ಸಂತು ಸ್ಟ್ರೇಟ್ ಫಾರ್ವರ್ಡ್

ಕನ್ನಡದ ಒಂದು ಚಲನಚಿತ್ರ


ಸಂತು ಸ್ಟ್ರೇಟ್ ಫಾರ್ವರ್ಡ್ ೨೦೧೬ರ ಕನ್ನಡ ಸಿನಿಮಾ. ಇದನ್ನ ನಿರ್ದೇಶಿಸಿದ್ದು ಮಹೇಶ್ ರಾವ್ ಮತ್ತು ನಿರ್ಮಾಣದ ಹೊಣೆ ಕೆ ಮಂಜುರದ್ದು . [] ಈ ಚಿತ್ರದಲ್ಲಿ ಯಶ್, ರಾಧಿಕಾ ಪಂಡಿತ್ ಮತ್ತು ಶಾಮ್ ಮುಖ್ಯ ಪಾತ್ರದಲ್ಲಿದ್ದಾರೆ. [] ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. [] [] [] ಈ ಚಿತ್ರವನ್ನು ಹಿಂದಿಯಲ್ಲಿ ರಾಂಬೊ ಸ್ಟ್ರೈಟ್ ಫಾರ್ವರ್ಡ್ ಮತ್ತು ತಮಿಳಿನಲ್ಲಿ ಸೂರ್ಯವಂಸಿ ಎಂದು ಕರೆಯಲಾಯಿತು. [] ಈ ಚಿತ್ರವು ೨೦೧೫ರಲ್ಲಿ ಸಿಲಂಬರಸನ್ ರ ತಮಿಳು ಚಲನಚಿತ್ರ ವಾಲುನಿಂದ ಸ್ಫೂರ್ತಿ ಪಡೆದಿದೆ ಎಂದು ತಯಾರಕರು ಸ್ಪಷ್ಟಪಡಿಸಿದ್ದರು. ನಿರ್ಮಾಪಕ ಮಂಜು ಈ ಮೊದಲು ತಮಿಳು ಚಿತ್ರದ ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದರು. [] [೧೦]

ಸಂತು ಸ್ಟ್ರೇಟ್ ಫಾರ್ವರ್ಡ್
ನಿರ್ದೇಶನಮಹೇಶ್ ರಾವ್
ನಿರ್ಮಾಪಕಕೆ.ಮಂಜು
ಲೇಖಕಅನಿಲ್ ಕುಮಾರ್ (ಸಂಭಾಷಣೆ)
ಚಿತ್ರಕಥೆಮಹೇಶ್ ರಾವ್
ಕಥೆಮಹೇಶ್ ರಾವ್
ಪಾತ್ರವರ್ಗಯಶ್(ನಟ)
ರಾಧಿಕಾ ಪಂಡಿತ್
ಶಾಮ್ ತಮಿಳು ನಟ
ದೇವರಾಜ್‌
ಅನಂತ್ ನಾಗ್
ತಿಲಕ್
ಪಿ.ರವಿ_ಶಂಕರ್
ಸಂಗೀತವಿ. ಹರಿಕೃಷ್ಣ
ಛಾಯಾಗ್ರಹಣಆಂಡ್ರೂ
ಸಂಕಲನಕೆ.ಎಂ.ಪ್ರಕಾಶ್
ಸ್ಟುಡಿಯೋಕೆ.ಮಂಜು ಸಿನೆಮಾಸ್
ವಿತರಕರುಜಯಣ್ಣ ಫಿಲಂಸ್
ಈರೋಸ್ ಇಂಟರ್ ನ್ಯಾಷನಲ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 28 ಅಕ್ಟೋಬರ್ 2016 (2016-10-28)
ಅವಧಿ159 minutes[]
ದೇಶಭಾರತ
ಭಾಷೆಕನ್ನಡ
ಬಂಡವಾಳ[https://www.imdb.com/title/tt
tt6203612/ ಸಂತು ಸ್ಟ್ರೇಟ್ ಫಾರ್ವರ್ಡ್] at IMDb
ಬಾಕ್ಸ್ ಆಫೀಸ್est. ೩೦ ಕೋಟಿ[]


ಕಥಾವಸ್ತು

ಬದಲಾಯಿಸಿ

ಚಲನಚಿತ್ರವು ದರೋಡೆಕೋರ ದೇವ್ (ಶಾಮ್) ರೊಂದಿಗೆ ಪ್ರಾರಂಭವಾಗುತ್ತದೆ.ದೇವ್ ಒಬ್ಬ ದರೋಡೆಕೋರ. ಆತನ ಬದುಕು, ಭೂಗತ ಜಗತ್ತಿನ ಒಡನಾಡಿಗಳ ಜೊತೆ ಸೆಣಸಾಡುವುದಾಗಿರುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರದ ಸಲುವಾಗಿ ದುಬೈ ಮೂಲದ ದರೋಡೆಕೋರನೊಂದಿಗೆ ದ್ವೇಷ ಕಟ್ಟಿಕೊಳ್ಳುತ್ತಾನೆ.
ನಾಯಕ ಸಂತು (ಯಶ್ ಒಬ್ಬ ನೇರ ಸ್ವಭಾವದ ವ್ಯಕ್ತಿ. ತಂದೆ ಮತ್ತು ತಾಯಿ, ತಂಗಿಯ ಜೊತೆ ಆನಂದದಿಂದ ಬದುಕುತ್ತಿದ್ದ ಸಂತು,ವಾಸ್ತುಶಿಲ್ಪ ವಿದ್ಯಾರ್ಥಿನಿ ಅನನ್ಯಾ ( ರಾಧಿಕಾ ಪಂಡಿತ್) ಎಂಬ ಹುಡುಗಿಯನ್ನು ಕಂಡು, ಆಕೆಯನ್ನು ಪ್ರೀತಿಸುತ್ತಾನೆ. ಆರಂಭದಲ್ಲಿ, ಅವನು ಅವಳನ್ನು ಆಕರ್ಷಿಸಲು ಅನನ್ಯಾಳೊಂದಿಗೆ ಸ್ನೇಹ ಬೆಳೆಸುತ್ತಾನೆ. ಕೆಲದಿನಗಳ ನಂತರ ಅವಳು ದೇವ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆಂದು ತಿಳಿಯುತ್ತದೆ. ಅನನ್ಯಳ ತಂದೆ-ತಾಯಿಯ ಸಾಯುವ ಮುನ್ನ ಕೊನೆಯ ಆಸೆ, ಆಕೆಯ ಮದುವೆ ದೇವ್ ಜೊತೆ ನಡೆಯಲಿ ಎಂದು ಆಗಿರುತ್ತದೆ. ದೇವ್ ನನ್ನು ವಿರೋಧಿಸಲು ಆಗದ ಅನನ್ಯ, ಸಂತುನನ್ನು ಮನಸಾರೆ ಪ್ರೀತಿಸಿದರೂ ಸಹ, ದೇವ್ ಸಂತುನ ಕುಟುಂಬವನ್ನು ಕೊಲೆ ಮಾಡಬಹುದು ಎಂದು ಹೆದರಿ, ತನ್ನ ಪ್ರೀತಿಯನ್ನು ತೋರ್ಪಡಿಸುವುದಿಲ್ಲ.
ಸಂತು ಮತ್ತು ಅನನ್ಯ ಪ್ರವಾಸಕ್ಕೆ ತೆರಳುತ್ತಾರೆ. ಅನನ್ಯಳ ಗೆಳತಿ ಮುಸ್ಕಾನ್ ಮತ್ತು ಆಕೆಯ ಪತಿ ಇಮ್ರಾನ್ ಇವರ ಮನಸನ್ನು ಗೆಲ್ಲುವ ಸಂತು, ವೈದ್ಯರು ಇಲ್ಲದೆ ಇರುವ ಸಮಯದಲ್ಲಿ ತನ್ನ ಬುದ್ಧಿವಂತಿಕೆಯಿಂದ ಆಕೆಯ ಹೆರಿಗೆಯನ್ನು ಮಾಡಿಸುತ್ತಾನೆ.
ದೇವ್ ನನ್ನು ಎದುರಿಸಿ, ಅನನ್ಯಳನ್ನು ಚಾಕಚಕ್ಯತೆಯಿಂದ ತನ್ನ ಮನೆಯವರ ಮತ್ತು ಅನನ್ಯಳ ಮನೆಯವರ ಮನ ಒಲಿಸಿ, ಮದುವೆಯಾಗುವ ಕಥಾನಕವನ್ನು ಹಾಸ್ಯ ಮತ್ತು ಸಾಹಸಮಯವಾಗಿ ತೋರಿಸಿ, ಜನಮನ ಗೆದ್ದ ಚಿತ್ರ ಇದಾಗಿದೆ.

ಪಾತ್ರವರ್ಗ

ಬದಲಾಯಿಸಿ
  • ಸಂತು ಆಗಿ ಯಶ್
  • ಅನನ್ಯ ಆಗಿ ರಾಧಿಕಾಪಂಡಿತ್
  • ದೇವ್ ತಂದೆ ಮತ್ತು ಅನನ್ಯಳ ತಾತ ಆಗಿ ಅನಂತ ನಾಗ್
  • ದೇವ್ಆಗಿ ಶ್ಯಾಂ
  • ಮುಸ್ಕಾನ್ ಆಗಿ ಸ್ನೇಹಾ ಆಚಾರ್ಯ.
  • ಸಂತು ನ ತಂದೆ ಆಗಿ ದೇವರಾಜ್
  • ಇಮ್ತ್ರಾನ್ ಆಗಿ ತಿಲಕ್
  • ಬೆಸಂಟ್ ರವಿ
  • ಸಂತು ಗೆಳೆಯ ಆಗಿ ಗಿರೀಶ್ ಶಿವಣ್ಣ
  • ಸುಮಿತ್ರಾ
  • ಅನನ್ಯಳ ತಾಯಿ ಆಗಿ ಸೀತಾ
  • ಅನನ್ಯಳ ತಂದೆ ಆಗಿ ಅವಿನಾಶ್
  • ವೀಣಾ ಸುಂದರ್
  • ಚರಣದೀಪ
  • ದುಬಾಯ್ ಭಾಯ್ ಖಳನ ಅತಿಥಿ ಪಾತ್ರದಲ್ಲಿ ಪಿ. ರವಿಶಂಕರ್

ಕನ್ನಡದ ಸೀಮಿತ ಮಾರುಕಟ್ಟೆಯಲ್ಲಿ ೩೦ ಕೋಟಿ ಲಾಭವನ್ನು ಗಳಿಸಿದ ಈ ಚಿತ್ರವು, ವಿತರಕ ಜಯಣ್ಣ ಮತ್ತು ನಿರ್ಮಾಪಕ ಕೆ.ಮಂಜುರಿಗೆ ಯಶಸ್ಸು ತಂದುಕೊಟ್ಟಿತು. ನಾರ್ವೆ ಮತ್ತು ಇತರ ದೇಶಗಳಲ್ಲಿ ಚಿತ್ರೀಕರಣ ಮಾಡಿದ್ದ ಅಧ್ಹೂರಿ ಚಿತ್ರವು ಬಂಡವಾಳವನ್ನು ಮೀರಿ ಲಾಭ ತಂದು ಕೊಟ್ಟಿತು. [೧೧] ಸಿಲಂಬರಸನ್ ನಟಿಸಿದ ವಾಲು ತಮಿಳು ಚಿತ್ರದ ರೀಮೇಕ್ ಎಂದು ಆಪಾದನೆ ಅನ್ನು ಹೊತ್ತ ಈ ಚಿತ್ರ, ಹಿಂದಿಯ ತ್ರೀ ಈಡಿಯಟ್ಸ್ ಚಿತ್ರದ ಹೆರಿಗೆ ಮಾಡಿಸುವ ದೃಶ್ಯ, ಹಿಂದಿಯ ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ ಪ್ರವಾಸದಲ್ಲಿ ನಾಯಕ-ನಾಯಕಿ ಹತ್ತಿರವಾಗುವುದು ಮತ್ತು ಮದುವೆಯ ಸಮಯದಲ್ಲಿ ನಾಯಕ ನಾಯಕಿಯನ್ನು ಗೆಲ್ಲುವುದು, ಹೀಗೆ ಹಲವು ಚಿತ್ರಗಳಿಂದ ಸ್ಫೂರ್ತಿ ಪಡೆದಿದೆ ಎಂದು ವಿಮರ್ಶಕರು ಅಭಿಪ್ರಾಯ ಪಟ್ಟರು.[೧೨]
ಉಪೇಂದ್ರ-ಸುದೀಪ್ ನಟನೆಯ ಮುಕುಂದ ಮುರಾರಿ ಚಿತ್ರದ ಜೊತೆಗೆಯೇ ಬಿಡುಗಡೆ ಆದ, ಈ ಚಿತ್ರ [೧೩] ಸುದೀಪ ನಟನೆಯ ಚಿತ್ರವನ್ನು ಗಳಿಕೆಯಲ್ಲಿ ಹಿಂದೆ ಇಕ್ಕಿತು.

ಧ್ವನಿಪಥ

ಬದಲಾಯಿಸಿ

ವಿ.ಹರಿಕೃಷ್ಣ ಚಿತ್ರದ ಹಿನ್ನೆಲೆ ಸಂಗೀತ ಮತ್ತು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸಂ.ಹಾಡುಸಮಯ

ಉಲ್ಲೇಖಗಳು

ಬದಲಾಯಿಸಿ
  1. "Santhu Straight Forward Movie Review". The Times of India. Retrieved 28 October 2016.
  2. Upadhyaya, Prakash. "Sandalwood 2016: Highest-grossing Kannada movies of 2016 at the box office". Retrieved 13 January 2017.
  3. "Mahesh Rao to direct Yash". Cineloka. 27 May 2015. Archived from the original on 7 February 2016. Retrieved 11 May 2016.
  4. "Yash-Radhika Pandith Film Titled Santhu Straight Forward". Chitraloka. 8 April 2016. Archived from the original on 13 ಮೇ 2016. Retrieved 11 May 2016.
  5. "Yash has signed four films - Times of India". Retrieved 13 January 2017.
  6. "Movie Review - Santhu Straightforward - Bangalore Mirror -". Retrieved 13 January 2017.
  7. The Times of India
  8. [೧]
  9. "ಆರ್ಕೈವ್ ನಕಲು". Archived from the original on 2019-10-14. Retrieved 2020-01-04.
  10. http://timesofindia.indiatimes.com/entertainment/kannada/movies/news/Yash-has-signed-four-films/articleshow/46476646.cm
  11. https://timesofindia.indiatimes.com/entertainment/kannada/movie-reviews/santhu-straight-forward/movie-review/55112674.cms
  12. https://www.newindianexpress.com/entertainment/review/2016/oct/29/review-santhu-is-out-and-out-yashs-show-1532825.html
  13. "ಆರ್ಕೈವ್ ನಕಲು". Archived from the original on 2017-11-27. Retrieved 2020-01-04.

ಉಲ್ಲೇಖಗಳು

ಬದಲಾಯಿಸಿ