AkshathR43
ಧೂಮಪಾನ ತಂಬಾಕು ಸೇವನೆ ಮತ್ತು ತಂಬಾಕಿನ ಧೂಮಪಾನ (tobacco smoking) ಜಗತ್ತಿನಾದ್ಯಂತ ಕಂಡುಬರುವ ಮಾನವ ಚಟುವಟಿಕೆಯಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಇದಕ್ಕೆ ಸಮಾಜದಲ್ಲಿ ಪ್ರಬಲವಾದ ವಿರೋಧಗಳು ಉಂಟಾಗಿದ್ದು ಅನೇಕ ಧೂಮಪಾನಿಗಳು ಈ ಚಟದಿಂದ ಮುಕ್ತರಾಗಲು ಪ್ರಯತ್ನಿಸುತ್ತಿದ್ದಾರೆ.ಸಾವಿರಾರು ವರ್ಷಗಳಿಂದ ಮಧ್ಯ ಅಮೇರಿಕದಲ್ಲಿನ ನಿವಾಸಿಗಳಾಗಿದ್ದ ಮಾಯಾ ಜನರು (Maya) ತಂಬಾಕು ಧೂಮ ಸೇವನೆ ಮಾಡಿದ್ದರು.ಕ್ರಿ. ಶ. ಹದಿನೈದನೆಯ ಶತಮಾನದಲ್ಲಿ ಯುರೋಪಿಯನ್ನರು ಜಲಪರ್ಯಟನೆ ಮಾಡಿ ಮಧ್ಯ ಅಮೇರಿಕೆಯನ್ನು ಶೋಧಿಸಿದಾಗ, ಅಲ್ಲಿನ ಜನರು ವೈಯಕ್ತಿಕವಾಗಿ ಮತ್ತು ಕೆಲವು ಸಲ ಧಾರ್ಮಿಕ ಸಂದರ್ಭಗಳಲ್ಲಿ ಸಾಮೂಹಿಕವಾಗಿ ಸೇದುಗೊಳಿವೆಗಳಲ್ಲಿ ತಂಬಾಕು ಎಲೆಗಳನ್ನು ಜ್ವಲಿಸಿ ಅದರ ಧೂಮಪಾನ ಮಾಡುವದನ್ನು ಕಂಡು ಕುತೂಹಲದಿಂದ ತಾವೂ ಅದನ್ನು ಅನುಸರಿಸಿದರು. ತಂಬಾಕು ಸಸ್ಯವನ್ನು ತಮ್ಮೊಂದಿಗೆ ಯುರೋಪು ಖಂಡಕ್ಕೆ ತಂದರು. ಆಮೇಲೆ ಯುರೋಪಿಯನ್ನರು ತಾವು ವಲಸೆ ಹೋದ ವಿವಿಧ ದೇಶಗಳಲ್ಲಿ ಈ ಸಸ್ಯವನ್ನು ಬೆಳೆಯಲು ಪ್ರಾರಂಭಿಸಿದರು. ಹೀಗೆ ತಂಬಾಕು ಸಸ್ಯ ಕೆಲವು ಶತಮಾನಗಳಲ್ಲಿ ಜಾಗತಿಕ ಸಸ್ಯವಾಯಿತಲ್ಲದೇ ಜಗತ್ತಿನಾದ್ಯಂತ ತಂಬಾಕು ಸೇವನೆ ಅದರ ಧೂಮಪಾನಗಳು ಪ್ರಾರಂಭವಾದವು. ಯುರೋಪಿನಲ್ಲಿ ಮೊದಮೊದಲು ತಂಬಾಕು ಧೂಮಪಾನವು ಪ್ರತಿಷ್ಠಿತ ವರ್ಗದ ಜನರ ಹವ್ಯಾಸವಾಗಿದ್ದಿತು. ಕ್ರಮೇಣ ಎಲ್ಲ ವರ್ಗದ ಜನರು ಅದಕ್ಕೆ ಬಲಿಯಾದರು.ತಂಬಾಕು ಎಲೆಗಳನ್ನು ಪರಿಷ್ಕರಿಸಿ ತಂಬಾಕು ಎಲೆಗಳಲ್ಲಿ ಸುರುಳಿ ಸುತ್ತಿ ಅದರ ಒಂದು ತುದಿಯನ್ನುಜ್ವಲಿಸಿ ಇನ್ನೊಂದು ತುದಿಯನ್ನು ಬಾಯಿಯಲ್ಲಿ ಇಟ್ಟುಕೊಳ್ಳುವ ಸಿಗಾರ್ (cigar) ಮೊದಲಿಗೆ ಬಳಕೆಯಲ್ಲಿ ಬಂದಿತು. ಅನೇಕರು ಇಂಥ ಸಿಗಾರ್ ಗಳನ್ನು ಸೇದಿ ಅಳಿದುಳಿದ ತುಣುಕುಗಳನ್ನು ಬೀದಿಯಲ್ಲಿ ಎಸೆದಾಗ ಸಮಾಜದಲ್ಲಿನ ಕೆಲವು ಬಡಬಗ್ಗರು ಆ ತುಣುಕುಗಳನ್ನು ಬೀದಿಯಲ್ಲಿ ಹೆಕ್ಕಿ ತೆಗೆದು ಅದರಲ್ಲಿರುವ ತಂಬಾಕು ಎಲೆಗಳನ್ನು ಸಂಗ್ರಹಿಸಿ, ನಂತರ ಅವುಗಳನ್ನು ಒಂದು ಹಾಳೆಯಲ್ಲಿ ಸುತ್ತಿ ಅದನ್ನು ಜ್ವಲಿಸಿ ಸೇದತೊಡಗಿದರಂತೆ! ಇದನ್ನೇ ಸಿಗಾರೆಟ್ (cigarette) ಎಂದು ಕರೆದರು ! ಈ ತರಹದ ಅನಿರೀಕ್ಷಿತ ಆವಿಷ್ಕಾರದ ಸ್ಫೂರ್ತಿಯಿಂದ ಕೆಲವರು ಸಿಗಾರೆಟ್ ತಯಾರಿಸುವ ಯಂತ್ರ ನಿರ್ಮಿಸಿದರು. ಹೀಗಾಗಿ ಶೀಘ್ರವೇ ಸಿಗಾರೆಟ್ ಜಾಗತಿಕ ಮಾರುಕಟ್ಟೆಗೆ ಬರತೊಡಗಿತು!ಸಿಗಾರೆಟ್ ಅಲ್ಲದೇ ತಂಬಾಕು ವಿವಿಧ ರೂಪಗಳಲ್ಲಿ ಧೂಮವನ್ನು ಒದಗಿಸುತ್ತದೆ. ಸಿಗಾರ್, ಚಿಲುಮೆ ಅಥವಾ ತಂಬಾಕು ಸೇದುಗೊಳಿವೆ (tobacco pipe), ಭಾರತದಲ್ಲಿ ಬೀಡಿ (beedi) ಗುಡಗುಡಿ ಇಂಥ ಸಾಧನಗಳಾಗಿವೆ. ತಂಬಾಕು ಎಲೆಯಿಂದ ಸೃಷ್ಟಿಯಾದ ನಸ್ಯ (tobacco snuff), ಎಲೆಯಡಿಕೆಯೊಂದಿಗೆ ಬಳಸುವ ತಂಬಾಕು ರಸಕವಳ (tobacco chewing) ಕೆಲವರ ಚಟವಾಗಿದೆ. ಬಾಯಿಯಲ್ಲಿ ತಂಬಾಕು ಜಗಿಯುವದು ಪೌರ್ವಾತ್ಯ ದೇಶಗಳಲ್ಲಿ ಹೆಚ್ಚು ಕಂಡುಬರುತ್ತದೆ.ಇಪ್ಪತ್ತನೆಯ ಶತಮಾನದಲ್ಲಿ ಯುರೋಪಿನಲ್ಲಿ ಸಿಗರೇಟು ಸೇದುವವರ ಸಂಖ್ಯೆ ಹೆಚ್ಚಿತಲ್ಲದೇ ಮಹಾಯುದ್ಧಗಳ ಸಮಯದಲ್ಲಿ ಯುರೋಪಿನ ಸಾಮಾನ್ಯ ಸ್ತ್ರೀಯರೂ ಧೂಮಪಾನಕ್ಕೆ ತೊಡಗಿದರು. ಧೂಮಪಾನ ಸಾಮಾಜಿಕ ಪ್ರತಿಷ್ಠೆಯಾಗಿ ಕಂಡುಬಂದಿತು.ತಂಬಾಕಿನಲ್ಲಿರುವ ವಿವಿಧ ರಾಸಾಯನಿಕಗಳನ್ನು ತಜ್ಞರು ಅಭ್ಯಸಿಸಿದ್ದು ಅದರಲ್ಲಿ ಸಾವಿರಾರು ಬಗೆಯರಾಸಾಯನಿಕಗಳನ್ನು ಕಂಡುಹಿಡಿದಿದ್ದಾರೆ. ವಿವಿಧ ಪ್ರಮಾಣಗಳಲ್ಲಿರುವ ಈ ರಾಸಾಯನಿಕಗಳಲ್ಲಿ ಅನೇಕ ಆರೋಗ್ಯಕ್ಕೆ ಅಪಾಯ ತರುವ ರಾಸಾಯನಿಕಗಳನ್ನು ಗುರುತಿಸಿದ್ದಾರೆ.ತಂಬಾಕಿನಲ್ಲಿರುವ ರಾಸಾಯನಿಕಗಳನ್ನು ಹಾಗು ತಂಬಾಕು ಧೂಮಪಾನದ ಕಾಲದಲ್ಲಿ ಉತ್ಪಾದಿತವಾಗುವ ರಾಸಾಯನಿಕಗಳನ್ನು ನಮ್ಮ ಆರೋಗ್ಯದ ದೃಷ್ಟಿಯಿಂದ ನಾಲ್ಕು ಮುಖ್ಯ ಪ್ರಕಾರಗಳಲ್ಲಿ ವಿಂಗಡಿಸಬಹುದು. (೧) ನಿಕೊಟೀನ್ (nicotine) (೨) ಕ್ಯಾನ್ಸರೋತ್ಪಾದಕಗಳು (carcinogens) (೩) ಕೆರಳಿಕಗಳು (irritants) ಹಾಗು (೪) ಕಾರ್ಬನ್ ಮೊನಾಕ್ಸಾಯ್ಡ್ (carbon monoxide).
ದುಷ್ಪರಿಣಾಮಗಳು:
ಧೂಮಪಾನಿಗಳಲ್ಲಿ ಶ್ವಾಸಕೋಶದ (lung cancer) ಏಡಿಗಂತಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಹೃದಯದ ಕಿರೀಟನಾಳಗಳಲ್ಲಿ (coronary arteries) ಗಡುಸುಗಟ್ಟಿ ರಕ್ತಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಧೂಮಪಾನಿಗಳು ಹೃದಯವೇದನೆ (angina), ಹೃದಯಾಘಾತ (myocardial infarction) ಮತ್ತು ಆ ಮೂಲಕ ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚಿವೆ. ಅರ್ಧಾಂಗವಾಯು (paralysis) ಆಗುವ ಸಾಧ್ಯತೆ ಹೆಚ್ಚು. ದೇಹದ ಎಲ್ಲ ಭಾಗಗಳ ರಕ್ತನಾಳಗಳೂ ಈ ಬಗೆಯ ತೊಂದರೆಗೊಳಗಾಗುವದರಿಂದ ಕೈಕಾಲುಗಳಲ್ಲಿ ನೋವು, ರಕ್ತಸಂಚಾರಕ್ಕೆ ಅಡೆತಡೆಯಾಗಿ ಸರಿಯಾಗಿ ನಡೆದಾಡಲು ತೊಂದರೆ ಅನುಭವಿಸುತ್ತಾರೆ. ರಕ್ತಸಂಚಾರದ ಅತಿಯಾದ ಅಡೆತಡೆಯಿಂದ ಕಾಲುಗಳಲ್ಲಿ ಗ್ಯಾಂಗ್ರೀನ್ ಆಗಿ ಕೆಲವರು ಶಸ್ತ್ರಚಿಕಿತ್ಸೆಯಿಂದ ಕಾಲು ಕತ್ತರಿಸಿಕೊಳ್ಳುವ ಸಾಧ್ಯತೆಯೂ ಇದೆ.ಧೂಮಪಾನಿಗಳಲ್ಲಿ ಜಠರದ ವೃಣ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುವದು, ಜಠರ ರಸದ ಸ್ರವಿಸುವಿಕೆ ಹೆಚ್ಚಿ ಹೊಟ್ಟೆನೋವಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಿದೆ. ಜಠರದಲ್ಲಿ ಉಂಟಾದ ವೃಣಗಳು (ulcers) ಬೇಗನೇ ವಾಸಿಯಾಗಲಾರವು.ವಯಸ್ಸು ವೃದ್ಧಿಸಿದಂತೆ ನಮ್ಮ ಮೂಳೆಗಳು ತಮ್ಮ ನೈಸರ್ಗಿಕ ಗಡುಸುತನವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿಗೆ ಇದ್ದು ಅಂಥ ಎಲುಬುಗಳು ಜೊಳ್ಳೆಲುಬುಗಳಾಗಿ (osteoporosis) ಮಾರ್ಪಡುವ ಸಂಭವವಿದೆ. ಈ ಸ್ಥಿತಿಯಲ್ಲಿರುವ ಎಲುಬುಗಳು ಚಿಕ್ಕಪುಟ್ಟ ಆಘಾತಗಳಿಂದ ಮುರಿಯುವ ಸ್ಥಿತಿಯಲ್ಲಿರುತ್ತವೆ. ಧೂಮಪಾನಿಗಳು ಜೊಳ್ಳೆಲುಬುಗಳನ್ನು (osteoporosis) ಇತರರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪಡೆಯುವರು.ಧೂಮಪಾನಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಲವು ಬಗೆಯ ಅಂಧತ್ವ ಬರುವದನ್ನು ವೈದ್ಯರು ಗುರುತಿಸಿದ್ದಾರೆ.ಧೂಮಪಾನಿಗಳ ಸರಾಸರಿ ಆಯುಷ್ಯ ಧೂಮಪಾನ ಮಾಡದವರಿಗಿಂತ ಕಡಿಮೆ ಇರುವದನ್ನು ವೈದ್ಯಕೀಯ ಅಂಕಿಸಂಖ್ಯಾ ಶಾಸ್ತ್ರಗಳ ನಿರೀಕ್ಷಣೆಯಿಂದ ಕಾಣಲಾಗಿದ.
Start a discussion with AkshathR43
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with AkshathR43. What you say here will be public for others to see.