ನನ್ನ ಹೆಸರು ಅಬ್ದುಲ್ ಅಖಿಲ್.ನನ್ನ ಊರು ಮಂಗಳೂರು . ನಾನು ಸಂತ ಅಲೋಶಿಯಸ್ ಕಾಲೇಜ್ ನಲ್ಲಿ ದ್ವಿತೀಯ ಬಿ. ಕಾಂನಲ್ಲಿ ಓದುತ್ತಿದ್ದೇನೆ. ನನ್ನ ತಂದೆಯ ಹೆಸರು ಅಬ್ದುಲ್ ಅಜಿಜ್ , ತಾಯಿ ಜುಬೇದ. ನಾನು ಅಜ್ಜಿ ಮನೆ ಕುಂದಾಪುರ. ನಾನು ಅಲ್ಲಿಯೇ ಹುಟ್ಟಿ ಬೆಳೆದಿದ್ದು. ನಾನು ಒಂದನೇ ತರಗತಿ ಇಂದ ಹತ್ತನೇ ತರಗತಿಯವರೆಗೆ ಕಲಿತ್ತದ್ದು ನವ ಮಂಗಳೂರು ಬಂದರು ಆಂಗ್ಲ ಮಾಧ್ಯಮ ಶಾಲೆ. ನನಗೆ ಹಾಡುವುದೆಂದರೆ ತುಂಬಾ ಇಷ್ಟ. ಯಾವಾಗಲು ಹಾಡಿದ್ದಾರೆ ನನ್ನ ಮನಸ್ಸಿಗೆ ಶಾಂತಿ ಸಿಗುತ್ತದೆ. ಜನರ ಮನಸ್ಸಿಗೆ ಸಂತೋಷ ಸಿಗುವುದಕ್ಕಾಗಿ ನಾನು ಹಾಡುತ್ತೇನೆ. ನಾನು ಚಿಕ್ಕವನಾಗಿದ್ದಾಗ ತುಂಬಾ ತರಹದ ಆಟ ಆಡುತ್ತಿದ್ದೆ , ಮೋಜು ಮಸ್ತಿಗಾಗಿ. ವಾತಾವರಣವು ಬಹಳ ಸುಂದರ ವಾಗಿತ್ತು. ನಾನು ಗಿಡಗಳನ್ನು ನಡೆಯುವುದು ತುಂಬಾ ಇಷ್ಟ .

ನಾನು ನಾಟಕದಲ್ಲಿ ಒಳ್ಳೆಯ ಪಾತ್ರವನ್ನು ನಟಿಸುತ್ತಿದ್ದೆ, ಇದರಲ್ಲಿ ತುಂಬಾ ಮನಸ್ಸಿತ್ತು. ನಾನು ಯಾವ ವಿಷಯದಲ್ಲೂ ತಲೆ ಕೆಡಿಸುವುದಿಲ್ಲ . ನಾನು ಪಾತ್ರೆ ತೊಳೆಯುತ್ತೇನೆ, ಬಟ್ಟೆ ಒಗೆಯುತ್ತೇನೆ , ದಿನಾ ಬೆಳಿಗ್ಗೆ ಎದ್ದ ಕೂಡಲೇ ಗಿಡಗಳಿಗೆ ನೀರು ಹಾಕುತ್ತೇನೆ . ಅಪ್ಪ- ಅಮ್ಮ ನನಗೆ ಒಳ್ಳೆಯ ಮತ್ತು ಬೇಕಾದ ಸೌಕರ್ಯ ಒದಗಿಸಿ ಕೊಟ್ಟಿದ್ದಾರೆ. ನಾನು ಅವರನ್ನು ತುಂಬಾ ಸಂತೋಷ ಪಡಿಸಲು ಆಸೆ, ಮುಂದೆ ಏನಾದರು ಸಾಧಿಸಬೇಕೆಂಬ ಆಸೆ.

ನಮ್ಮ ಮನೆಯ ಸುತ್ತ ತುಂಬಾ ಮರ - ಗಿಡಗಳಿವೆ . ಮನೆಯ ಹತ್ತಿರ ಮಸೀದಿ ಇದೆ . ಅಲ್ಲಿ ವರ್ಷಕ್ಕೊಮ್ಮೆ  ಜಾತ್ರೆ ಇರುತ್ತದೆ ಮತ್ತು ನಾನು ಮರೆಯದೆ ಯಾವಗಲು ಮಸೀದಿಗೆ  ೫ ಹೊತ್ತು  ಹೋಗುತ್ತೇನೆ. ರಜೆಯ ಸಮಯದಲ್ಲಿ ಮಸೀದಿಗೆ ಹೋಗಿ ಸಮಾಜ ಸೇವೆ ಕೆಲಸ ಮಾಡುತ್ತೇನೆ.
ನಾನು ಪ್ರತೀ ದಿನ ಬೆಳಿಗ್ಗೆ ವಾಹನದಲ್ಲಿಯೇ ಬರುವುದು. ನನ್ನ  ಕಾಲೇಜ್ ನಲ್ಲಿ ಒಳ್ಳೆಯ ವಾತಾವರಣ ಇದೆ . ಎಲ್ಲ ತರಹದ ಸೌಲಭ್ಯ ಇದೆ. ನನಗೆ  ಕೊಂದು ಕೊರತೆ ಇಲ್ಲದೆ ಹೊಂದಿಕೊಂಡುಹೊಗುತ್ತೇವೆ . ಶಿಕ್ಷಕರು ನಮ್ಮೊಂದಿಗೆ ಬಹಳ ಪ್ರೀತಿಯಿಂದ ವರ್ತಿಸುತ್ತಾರೆ. 

ಏನಾದರು ಆಗಲಿ, ಎಂತಾದರು ಆಗಲಿ ಮುಂದೆ ಒಳ್ಳೆಯ ಜೀವನ ಇರುತ್ತದೆ ಎಂದು ಭಾವಿಸಿ, ನಮ್ಮ ನಿಮ್ಮ ಎಲ್ಲರ ಅಬ್ದುಲ್ ಅಖಿಲ್.