ಶ್ವಾನ ಲೇಖಕ
ಶ್ವಾನ ಲೇಖಕ ಎಂದರೆ ಶ್ವಾನಗಳ ಬಗ್ಗೆ ಬರೆಯುವ ವ್ಯಕ್ತಿ. ಉದಾಹರಣೆಗೆ ಶ್ವಾನ ಪ್ರದರ್ಶನ, ಶ್ವಾನಗಳ ಆರೈಕೆ, ಶ್ವಾನ ತರಬೇತಿ ಅಥವಾ ಶ್ವಾನಗಳ ತಳಿ ವೈಶಿಷ್ಟ್ಯಗಳ ಬಗ್ಗೆ ವರದಿ ಮಾಡುವಲ್ಲಿ ಅಥವಾ ಸಾಮಾನ್ಯ ಪ್ರಕಟಣೆಗಳಿಗಾಗಿ ಶ್ವಾನ ಅಥವಾ ಸಾಕುಪ್ರಾಣಿಗಳ ಆರೈಕೆ ಅಂಕಣಗಳು ಮತ್ತು ಶ್ವಾನಗಳ ಬಗ್ಗೆ 'ಮಾನವ' ಆಸಕ್ತಿಯ ಲೇಖನಗಳನ್ನು ಬರೆಯುವುದು ಇವರ ಕೆಲಸವಾಗಿರುತ್ತದೆ.
೧೯೩೫ ರಲ್ಲಿ ಡಾಗ್ ರೈಟರ್ಸ್ ಅಸೋಸಿಯೇಷನ್ ಅನ್ನು ಸ್ಥಾಪಿಸಿದಾಗ ಮೊದಲ ಬಾರಿಗೆ ಈ ಪದವನ್ನು ಬಳಸಲಾಯಿತು. ಅವರು 'ಸುಮಾರು ೭೦ ವರ್ಷಗಳ ಹಿಂದೆ, ಶ್ವಾನ ಲೇಖಕರೆಂಬ ಯಾವುದೇ ವೃತ್ತಿಯಿರಲಿಲ್ಲ' ಎಂದು ಹೇಳುತ್ತಾರೆ. ಆಗ ಸುದ್ದಿಗಾರರು, ಮಹಿಳಾ ಸುದ್ದಿಗಾರರು ಮತ್ತು ನಿಯತಕಾಲಿಕೆ ಬರಹಗಾರರು ಇದ್ದರು. ಹೆಚ್ಚಿನ ಪತ್ರಿಕೆಗಳು ಶ್ವಾನ ಪ್ರದರ್ಶನಗಳನ್ನು ವರದಿ ಮಾಡಲು ಕ್ರೀಡಾ ಬರಹಗಾರರು, ವರದಿಗಾರರು ಮತ್ತು ಕಿರಿಯ ಪತ್ರಕರ್ತರನ್ನು ನಿಯೋಜಿಸುತ್ತಿದ್ದವು. ಆದರೂ, ಹೆಚ್ಚಿನ ಪತ್ರಿಕೆಗಳು ಕ್ರೀಡಾ ಪುಟಗಳಲ್ಲಿ ಶ್ವಾನಗಳ ಬಗ್ಗೆ ಬರೆಯುವ ಮೂಲಕ ಶ್ವಾನ ಜಗತ್ತನ್ನು ನಮ್ಮ ಜನಪ್ರಿಯ ಸಂಸ್ಕೃತಿಯ ಅಳಿಸಲಾಗದ ಭಾಗವನ್ನಾಗಿ ಮಾಡಿದರು.'[೧]
ಉಲ್ಲೇಖಗಳು
ಬದಲಾಯಿಸಿ