್ತು. ಅಮ್ಮನು ನನ್ನ ಹಿಂದೆ ಗೇಟ್ ತನಕ ಬಂದಳು. ಅಮ್ಮ ನೀನೇಕೆ ಬಂದೆ? ನನ್ನ ಹಿಂದೆ ಎಂದು ಕೇಳಿದೆ. ನಿನಗೆ ಲೇಟ್ ಆಗುತ್ತದೆಯಲ್ಲಾ ಅದಕ್ಕೆ ನೀನು ಗಾಡಿ ತೆಗೆದುಕೊಂಡು ಬರುವಷ್ಟರಲ್ಲಿ ನಾನು ಗೇಟ್ ತೆಗೆಯಲು ಬಂದೆ ಎಂದು ಹೇಳಿದಳು.
ಅಮ್ಮಾ ನೀನು ನನ್ನ ಸೇವಕಿಯಲ್ಲ. ಇನ್ನು ಮುಂದೆ ಈತರ ಮಾಡಬೇಡ ಎಂದು ಹೇಳಿದೆ. ನನಗೆ ಅಮ್ಮನ ನೋಡಿ ಪಾಪ ಎನಿಸಿತ್ತು. ತಾಯಿ ಮಕ್ಕಳ ವಿಷಯದಲ್ಲಿ ಎಷ್ಟು ಮುಗ್ಧಳಾಗುತ್ತಾಳೆ. ನನಗೆ ಲೇಟ್ ಆಗುತ್ತಿದೆ ಎಂದು ಎನಿಸಿ ಅವಳ ಕೆಲಸವನ್ನು ಬಿಟ್ಟು ನನಗೆ ಗೇಟ್ ತೆಗೆಯಲು ಸಹಿತ ಬಂದಳು. ಏನು ಅರಿಯದ ಕಂದಮ್ಮನ ಭಾವ ಅವಳಲ್ಲಿ ಕಾಣುತ್ತಿತ್ತು.[ಅಮ್ಮನ ದಿನದ ವಿಶೇಷ : ಬಿಗ್ ಎಫ್ಎಂನಲ್ಲಿ ಪ್ರಪ್ರಥಮ ರೇಡಿಯೋ ಸಿನೆಮಾ]
ಹೆಣ್ಣು ತಾಯಿಯಾದಾಗ ಅವಳಲ್ಲಿನ ಆಸೆಗಳು ಬತ್ತು ಹೋಗುತ್ತವೆ ಎಂದು ಅನಿಸುತ್ತೆ. ಮಗು ಜನಿಸಿದಾಗ ಒಂದು ಹೆಣ್ಣು ತಾಯಿಯಾಗಿ ತನಗೆ ತಾನೆ ಜನ್ಮ ನೀಡಿಕೊಳ್ಳುತ್ತಾಳೆ. ತಾಯಿಯ ನಿಸ್ವಾರ್ಥದ ಸಂವೇದನೆ ಅವಳ ಅಂತಃಕರಣವನ್ನು ಆವರಿಸುತ್ತವೆ. ಅಮ್ಮನ ಹತ್ತಿರ ನಿನಗೆ ನಿನ್ನದೇ ಆದ ಆಸೆಗಳಿಲ್ಲವಾ? ಎಂದು ಕೇಳಿದರೆ ನಿಮ್ಮೆಲ್ಲರ ಆಸೆನೇ ನನ್ನಾಸೆ. ನೀವೆಲ್ಲಾ ಚೆನಾಗಿದ್ದರೆ ಸಾಕು ಎನ್ನುತ್ತಾಳೆ.
ಬಹುಷಃ ಈ ತಾಯಿಯಂದಿರೆ ಹೀಗೆ .ಮಕ್ಕಳಿಗಾಗಿ ತಮ್ಮ ಆಸೆಗಳನ್ನೆ ಒಣಗಿಸಿ ಬಿಡುತ್ತಾರೆ. ಒಣಗಿದ ಮೇಲೆ ಮತ್ತೆ ಆ ಆಸೆಗಳು ಚಿಗುರಲು ಹೇಗೆ ಸಾಧ್ಯ? ತನ್ನ ಸ್ವಾರ್ಥಗಳನ್ನು ಅಡಗಿಸಿಕೊಂಡು ಮಕ್ಕಳಿಗೆ ತನ್ನ ಜೀವನವನ್ನು ಮೀಸಲಿಡುತ್ತಾಳೆ. ನಿಸ್ವಾರ್ಥದ ಭಾವಗಳು ಅವಳಲ್ಲಿ ಸ್ವಾಭಾವಿಕವಾಗಿ ಹುಟ್ಟಿಕೊಳ್ಳುತ್ತಾ ಹೋಗುತ್ತವೆ. ತುಂಬು ಮನಸಿನಿಂದ ಒಬ್ಬ ಶಿಕ್ಷಕಿಯಾಗಿ, ಹತ್ತಿರದ ಗೆಳತಿಯಾಗಿ ಮಕ್ಕಳಲ್ಲಿ ಪ್ರೀತಿ ,ಸ್ನೇಹದ ಮಧುರ ಭಾವನೆಗಳನ್ನು ಮಕ್ಕಳ ಮನದಲ್ಲಿ ತುಂಬಿಸುತ್ತಾ ಹೋಗುತ್ತಾಳೆ.
ಮಕ್ಕಳ ಜಗತ್ತಿನಲ್ಲಿ ಅವಳು ಅವಳನ್ನೇ ಮರೆಯುತ್ತಾಳೆ. ಎಷ್ಟರ ಮಟ್ಟಿಗೆ ಅವಳು ನಿಸ್ವಾರ್ಥಿಯಾಗುತ್ತಾಳೆಂದರೆ ದೇವರೆ ನನಗೆ ಏನಾದರೂ ಪರವಾಗಿಲ್ಲ,ನನ್ನ ಮಕ್ಕಳನ್ನು ಚೆನ್ನಾಗಿಡು ಎಂದು ದೇವರಲ್ಲಿ ಪ್ರಾರ್ಥಿಸುತ್ತಾಳೆ. ಅವಳ ಯೋಚನಾ ಲಹರಿಗಳು ಕೇವಲ ಮಕ್ಕಳಿಗಾಗಿಯೇ ಇರುತ್ತವೆ. ಅವಳ ಹೃದಯ ಹಾಗೂ ಮನಸಿಗೆ ಮಕ್ಕಳನ್ನು ಪ್ರೀತಿಸುವದು ಮಾತ್ರ ಗೊತ್ತಿರುತ್ತದೆ. ಅವಳ ಯೋಚನೆ ಹಾಗೂ ಯೊಜನೆಗಳು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವದರಲ್ಲೇ ಕೂಡಿಕೊಂಡಿರುತ್ತದೆ. ಒಟ್ಟಿನಲ್ಲಿ ಅವಳಲ್ಲಿ ಅವಳ ಜಗತ್ತು ಮಾಯವಾಗಿ ಕೇವಲ ಮಕ್ಕಳೇ ಅವಳ ಪ್ರಪಂಚವಾಗಿರುತ್ತದೆ
Start a discussion with Anusha alfonsa
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Anusha alfonsa. What you say here will be public for others to see.