ಶ್ರೀ.ಶ್ರೀ. ವಿರಜಾನಂದ ಸರಸ್ವತಿ ಸ್ವಾಮೀಜಿ

ತಮ್ಮ ಪೂರ್ವಾಶ್ರಮದ 'ಕೃಷ್ಣಮೂರ್ತಿ'ಯೆಂಬ ನಾಮಧೇಯವನ್ನು ಹೊಂದಿದ, ಶ್ರೀ.ಶ್ರೀ. ವಿರಜಾನಂದ ಸರಸ್ವತಿಸ್ವಾಮೀಜಿಯವರು ಹೊಳೆನರಸೀಪುರದ ಪರಮಪೂಜ್ಯ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿಯವರು ಸಂಸ್ಥಾಪಿಸಿದ ಅಧ್ಯಾತ್ಮಪ್ರಕಾಶ ಕಾರ್ಯಾಲಯಕ್ಕೆ ತೆರೆಳಿ,ಅಲ್ಲಿನ ಸಂಸ್ಥಾಪಕರ ನೇರ ಶಿಷ್ಯರಲ್ಲೊಬ್ಬರಾದ ಪೂಜ್ಯ |ಬ್ರ||ಶ್ರೀ|| ಲಕ್ಷ್ಮೀನರಸಿಂಹಮೂರ್ತಿಗಳವರಿಂದ ಪ್ರಸ್ಥಾನತ್ರಯ ಭಾಷ್ಯಾಭ್ಯಾಸ ಮಾಡಿದರು.ಭಗವಾನ್ ರಮಣ ಮಹರ್ಷಿಗಳ ಉಪದೇಶಾಮೃತದ ಅಧ್ಯಯನವನ್ನು ಕೈಗೊಂಡರು.ದಿವ್ಯತ್ರಯರ ಜೀವನ ಮತ್ತು ಉಪದೇಶಗಳ ಅಧ್ಯಯನವನ್ನೂ ಮಾಡಿದರು. ಆದಿಶಂಕರ, ರಮಣಮಹರ್ಷಿಗಳು ಮತ್ತೆಲ್ಲರ ಜೀವನ ಹಾಗೂ ಉಪದೇಶಗಳನ್ನು ಕುರಿತು ಕರ್ನಾಟಕದ ಮೂಲೆ ಮೂಲೆಗಳಲ್ಲೂ ಮತ್ತು ದೇಶದಾದ್ಯಂತ ಪರ್ಯಟನೆ ಮಾಡುತ್ತಾ ಹಲವಾರು ಉಪನ್ಯಾಸ ಮಾಲೆಗಳನ್ನು ನೀಡಿ ಭಕ್ತಜನರ ಮನ್ನಣೆಗೆ ಪಾತ್ರರಾಗಿದ್ದಾರೆ. ಹೀಗೆ ಸಂಚರಿಸುತ್ತಾ ಪೂಜ್ಯರು,ಕನಕಪುರ ತಾಲ್ಲೂಕಿನ ಚಿಕ್ಕಗ್ರಾಮವಾದ 'ದೊಡ್ಡ ಮುದವಾಡಿ'ಯಲ್ಲಿರುವ 'ಶ್ರೀ ದತ್ತ ಸದಾನಂದಾಶ್ರಮ'ದಲ್ಲಿ ತಪಗೈಯುತ್ತಿದ್ದ ಸ್ವಾಮಿ ಸಹಜಾನಂದ ಸರಸ್ವತೀ ಮಹಾರಾಜ್ ರವರ ನಿಕಟ ಸಂಪರ್ಕಕ್ಕೆ ಬಂದರು.ತಮ್ಮ ಉಪನ್ಯಾಸ ಸಮಯದಲ್ಲಿ ಬಂದ ಸಮಸ್ತ ಕಾಣಿಕೆ ಹಣವನ್ನು ಆ ಆಶ್ರಮದ ಅಭಿವೃದ್ಧಿಕಾರ್ಯಗಳಿಗಾಗಿಯೇ ವಿನಿಯೋಗಿಸಿದರು.

ಮಾತೋಶ್ರೀಯವರ ಇಚ್ಛೆ

ಬದಲಾಯಿಸಿ

ಶ್ರೀಗಳ ಮಾತೋಶ್ರೀಯವರ ಇಚ್ಛೆಯಂತೆ ಅವರು,ಗೃಹಸ್ಥಾಶ್ರಮವನ್ನು ಸ್ವೀಕರಿಸರೂ ನಡಕೊಂಡದ್ದು ಒಬ್ಬ ಸನ್ಯಾಸಿಯ ತರಹ. ಆದರೆ ಅವರು ಧರಿಸುತ್ತಿದ್ದದ್ದು ಬಿಳಿಯ ವಸ್ತ್ರ.ದತ್ತನಂತಿದ್ದು 'ದತ್ತೋಪಾಸನೆ'ಯಲ್ಲಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ.

ಸನ್ಯಾಸ ದೀಕ್ಷೆ

ಬದಲಾಯಿಸಿ

ಸನ್, ೧೯೯೬ ರ, ಫೆ.೧೭ ನೆಯ 'ಮಹಾಶಿವರಾತ್ರಿ'ಯ ಶುಭದಿನದಂದು ಪೂಜ್ಯ 'ಸ್ವಾಮಿ ಸಹಜಾನಂದಜೀ ಮಹಾರಾಜ್' ರವರಿಂದ ವಿಧಿಪೂರ್ವಕವಾಗಿ ಸನ್ಯಾಸಾಶ್ರಮದ ದೀಕ್ಷೆಯನ್ನು 'ಶ್ರೀ ದತ್ತ ಸದಾನಂದಾಶ್ರಮ'ದಲ್ಲಿ ಸ್ವೀಕರಿಸಿದರು.ಶಾಸ್ತ್ರಬದ್ಧವಾಗಿ ದಂಡ-ಕಮಂಡಲುಗಳನ್ನು ವಿಸರ್ಜಿಸಿದ ಪೂಜ್ಯರು,ಭಕ್ತರ ಮನೋಕಾಮನೆಗಳನ್ನು ಈಡೇರಿಸಲು ಸಹಕರಿಸುತ್ತಾ,ಅವರೊಂದಿಗೆ ಅತ್ಯಂತ ಸರಳ ಮತ್ತು ಸಹಜ ಸಹಬಾಳ್ವೆಯನ್ನು ನಡೆಸುತ್ತಾ ಬಂದಿದ್ದಾರೆ. ಅವರು ಭೆಟ್ಟಿಮಾಡಿದ ಸ್ಥಳಗಳು ಹೀಗಿವೆ :

  • ಬೆಂಗಳೂರು,
  • ಮಧುಗಿರಿ,
  • ತಿರುವಣ್ಣಾ ಮಲೈ
  • ಹೊಳೆನರಸೀಪುರ,
  • ಕೊಳ್ಳೇಗಾಲ
  • ಭದ್ರಾವತಿ

ಪೂಜ್ಯರು ಹಲವಾರು ಕೃತಿಗಳನ್ನೂ, ರೂಪಕಗಳನ್ನೂ, ಅಧ್ಯಾತ್ಮಕ ಗೀತೆಗಳನ್ನೂ, ರಚಿಸಿದ್ದಾರೆ. ಆಂಗ್ಲಭಾಷೆಯಲ್ಲಿನ ಕೆಲವು ಅಮೂಲ್ಯ ಗ್ರಂಥಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಸ್ವಾಮೀಜಿಯವರ ಇತ್ತೀಚಿನ ಜನಪ್ರಿಯ ಕೃತಿಗಳು :

  • ಅನುಭಾವಿಯ ಅಮೃತ ಬಿಂದುಗಳು,
  • ಸದ್ಗುಣ ಸಂವರ್ಧನೆ,
  • ಭಕ್ತಿಯಾತ್ರೆ,
  • ಗುರುಕೃಪಾ ಸಿಂಚನ,
  • ಭಕ್ತಾಷ್ಟಕ,

ವಿಶಿಷ್ಟ್ ಟ್ರಸ್ಟ್'

ಬದಲಾಯಿಸಿ

ಒಂದು ವರ್ಷದಿಂದ ಪೂಜ್ಯರು, ಮೈಸೂರಿನ 'ಹಿನಕಲ್ ನಲ್ಲಿರುವ 'ಸದ್ಗುರು ಸದನ'ದಲ್ಲಿ ನೆಲೆಸಿದ್ದು, ವಿಶೇಷವಾಗಿ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. 'ವಿಶಿಷ್ಟ್' ಎಂಬ ಟ್ರಸ್ಟ್ ನ 'ಸಂಸ್ಥಾಕ ಅಧ್ಯಕ್ಷ'ರಾಗಿರುವ ಶ್ರೀರವರು, ಹಲವಾರು 'ಅಧ್ಯಾತ್ಮಿಕ ಶಿಬಿರ'ಗಳನ್ನು ಆಯೋಜಿಸುತ್ತಿದ್ದಾರೆ. ತಮ್ಮ ಭಕ್ತರನ್ನು ಆದರ್ಶ ಗೃಹಸ್ಥರನ್ನಾಗಿಸಿ, ಜ್ಞಾನ-ಭಕ್ತಿ-ವೈರಾಗ್ಯಗಳ ಸಂಗಮದಲ್ಲಿ ಮೀಯುವಂತೆ ದಾರಿತೋರಿಸುತ್ತಿರುವ, ಅನುಭಾವಿಗಳು, 'ಶ್ರೀ.ಶ್ರೀ.ವಿರಜಾನಂದ ಸರಸ್ವತಿ ಮಹಾರಾಜ್' ರವರು.