ಪ್ರಮಥ
Joined ೨೬ ಜುಲೈ ೨೦೨೨
ಪ್ರಮಥ ಹೆಗಡೆ ಕಡೇಮನೆ
ಜನನ ೨೬-೦೮-೨೦೦೪ ಊರು ಕಡೇಮನೆ ಹವ್ಯಾಸ-ವೃತ್ತಿ - ಸಂಸ್ಕೃತಾಧ್ಯಯನ, ಯಕ್ಷಗಾನ ಪೋಸ್ಟರ್ ತಯಾರಿಕೆ, ಯಕ್ಷಗಾನ - ಸಂಸ್ಕೃತ ಪದ್ಯರಚನೆ, ಭಾಗವತಿಕೆ
""""' ""ಬಾಲ್ಯ""""""""" ೨೬-೮-೨೦೦೪ ರಂದು ವಾನಳ್ಳಿ ಸಮೀಪದ ಕಡೇಮನೆಯಲ್ಲಿ ಜನಿಸಿದರು.ಪ್ರಾಥಮಿಕ ಅಭ್ಯಾಸವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆಣಸಿಯಲ್ಲಿ,ಗಜಾನನ ಮಾಧ್ಯಮಿಕ ಶಾಲೆ ವಾನಳ್ಳಿಯಲ್ಲಿ ಪ್ರೌಢ ಶಾಲಾ ಶಿಕ್ಷಣವನ್ನು ಮುಂದುವರೆಸಿದರು.ನಂತರ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಯನ ನಡೆಸಿದರು.ಯಕ್ಷಗಾನದ ಮೇಲೆ ಆಸಕ್ತಿ ಹೊಂದಿರುವ ಇವರು ಮಾಧ್ಯಮಿಕ ಶಾಲಾ ಹಂತದಿಂದಲೇ ಆ ಕ್ಷೇತ್ರದಲ್ಲಿ ಪ್ರೇರಿತರಾದರು.
""""""""ಯಕ್ಷಗಾನಾಧ್ಯಯನ""""""""""
ಅಜ್ಜ ನಾರಾಯಣ ಹೆಗಡೆ ಕಡೇಮನೆ ಯಕ್ಷಗಾನ ಕಲಾವಿದರು.ಅವರಂತೆ ಆಗಬೇಕೆಂದು ಹೊರಟ ಇವರು ಹೊಸ್ತೋಟ ಗಜಾನನ ಭಾಗವತರಲ್ಲಿ ಅಧ್ಯಯನ ಪ್ರಾರಂಭಿಸಿದರು.ನಂತರ ವಿ ಗಣಪತಿ ಭಟ್ಟರಲ್ಲಿ, ನಂತರ ಅನಂತ ಪದ್ಮನಾಭ ಪಾಟಕರುಲ್ಲಿ ಅಧ್ಯಯನ ನಡೆಸಿದರು.ಹಲವು ಕಲಾವಿದರೊಂದಿಗೆ ಒಡನಾಟ ಹೊಂದಿದ್ದ ಇವರು ಕಬ್ಬಿನಾಲೆ ವಸನ್ತ ಭಾರದ್ವಾಜರಿಂದ ಛಂದೋನಿಯಮದ ಕುರಿತು ಹಲವು ಭಾರಿ ಚರ್ಚಿಸಿ ಮಾಹಿತಿ ತಿಳಿದುಕೊಂಡಿದ್ದಾರೆ ಮತ್ತು ತಿಳಿದುಕೊಳ್ಳುತ್ತಿದ್ದಾರೆ.ಪ್ರವೀಣ ತಟ್ಟೀಸರರಿಂದ ನೃತ್ಯವನ್ನು ಸ್ವಲ್ಪ ಮಟ್ಟಿಗೆ ಅಭ್ಯಾಸ ಮಾಡಿದ್ದಾರೆ.
"""""""ಯಕ್ಷಗಾನ ಮತ್ತು ತಾಳಮದ್ದಳೆಗಳಲ್ಲಿ"""""
ಇವರು ಸೀತಾಕಲ್ಯಾಣದ ರಾವಣನಾಗಿ ತೆರೆಯಲ್ಲಿ ಕಾಣಿಸಿಕೋಂಡರು.ನಂತರ ಬಾಲ ಗೋಪಾಲರಾಗಿ ರಂಗ ಪ್ರವೇಶ ಮಾಡಿದರು.ನಂತರ ಸುಂದೋಪಸುಂದರ ಕಾಳಗದ ಕುಬೇರನಾಗಿ ,ವಾಲಿವಧೆಯ ತಾರೆಯಾಗಿ ಅಭಿನಯಿಸಿದ್ದಾರೆ.
""""""ಯಕ್ಷಗಾನ ಎಡಿಟರ್ ಸಂಗ್ರಹಕಾರ ಮತ್ತು ಪೋಸ್ಟರ್ ಕ್ರಿಯೇಟರ್ ಆಗಿ""""""""
ಯಕ್ಷಗಾನ ಎಡಿಟರ್, ಪೋಸ್ಟರ್ ಕ್ರಿಯೇಟರ್, ಸಂಗ್ರಹಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿಕಿಶೈಲಿಯಿಲ್ಲದ ಲೇಖನಗಳು
ಬದಲಾಯಿಸಿ@ಪ್ರಮಥ, ವಿಕಿಪೀಡಿಯಾದಲ್ಲಿ ಲೇಖನಗಳನ್ನು ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ಆದರೆ ನೀವು ಸೇರಿಸುತ್ತಿರುವ ಲೇಖನಗಳ ಫಾರ್ಮ್ಯಾಟಿಂಗ್ ವಿಕಿಶೈಲಿಯಲ್ಲಿ ಇಲ್ಲ ಮತ್ತು ಯಾವುದೇ ಉಲ್ಲೇಖ ಕೊಂಡಿಗಳನ್ನು ಕೂಡ ಕೊಡುತ್ತಿಲ್ಲ. ಅದನ್ನು ಸರಿಪಡಿಸಿ ಎಂದು ಕೋರಿಕೆ. --ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೫:೪೫, ೪ ಸೆಪ್ಟೆಂಬರ್ ೨೦೨೨ (UTC)