ಶ್ರೀ ಮಾರುತಿ ಬ್ರಾಹ್ಮಣ ಸೇವಾ ಸಂಘ, ತಾಳ್ಯ

ಬಹಳ ಹಿಂದೆ ಗುಡದಪ್ಪನ ಮನೆಯೆಂದು ಕರೆಯಲಾಗುತ್ತಿದ್ದ ಮನೆಯ ಜಾಗದಲ್ಲಿ, ಈಗ 'ಸಮುದಾಯ ಭವನ'ವನ್ನು ನಿರ್ಮಿಸಲಾಗಿದೆ. ಆದರೆ ಸುಮಾರು ೩೦ ರ ದಶಕದಲ್ಲಿ ಈಗಿನಂತೆ ವಾಹನಸೌಕರ್ಯಗಳಿಲ್ಲದೆ, ದೂರದ ಊರುಗಳಿಂದ ತಮ್ಮ ಬಂಧು ಮಿತ್ರರ ಜೊತೆಯಲ್ಲಿ ಜಾತ್ರೆಗೆ ಬಂದ ಭಕ್ತಾದಿಗಳು ೩-೪ ದಿನಗಳು ಅಲ್ಲಿನ ೧೩-೧೪ ಬ್ರಾಹ್ಮಣರ ಮನೆಗಳಲ್ಲಿ ತಂಗಿದ್ದು, ಜಾತ್ರೆಯ ವಿಧಿಗಳೆಲ್ಲಾ ಮುಗಿದ ಬಳಿಕ ತಮ್ಮ ಸ್ವಸ್ಥಾನಕ್ಕೆ ವಾಪಸ್ಸಾಗುತ್ತಿದ್ದರು. ಮನೆಯ ಹೆಣ್ಣುಮಕ್ಕಳಿಗೆ ಇವರ ಆತಿಥ್ಯದಲ್ಲೇ ಕಾಲವ್ಯಯವಾಗಿ ರಥೋತ್ಸವವನ್ನು ನೋಡಲೂ ಬಿಡುವಿರುತ್ತಿರಲಿಲ್ಲ. ಈ ಬಿಕ್ಕಟ್ಟನ್ನು ವೀಕ್ಷಿಸಿದ ತಾಳ್ಯದ ಭೀಮರಾಯರು, ವೇ.ಬ್ರ.ಶ್ರೀ ಸುಬ್ಬಾಭಟ್ಟರು, ಮದ್ದೇರು ಹನುಮಂತರಾಯರು, ಶ್ರೀ.ಎಮ್.ಎಸ್.ರಾಮರಾಯರು,ಚಿತ್ರದುರ್ಗದ ಶ್ಯಾ.ಸಿ. ಸುಬ್ಬರಾಯರು ಮೊದಲಾದವರು, ಸಮಾಲೋಚಿಸಿ, 'ಬ್ರಹ್ಮ ರಥೋತ್ಸವ', 'ದೊಡ್ಡತೇರು' ಮತ್ತು 'ಓಕಳಿ ದಿ'ನಗಳಲ್ಲಿ ಬ್ರಾಹ್ಮಣರೆಲ್ಲರಿಗೂ ಊಟದ ವ್ಯವಸ್ಥೆಯಾದರೆ, ಒಳ್ಳೆಯದೆಂದು ತೀರ್ಮಾನಿಸಿದರು. ಈಗಿನ 'ಸಮುದಾಯ ಭವನ'ದ ಮುಂದೆ ಗುಡದಪ್ಪನ ಮನೆಯಿತ್ತು. ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ ಉಚಿತವಾಗಿ ಇಲ್ಲಿ ಇಳಿದುಕೊಳ್ಳಲು ವ್ಯವಸ್ಥೆಮಾಡಿದ್ದರು. ವರ್ಷದ ಇತರ ದಿನಗಳಲ್ಲಿ ಅದು ಖಾಲಿ ಇರುತ್ತಿತ್ತು. 'ಟ್ರಸ್ಟ್' ನ ಒಪ್ಪಿಗೆಯಮೇರೆಗೆ ಜಾತ್ರೆಯ ಮೂರುದಿನಗಳ ಕಾಲದಲ್ಲಿ ಅದನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅಲ್ಲಿ ಅಡುಗೆ ಮಾಡಲು ಪ್ರಾರಂಭಿಸಿದರು. ಅದಕ್ಕೆ 'ಮಾರುತಿ ನಿಲಯ'ವೆಂದು ಹೆಸರಾಯಿತು.

ಚಿತ್ರ:1-Shimoga visit (2012-13) HP 158.JPG
'ಶ್ರೀ ಮಾರುತಿ ಬ್ರಾಹ್ಮಣ ಸೇವಾ ಸಂಘ'

ಪ್ರಾರಂಭದ ಹಂತದಲ್ಲಿ

ಬದಲಾಯಿಸಿ

ಶುರುವಿನಲ್ಲಿ ಎಲ್ಲಾ ಮನೆಯವರೂ ತಮ್ಮ ಶಕ್ತ್ಯಾನುಸಾರ ತಲಾ ಅಕ್ಕಿ, ಬೇಳೆ,ಬೆಲ್ಲ, ಎಣ್ಣೆ, ತುಪ್ಪ,ಅಂತ ಅಡುಗೆಗೆ ಬೇಕಾದ ಎರಡುಹೊತ್ತಿನ ಊಟ ತಯಾರಿಸುತ್ತಿದ್ದರು. ಊಟದ ವ್ಯವಸ್ಥೆಯ ಬಳಿಕ ಹೆಚ್ಚು ಹೆಚ್ಚು ಜನ ದಾವಣಗೆರೆ, ಚಿತ್ರದುರ್ಗ, ಹೊಳಲ್ಕೆರೆ, ಚಿಕ್ಕಜಾಜೂರು, ಬೆಂಗಳೂರು ಮುಂತಾದ ದೂರಪ್ರದೇಶಗಳಿಂದಲೂ ಬರಲು ಆರಂಭಿಸಿದರು. ಹೀಗಾಗಿ ಸನ್, ೧೯೩೯ ರಲ್ಲಿ ಶ್ರೀ ಮಾರುತಿ ಬ್ರಾಹ್ಮಣ ಸೇವಾ ಸಂಘ (SMBSS) ವೆಂಬ ಹೆಸರಿನ ಸಂಸ್ಥೆ, ಅಸ್ತಿತ್ವಕ್ಕೆ ಬಂತು. ೩ ಜನ ಬ್ರಾಹ್ಮಣರು ಹಣ ಹಾಕಿ ಸಂತರ್ಪಣೆ ಮಾಡುತ್ತಿದ್ದರು. ಮುಂದೆ ಹಲವಾರು ದಾನಿಗಳು ಮುಂದೆ ಬಂದು. ಚಿತ್ರದುರ್ಗದ ಅನಂತಪ್ಪ ಶೆಟ್ಟರು, ಶ್ರೀ.ಹನುಮಂತರಾಯರು, ಸಿ.ಸುಬ್ಬರಾವ್, ಶ್ರೀ.ಟಿ.ವಿ.ಭೀಮರಾಯರು. ಎಮ್.ಎಸ್.ಗೋವಿಂದರಾಜ್, ಮೊದಲಾದವರ ಸಹಕಾರದಿಂದ ಅನ್ನ ಸಂತರ್ಪಣೆಯ ಏರ್ಪಾಡಾಯಿತು. ಒಟ್ಟು ಐದು ದಿನ ಬ್ರಾಹ್ಮಣ ಅನ್ನ ಸಂತರ್ಪಣೆ ಸತತವಾಗಿ ಜರುಗುತ್ತಿದೆ.

ಹಮ್ಮಿಕೊಂಡ ಇತರ ಕಾರ್ಯಕ್ರಮಗಳು

ಬದಲಾಯಿಸಿ
  • ಧರ್ಮೋಪನಯನ
  • ಸಾಂಸ್ಕೃತಿಕ ಕಾರ್ಯಕ್ರಮಗಳು
  • ಕಲ್ಯಾಣ ಮಂಟಪ ಮತ್ತು ವಸತಿ ಗೃಹಗಳ ನಿರ್ಮಾಣ

ವಿವಿಧ ಕಾಲದಲ್ಲಿ (SMBSS) ನಲ್ಲಿ, ಕಾರ್ಯನಿರ್ವಹಿಸಿದ ಮಹನೀಯರು

ಬದಲಾಯಿಸಿ

ಅಧ್ಯಕ್ಷರು

  • ಶ್ಯಾನುಭೋಗ್ ಸಿ.ಸುಬ್ಬರಾವ್,
  • ಅನಂತಪ್ಪ ಶೆಟ್ಟಿ,
  • ಟಿ.ಎಸ್.ಕೃಷ್ಣಮೂರ್ತಿ,
  • ಟಿ.ಬಿ.ಮಾರುತೀಶ್
  • ಟಿ.ಬಿ.ವೆಂಕಟರಾಮ್

ಉಪಾಧ್ಯಕ್ಷರು

  • ಟಿ.ಆರ್.ಶ್ರೀನಿವಾಸಮೂರ್ತಿ,
  • ಎಸ್.ಕೆ.ಲಕ್ಷ್ಮಣರಾವ್
  • ಟಿ.ಬಿ.ವೆಂಕಟರಾಮ್,
  • ಬಿ.ಎಸ್.ಚಿದಂಬರರಾವ್

ಕಾರ್ಯದರ್ಶಿಗಳು

  • ಟಿ.ಆರ್.ಶ್ರೀನಿವಾಸಮೂರ್ತಿ,
  • ಎಸ್.ಕೆ.ಲಕ್ಷ್ಮಣರಾವ್
  • ಟಿ.ಬಿ.ವೆಂಕಟರಾಮ್,
  • ಟಿ.ಎಸ್.ಸತ್ಯನಾರಾಯಣ ಭಟ್,
  • ಎಂ,ಎಸ್.ರಾಮದಾಸ್
  • ಬಿ.ಸಿ.ಶಿವರಾಂ
  • ಎಂ.ಆರ್.ಜಯಶಂಕರ್
  • ಟಿ.ಎಲ್.ಆನಂದರಾವ್
  • ಎಂ.ಎಸ್.ಮಾರುತೇಶ್

ಸಹ-ಕಾರ್ಯದರ್ಶಿಗಳು

  • ಟಿ.ಎಲ್.ಆನಂದರಾವ್,
  • ಬಿ.ಆರ್.ಸತ್ಯನಾರಾಯಣ