ಮಣ್ಣು

ಮಣ್ಣು ಒಂದು ಸ್ವಾಭಾವಿಕ ವಸ್ತು. ಇದರಲ್ಲಿ ಖನಿಜಾಂಶವುಳ್ಳ ವಿವಿಧ ಗಾತ್ರದ ಅನೇಕ ಪದರುಗಳಿವೆ(ಸಾಯಿಲ್ ಹಾರಿಜಾನ್ಸ್), ಇದು ತನ್ನ ಮೂಲ ವಸ್ತುವಿಗಿಂತ ಮೇಲ್ಮೈಯಲ್ಲಿಭೌತಿಕವಾಗಿ, ರಾಸಾಯನಿಕವಾಗಿ, ಮತ್ತು ಖನಿಜಾಂಶಗಳ ಇರುವಿಕೆಯಲ್ಲಿ ವ್ಯತ್ಯಾಸ ತೋರುತ್ತದೆ.[೧] ಇದು ರಾಸಾಯನಿಕವಾಗಿ ಹಾಗು ಪರಿಸರದ ಕ್ರಿಯೆಗಳಿಂದಾಗಿ ಮುರಿದಬಂಡೆಗಳಿಂದ ಅಥವಾ ಕೊಚ್ಹಿಹೋದ ಅನೇಕ ಮಾರ್ಪಾಡುಗಳನ್ನೊಳಿಂದ, ಹವಾ ಪರಿಣಾಮಗಳಿಂದ ,ಮತ್ತು ಭೂಸವೆತಗಳಿಂದ ರೂಪುಗೊಂಡಿದೆ . ಮಣ್ಣು ತನ್ನ ಮೂಲ ಶಿಲೆಗಳಿಗಿಂತ ಭಿನ್ನವಾಗಿರುತ್ತದೆ ಇದಕ್ಕೆ ಕಾರಣ ಅದು ಭೂಗೋಳ ಜಲಗೋಳ, ವಾಯುಗೋಳ, ಮತ್ತು ಜೀವಗೋಳಗಳ, ಜೊತೆ ಕಲೆತು ಬದಲಾವಣೆ ಗೊಂಡಿರುತ್ತದೆ.[೨] ಇದು ಘನ, ಅನಿಲ ಹಾಗು ದ್ರವ ರೂಪಗಳಲ್ಲಿರುವಂತಹ ಖನಿಜ ಹಾಗು ಇಂಗಾಲದ ಮಿಶ್ರಣಗಳಿಂದಾಗಿರುವುದು.[೩][೪] ಮಣ್ಣಿನ ಕಣಗಳು ಪರಸ್ಪರ ಸಡಿಲವಾಗಿ ಸೇರಿಕೊಂಡಿದ್ದು, ಖಾಲಿ ರಂದ್ರಗಳಿಂದ ಕೂಡಿವೆ. ಈ ರಂದ್ರಗಳು ಮಣ್ಣಿನದ್ರಾವಣ (ದ್ರವರೂಪ) ಮತ್ತು ಗಾಳಿ (ಅನಿಲ)ರೂಪದಲ್ಲಿರುತ್ತವೆ.[೫] ಆದ್ದರಿಂದಾಗಿ ಮಣ್ಣನ್ನು ಹಲವು ಬಾರಿ ಮೂರು ಸ್ಥಿತಿಗಳಲ್ಲಿ ಸಂಸ್ಕರಿಸುತ್ತಾರೆ.[೬] ಸಮಾನ್ಯವಾಗಿ ಮಣ್ಣಿನಸಾಂದ್ರತೆ 1 ರಿಂದ 2 g/cm³ ಇರುತ್ತದೆ. ಮಣ್ಣನ್ನು ಭೂಮಿ ಎಂದೂ ಕರೆಯುತ್ತಾರೆ : ಈ ವಸ್ತುವಿನಿಂದಲೇ ನಮ್ಮ ಗ್ರಹವು ಈ ಹೆಸರನ್ನು ಪಡೆದಿದೆ[೭] ಭೂಮಿ ಗ್ರಹದ ಸ್ವಲ್ಪ ಭಾಗ ಮಣ್ಣಿನ ರಚನೆ ತೃತೀಯ ಭೂರಚನಾ ಅವಧಿಗಿಂತ ಹಳೆಯದಾಗಿದೆ ಮತ್ತು ಇನ್ನು ಹೆಚ್ಚಿನದು Pleistocene ಗಿಂತ ಹಳೆಯದಾಗಿಲ್ಲ.[೮] ಇಂಜಿನಿಯರಿಂಗ್ನಲ್ಲಿ, ಮಣ್ಣು ಯಾವುದೇ ಗ್ರಹವನ್ನು ಆಚ್ಚಾದಿಸಿರುವ ಆಧಾರಶಿಲಾತಲದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥವೆಂದು ಹೇಳಲಾಗಿದೆ, ಅಥವಾ ಬಂಡೆಯ ಸಡಿಲವಾದ ಮೂಲ ವಸ್ತು.