ಸಣ್ಣ ಮರಗಪ್ಪೆ
ರಾಕೋಫೋರಸ್ ಲ್ಯಾಟರಾಲಿಸ್ | |
---|---|
Conservation status | |
Scientific classification [[File:OOjs UI icon edit-ltr.svg|15px|link=Template:Taxonomy/ e | |
Unrecognized taxon (fix): | [[en:Rhacophorus |
ಪ್ರಜಾತಿ: | ರಾಕೋಫೋರಸ್ ಲ್ಯಾಟರಾಲಿಸ್]] |
Binomial name | |
ರಾಕೋಫೋರಸ್ ಲ್ಯಾಟರಾಲಿಸ್ Boulenger, 1883
|
ಸಣ್ಣ ಮರಗಪ್ಪೆ ಅಥವಾ Rhacophorus lateralis ಅಪಾಯದ ಅಂಚಿನಲ್ಲಿರುವ ಒಂದು ಕಪ್ಪೆಯ ಪ್ರಭೇದ. ಬೌಲೆಂಜೆರರವರ ಮರಗಪ್ಪೆ, ಸಣ್ಣ ತೇಲುವ ಮರಗಪ್ಪೆ, ರೆಕ್ಕೆಯುಳ್ಳ ತೇಲುವ ಮರಗಪ್ಪೆ ಎಂಬ ಹಲವು ಸಾಮಾನ್ಯ ಹೆಸರಿನಿಂದ ಕರೆಯಲ್ಪಡುವ ಈ ಕಪ್ಪೆಯು ಭಾರತದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ. Rhacophoridae ಕುಟುಂಬಕ್ಕೆ ಸೇರುವ ಇದರ ಸಾಮಾನ್ಯ ಆಂಗ್ಲ ನಾಮ Small tree frog. ಇದನ್ನು ಮೊದಲು ಬಾರಿಗೆ 1883ರಲ್ಲಿ ಬೌಲೆಂಜೆರ್ ಅವರು ವರ್ಣಿಸಿದರು.
ವಿವರಣೆ
ಬದಲಾಯಿಸಿಹಲವು ವರ್ಷಗಳ ನಂತರ 2000ರಲ್ಲಿ ಇದನ್ನು ಕೊಡಗಿನಲ್ಲಿ ಕಂಡಿದ್ದರಿಂದ ಇದನ್ನು ಮರುವರ್ಣಿಸಲಾಯಿತು. ಪಶ್ಚಿಮ ಘಟ್ಟಗಳ ಕೊಡಗು, ಚಿಕ್ಕಮಗಳೂರು ಪ್ರದೇಶಗಳಲ್ಲಿ, ಹಾಗೂ ಕೇರಳದ ವಯನಾಡು ಹಾಗೂ ಇಡುಕ್ಕಿ ಜಿಲ್ಲೆಗಳ ವನ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಸಮುದ್ರ ಮಟ್ಟದಿಂದ 800ಮಿ. ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇವು ನಿತ್ಯ ಹರಿದ್ವರ್ಣ ಹಾಗೂ ಪತನಶೀಲ ವನ್ಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ನೈಸರ್ಗಿಕ ಇರುನೆಲೆ ಅಲ್ಲದಿದ್ದರೂ, ಕಾಫಿ ಹಾಗೂ ಚಹಾ ತೋಟಗಳಲ್ಲಿಯೂ ಕಂಡಿರುವ ದಾಖಲೆಗಳಿವೆ. ಮರಗಪ್ಪೆಯಾದರೂ, ಕಡಿಮೆ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಸಂತಾನೋತ್ಪತ್ತಿಯ ಋತುವಿನಲ್ಲಿ, ನೀರು ತುಂಬಿರುವ ಚಿಕ್ಕ ಹೊಂಡಗಳ ಹತ್ತಿರ ಇರುವ ಗಿಡಗಳ ಹಾಗೂ ಪೊದೆಗಳ ಮೇಲೆ ಕಂಡುಬರುತ್ತದೆ. ಮಲಬಾರ್ ತೇಲುವ ಕಪ್ಪೆಯಂತೆಯೇ, ಈ ಪ್ರಭೇದವೂ ಕೂಡ ಸಂತಾನೋತ್ಪತ್ತಿಯ ಋತುವಿನಲ್ಲಿ ನೊರೆಗೂಡುಗಳನ್ನು ಕಟ್ಟುತ್ತದೆ. ಗಂಡು ಹೆಣ್ಣಿನ ಮಿಲನದ ನಂತರ, ಹೆಣ್ಣು ಆ ನೊರೆಗೂಡಿನಲ್ಲಿ ಮೊಟ್ಟೆಗಳನ್ನಿಡುತ್ತದೆ. ಜೋರು ಮಳೆಗೆ ಆ ನೊರೆಗೂಡು ಕರಗಳು, ಗೊದಮೊತ್ತೆಗಳು ಸಮೀಪದಲ್ಲಿರುವ ನೀರಿನ ಹೊಂಡಕ್ಕೆ ಬೀಳುತ್ತವೆ ಹಾಗೂ ಅಲ್ಲಿಯೇ ಬೆಳೆಯುತ್ತವೆ. ಗಂಡು ಕಪ್ಪೆಯ ಕೂಗು ಒಂದು ತರಹ “ಟರ್ರ್.. ಟಕ್ ಟಕ್ ಟಕ್ ಟಕ್..ಟರ್ರ್…..” ಎನ್ನುವಂತೆ ಇರುತ್ತದೆ. ಇದು ತನಗಾಗುವ ಒತ್ತಡದಿಂದ ಬಣ್ಣ ಬದಲಾಯಿಸುವುದನ್ನು ಕಾಣಬಹುದು.
ಉಲ್ಲೇಖ
ಬದಲಾಯಿಸಿ- ↑ "Rhacophorus lateralis". IUCN Red List of Threatened Species. IUCN. 2004: e.T59000A11864479. 2004. Retrieved 9 June 2016.
{{cite journal}}
: Cite uses deprecated parameter|authors=
(help)