ಕಿರು ಪರಿಚಯ

ವೀರಣ್ಣ ಮಂಠಾಳಕರ್ ಆದ ನಾನು ಕಳೆದೆರಡು ದಶಕದಿಂದ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದೇನೆ. 2010ರಿಂದ 2013 ಜೂನ್ ವರೆಗೆ ಕನ್ನಡಪ್ರಭ ಪತ್ರಿಕೆ ಬಸವಕಲ್ಯಾಣ ತಾಲೂಕಿನ ವರದಿಗಾರನಾಗಿ ಸೇವೆ. ಜೂನ್ 2013ರಿಂದ ಸೆಪ್ಟಂಬರ್ ವರೆಗೆ ವಿಜಯಕರ್ನಾಟಕ ವರದಿಗಾರನಾಗಿ ಸೇವೆ ಸಲ್ಲಿಸಿರುತ್ತೇನೆ. ಇದೀಗ ಹವ್ಯಾಸಿ ಪತ್ರಕರ್ತ, ಬರಹಗಾರನಾಗಿ, ಸೇವೆ ನಿರತ. 2002ರಲ್ಲಿ ನನ್ನ ಪ್ರಥಮ ಚುಟುಕು ಕವನ ಸಂಕಲನ ‘ಭಾವಾಂತರಂಗ’ ಪ್ರಕಟಿಸುವುದರ ಮೂಲಕ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದೆ. ನಂತರ ಪ್ರಾತಿನಿಧಿಕ ಚುಟುಕು ಸಂಕಲನ‘ಹನಿಜೇನು’ ಗ್ರಂಥ ಸಂಪಾದನೆ ಸೇರಿದಂತೆ ಸ್ವರಚಿತ ಸಂಕಲನಗಳಾದ ‘ಸುಳಿಗಳು’ ‘ಗಾಂಧಿ ಆಗ್ಬೇಕಂದುಕೊಂಡಾಗ’ ಕವನ ಸಂಕಲನ ಪ್ರಕಟಿಸಿದ್ದೇನೆ. ‘ಬದುಕಿನ ಬೆನ್ನೇರಿ’ ಪ್ರಥಮ ಕಥಾಸಂಕಲನ ಮುದ್ರಣದ ಹಂತದಲ್ಲಿದೆ. ಹಸಿವು, ‘ಸಂಬಂಧಗಳು (ಕಾದಂಬರಿ)’ ಪ್ರತಿಭಾವಂತರ ಪುಟಗಳು, ಜೇನುಗೂಡು, ‘ಮಾಧ್ಯಮದೊಳಗಣ’ ‘ಸುದ್ಧಿ ಸಾರದ ಬಿಂಬ’ (ಲೇಖನ ಸಂಗ್ರಹ) ‘ಪುಟದೊಳಗೆ ಪುಟಿದೇಳುವ ಹಸಿವು (ಆತ್ಮ ಕಥನ)’ ಮುತ್ತಿನ ಖಜಾನೆ (ಹನಿಗವನಗಳು) ನನ್ನ ಅಪ್ರಕಟಿತ ಕೃತಿಗಳಾಗಿವೆ. ಸಂಕಲ್ಪ ಮಾಸ ಪತ್ರಿಕೆಯ ಸಂಸ್ಥಾಪಕ ಸಂಪಾದಕನಾಗಿ ಮತ್ತು ಕನ್ನಡದ ಪ್ರೇರಣ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕನಾಗಿ ಸೇವೆ. ಅಲ್ಲದೆ ರಾಜ್ಯಮಟ್ಟದ ಪತ್ರಿಕೆಗಳಾದ ಕನ್ನಡಪ್ರಭ, ವಿಜಯ ಕರ್ನಾಟಕ, ಕರ್ಮವೀರ, ಸುಧಾ, ತರಂಗ, ತುಷಾರ, ಸಂಜೆವಾಣಿ ಚಂದನ, ಪ್ರಿಯಾಂಕ, ಹೊಸತು, ಸಂಯುಕ್ತ ಕರ್ನಾಟಕ, ಆದರ್ಶ ಗಂಡ ಹೆಂಡತಿ, ಗ್ರೀನ್ ಸಿಟಿ, ವಿಜಯವಾಣಿ, ವಿಶ್ವ ಕನ್ನಡಿಗ ಬ್ಲಾಗ್ ಪತ್ರಿಕೆ, ಅವಧಿ ಬ್ಲಾಗ್ ಮ್ಯಾಗಜಿನ್ ಸೇರಿದಂತೆ ವಿವಿಧ ಕನ್ನಡದ ಪತ್ರಿಕೆಗಳಲ್ಲಿ ಬಿಡಿ ಬರಹಗಳು ಪ್ರಕಟಗೊಂಡಿವೆ. ಗುಲ್ಬರ್ಗಾ ಆಕಾಶವಾಣಿಯಿಂದ ಬದುಕಿನ ಬೆನ್ನೇರಿ ಕಥೆ ಹಾಗೂ ಕವನಗಳು ಪ್ರಸಾರಗೊಂಡಿವೆ. ಧರಿನಾಡು ಕನ್ನಡ ಸಂಘ ಬೀದರ ಇವರ ವತಿಯಿಂದ ‘ಅತ್ಯುತ್ತಮ ಚುಟುಕು ಕವಿ’ ಹಾಗೂ ಎಂ.ಜಿ.ದೇಶಪಾಂಡೆ ಪ್ರತಿಷ್ಠಾನದಿಂದ ‘ಚುಟುಕು ಶಿಲಿ’್ಪ ಗೌರವ ಪ್ರಶಸ್ತಿ ಲಭಿಸಿವೆ. 21 ಕಥೆಗಳುಳ್ಳ ‘ಬದುಕಿನ ಬೆನ್ನೇರಿ’ ನನ್ನ ಮೊದಲ ಕಥಾ ಸಂಕಲನ ಪ್ರಕಟಣೆಯ ಹಂತದಲ್ಲಿದೆ.

Start a discussion with ವೀರಣ್ಣ ಮಂಠಾಳಕರ್

Start a discussion