ಸಂದೇಶ್ ಭಾರತೀಯ ಉಪಖಂಡದಲ್ಲಿನ ಪೂರ್ವ ಭಾಗದಲ್ಲಿರುವ ಬಂಗಾಳ ಪ್ರದೇಶದಿಂದ ಹುಟ್ಟಿಕೊಂಡ ಒಂದು ಸಿಹಿ ತಿನಿಸಾಗಿದೆ. ಇದನ್ನು ಹಾಲು ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ.[] ಕೆಲವು ಪಾಕವಿಧಾನಗಳು ಛೇನಾ ಅಥವಾ ಪನೀರ್‌ನ (ಇದನ್ನು ಹಾಲನ್ನು ಹೆಪ್ಪುಗಟ್ಟಿಸಿ ಅದರಿಂದ ಹಾಲೊಡಕನ್ನು ಬೇರೆಮಾಡಿ ತಯಾರಿಸಲಾಗುತ್ತದೆ) ಬಳಕೆಯನ್ನು ಬೇಡುತ್ತವೆ.[] ಢಾಕಾ ಪ್ರದೇಶದಲ್ಲಿನ ಕೆಲವು ಜನರು ಇದನ್ನು ಪ್ರಾಣಹರ (ಅಕ್ಷರಶಃ ಹೃದಯ ಕದಿಯುವಂಥದ್ದು) ಎಂದು ಕರೆಯುತ್ತಾರೆ. ಇದು ಸಂದೇಶ್‍ನ ಮೃದು ಬಗೆಯಾಗಿದ್ದು ಇದನ್ನು ಖೋವಾ ಹಾಗೂ ಮೊಸರಿನ ಸಾರದಿಂದ ತಯಾರಿಸಲಾಗುತ್ತದೆ.[]

ಸಂದೇಶ್‍ನ ಅತ್ಯಂತ ಸರಳ ಬಗೆಯೆಂದರೆ ಮಖಾ ಸಂದೇಶ್ (ಮಖಾ = ನಾದಿದ). ಛೇನಾವನ್ನು ಸಕ್ಕರೆಯೊಂದಿಗೆ ಕಡಿಮೆ ಉರಿಯಲ್ಲಿ ಚಿಮ್ಮಿಸಿ ಇದನ್ನು ತಯಾರಿಸಲಾಗುತ್ತದೆ. ಸಂದೇಶ್ ಮೂಲಭೂತವಾಗಿ ಸಿಹಿಯಾಗಿಸಿದ ಬಿಸಿ ಛೇನಾ ಆಗಿರುತ್ತದೆ. ಇದಕ್ಕೆ ಚೆಂಡಿನ ಆಕಾರ ನೀಡಲಾದಾಗ, ಇದನ್ನು ಕಾಂಚಾಗೊಲ್ಲ (ಕಾಂಚಾ = ಹಸಿ; ಗೊಲ್ಲ = ಚೆಂಡು) ಎಂದು ಕರೆಯಲಾಗುತ್ತದೆ. ಹೆಚ್ಚು ಸಂಕೀರ್ಣವಾದ ಮತ್ತು ವಿಸ್ತಾರವಾಗಿ ತಯಾರಿಸಲಾದ ಸಂದೇಶ್‍ಗೆ ಛೇನಾವನ್ನು ಒಣಗಿಸಿ ಒತ್ತಿ ಸೋಸಿ, ಹಣ್ಣುಗಳ ತಿರುಳಿನಿಂದ ರುಚಿಗೊಳಿಸಿ, ಕೆಲವೊಮ್ಮೆ ಬಣ್ಣಗಳನ್ನೂ ಸೇರಿಸಿ, ಅನೇಕ ವಿಭಿನ್ನ ಮಟ್ಟಗಳ ಸ್ನಿಗ್ಧತೆ ಬರುವವರೆಗೆ ಬೇಯಿಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. The Oxford Companion to Sugar and Sweets. Oxford University Press. 1 April 2015. pp. 592–. ISBN 978-0-19-931361-7.
  2. Nirmal Sinha (2007). "Chhana". In Y. H. Hui (ed.). Handbook of Food Products Manufacturing, 2 Volume Set. Vol. Volume 2. John Wiley & Sons. p. 643. ISBN 978-0-470-11354-7. {{cite book}}: |volume= has extra text (help)
  3. Ken Albala, ed. (2011). Food Cultures of the World Encyclopedia. Vol. Volume 1: Africa and the Middle East. Santa Barbara, Calif.: Greenwood. p. 34. ISBN 978-0-313-37627-6. {{cite book}}: |volume= has extra text (help)
"https://kn.wikipedia.org/w/index.php?title=ಸಂದೇಶ್&oldid=993887" ಇಂದ ಪಡೆಯಲ್ಪಟ್ಟಿದೆ