ಶ್ರುತಾಯುಧ (ದೇವನಾಗರಿ: श्रुतायुध) ಎಂಬುವವನು ಕಳಿಂಗದ (ಒಡಿಶಾ) ಕ್ಷತ್ರಿಯ ರಾಜ. ಆತ ವರುಣ ಮತ್ತು ಆತನ ಪತ್ನಿ ಪರ್ಣಾಸಳ ಮಗ .

ಶ್ರುತಾಯುಧ/ಶ್ರುತಾಯು
ಮಾಹಿತಿ
Nickname(s)ಶ್ರುತಾಯು
ಕುಟುಂಬವರುಣ ಮತ್ತು ಪರ್ಣಾಸ (ಪೋಷಕರು)
ಗಂಡ/ಹೆಂಡತಿಸಕ್ರಯಾನಿ
ಮಕ್ಕಳುಸಕ್ರದೇವಾ

ಮಾಂತ್ರಿಕ ಗದೆ

ಬದಲಾಯಿಸಿ

ಯುದ್ಧದಲ್ಲಿ ಯಾರೂ ಅವನನ್ನು ಕೊಲ್ಲದಂತೆ ವರುಣನಿಂದ ತನ್ನ ಮಗನಿಗೆ ವರವನ್ನು ಶ್ರುತಾಯುಧನ ತಾಯಿ ಬಯಸಿದ್ದಳು. ಅವನು ಅಮರತ್ವವನ್ನು ನೀಡಲು ಸಾಧ್ಯವಾಗದ ಕಾರಣ. ವರುಣನು ಶ್ರುತಾಯುಧನಿಗೆ ಯುದ್ಧದಲ್ಲಿ ಸೋಲಿಲ್ಲದೆ ಉಳಿಯಲು ಮಾಂತ್ರಿಕ ಗದೆಯನ್ನು ಉಡುಗೊರೆಯಾಗಿ ನೀಡುತ್ತಾನೆ.

ಈ ಶಸ್ತ್ರವನ್ನು ನಿರಾಯುಧ ಎದುರಾಳಿಯ ವಿರುದ್ಧ ಬಳಸಿದರೆ ಅದರ ಪ್ರತಿಕೂಲ ಪರಿಣಾಮಗಳ ಬಗ್ಗೆಯೂ ವರುಣ ಎಚ್ಚರಿಸಿದ್ದನು. ಎಚ್ಚರಿಕೆಯ ಪ್ರಕಾರ ಯಾವುದೇ ನಿರಾಯುಧ ವ್ಯಕ್ತಿಯ ವಿರುದ್ಧ ಅದನ್ನು ಬಳಸಿದರೆ ಗದೆ ಸ್ವತಃ ಶ್ರುತಾಯುಧನ ಮೇಲೆ ದಾಳಿ ಮಾಡುತ್ತದೆ.[]

ಕುರುಕ್ಷೇತ್ರ ಯುದ್ಧ

ಬದಲಾಯಿಸಿ

ಕಳಿಂಗವು ಕುರುಕ್ಷೇತ್ರ ಯುದ್ಧದಲ್ಲಿ ಹಸ್ತಿನಾಪುರ ಮತ್ತು ಕೌರವರ ಪರವಾಗಿತ್ತು. ಕಳಿಂಗದ ರಾಜನ ಸಹೋದರಿಯು ದುರ್ಯೋಧನನ ಸ್ನೇಹಿತನಾದ ಕರ್ಣನನ್ನು ಮದುವೆಯಾದದ್ದೂ ಇದಕ್ಕೆ ಒಂದು ಕಾರಣವಿರಬಹುದು ಎಂದು ಉಲ್ಲೇಖಿಸಲಾಗಿದೆ. ದ್ರೋಣ ಪರ್ವದಲ್ಲಿ ಶ್ರುತಾಯುಧನನ್ನು ಪುರುಷರಲ್ಲಿ ಹುಲಿ ಎಂದು ಉಲ್ಲೇಖಿಸಲಾಗಿದೆ.

ಯುದ್ಧದ ಮೊದಲ ದಿನದಂದು, ಅವನು ಇರಾವಣನನ್ನು ಎದುರಿಸುತ್ತಾನೆ ಮತ್ತು ಉತ್ತಮವಾಗಿ ಹೋರಾಡುತ್ತಾನೆ ಆದರೆ ಅಂತಿಮವಾಗಿ ಸೋಲುತ್ತಾನೆ.

ಯುದ್ಧದಲ್ಲಿ ಶ್ರುತಾಯುಧನಿಂದ ಬಳಸಿದ ಗದೆ

ಬದಲಾಯಿಸಿ

ಯುದ್ಧದ ೧೪ನೇ ದಿನದಂದು ಅರ್ಜುನ ದ್ರೋಣನ ಪದ್ಮವ್ಯೂಹ ಅಂತ್ಯವನ್ನು ತಲುಪಲು ಪ್ರಯತ್ನಿಸುತ್ತಿರುವಾಗ ಅರ್ಜುನನು ಕಂಬೋಜ ಸೈನ್ಯದ ವಿಭಾಗದ ಮೇಲೆ ದಾಳಿ ಮಾಡುತ್ತಾನೆ. ಕೃತವರ್ಮನನ್ನು ತನ್ನ ಆನೆಯ ಮೇಲಿಂದ ರಕ್ಷಿಸಿದ ಶ್ರುತಾಯುಧನು ಅರ್ಜುನನಿಗೆ ಸವಾಲು ಹಾಕಿ ಅರ್ಜುನನನ್ನು ಅನೇಕ ಬಾಣಗಳಿಂದ ಹೊಡೆದನು. ಆದರೆ ಅರ್ಜುನನು ಶ್ರುತಾಯುಧನ ಬಿಲ್ಲನ್ನು ಮುರಿದುಹಾಕುತ್ತಾನೆ. ಕೋಪದಿಂದ ಶ್ರುತಾಯುಧನು ಅರ್ಜುನನ ನಿರಾಯುಧ ಸಾರಥಿಯಾದ ಕೃಷ್ಣನ ಮೇಲೆ ತನ್ನ ಗದೆಯನ್ನು ಎಸೆಯುತ್ತಾನೆ. ವರುಣ ವಿವರಿಸಿದ ಷರತ್ತುಗಳ ಪ್ರಕಾರ ಗದೆಯು ಶ್ರುತಾಯುಧನ ಮೇಲೆ ತಿರುಗಿ ಅವನನ್ನು ಕೊಲ್ಲುತ್ತವೆ.[][]

ಉಲ್ಲೇಖಗಳು

ಬದಲಾಯಿಸಿ
  1. The Mahbharata, A Modern Rendering, Volume 2. 2021, Pine lake Road, Suite 100, Lincoln, NE68512, United States of America: iUniverse. 2006. p. 266. ISBN 978-0-595-40188-8.{{cite book}}: CS1 maint: location (link)
  2. "Sacred Texts SECTION XCI". www.sacred-texts.com. Retrieved 19 July 2017.
  3. "Srutayudha". www.ancientvoice.wikidot.com. Retrieved 19 July 2017.