ಶ್ರೀವರ್ಧನ್ ಕೋಟೆಯು ರಾಜ್ಮಾಚಿ ಕೋಟೆಯನ್ನು ನಿರ್ಮಿಸುವ ಎರಡು ಬೆಟ್ಟಗಳ ಕೋಟೆಗಳಲ್ಲಿ ಒಂದಾಗಿದೆ. [] ಇದು ರಾಜ್ಮಾಚಿ ಗ್ರಾಮದಲ್ಲಿದೆ. ಇದು ಸಹ್ಯಾದ್ರಿ ಪರ್ವತ ಶ್ರೇಣಿಯ ಲೋನಾವಲದಿಂದ ೫.೮ ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ೯೦೦ ಮೀ (೩೦೦೦ ಅಡಿ) ಎತ್ತರದಲ್ಲಿದೆ. ಇದಕ್ಕೆ ಶ್ರೀವರ್ಧನ್ ಗಣಪತ್ರಾವ್ ಪಟವರ್ಧನ್ ಅವರ ಹೆಸರನ್ನು ಇಡಲಾಗಿದೆ. ಕೋಟೆಯನ್ನು ಹೊರತುಪಡಿಸಿ ಯಾವುದೇ ಗೋಚರ ನಿರ್ಮಾಣ ಇಲ್ಲಿ ಇಲ್ಲ. ಇದನ್ನು ಸಹ್ಯಾದ್ರಿ ಪ್ರದೇಶದ ಕಾವಲು ಗೋಪುರವಾಗಿ ಬಳಸಲಾಗಿದೆ ಎಂದು ಅಂದಾಜಿಸಲಾಗಿದೆ. ಬೆಟ್ಟದ ತುದಿಯಲ್ಲಿ ಎರಡು ನೀರಿನ ತೊಟ್ಟಿಗಳಿದೆ. ಅದರಲ್ಲಿ ಒಂದು ತೊಟ್ಟಿಯಲ್ಲಿ ಕಬ್ಬಿಣದ ಕಂಬವಿದೆ. []

ಶ್ರೀವರ್ಧನ್ ಕೋಟೆ
ಸಹ್ಯಾದ್ರಿ ಬೆಟ್ಟ ಶ್ರೇಣಿ ಇದರ ಭಾಗ
ಪುಣೆ, ಮಹಾರಾಷ್ಟ್ರ
ಶ್ರೀವರ್ಧನ್ ಕೋಟೆ
ನಿರ್ದೇಶಾಂಕಗಳು18°49′37.8″N 73°24′00″E / 18.827167°N 73.40000°E / 18.827167; 73.40000
ಶೈಲಿಬೆಟ್ಟದ ಕೋಟೆ
ಎತ್ತರ೩೬೦೦ ಅಡಿ
ಸ್ಥಳದ ಮಾಹಿತಿ
ಒಡೆಯಭಾರತ ಸರ್ಕಾರ
ಇವರ ಹಿಡಿತದಲ್ಲಿದೆ
(೧೭೩೯–೧೮೧೮)
 ಯುನೈಟೆಡ್ ಕಿಂಗ್ಡಂ
  • ಈಸ್ಟ್ ಇಂಡಿಯಾ ಕಂಪನಿ (೧೮೧೮–೧೮೫೭)
  • ಬ್ರಿಟಿಷ್ ರಾಜ್ (೧೮೫೭–೧೯೪೭)
 India (೧೯೪೭-)
ಇವರಿಗೆ ಮುಕ್ತವಾಗಿದೆ
 ಸಾರ್ವಜನಿಕರಿಗೆ
ಹೌದು
ಪರಿಸ್ಥಿತಿಅವಶೇಷ
ಸ್ಥಳದ ಇತಿಹಾಸ
ಸಾಮಗ್ರಿಗಳುಕಲ್ಲು

ತಲುಪುವುದು ಹೇಗೆ

ಬದಲಾಯಿಸಿ

ಕೋಟೆಯನ್ನು ತಲುಪಲು ಎರಡು ಮಾರ್ಗಗಳಿವೆ:

೧) ಲೋನಾವ್ಲಾ ತುಂಗರ್ಲಿ ಮಾರ್ಗ- ಇದು ಸುಲಭವಾದ ಮಾರ್ಗವಾಗಿದ್ದು, ಮೂಲ ಗ್ರಾಮ ಉಧೇವಾಡಿಯಾಗಿರುತ್ತದೆ.

೨) ಕರ್ಜತ್ - ಇಲ್ಲಿಂದ ಕೊಂಡಿವಾಡೆ ಮಾರ್ಗವನ್ನು ತಲುಪಲು ಸುಮಾರು ೧ ಗಂಟೆ ತೆಗೆದುಕೊಳ್ಳುತ್ತದೆ. ೨-ಗಂಟೆಗಳ ಕಾಲ ಬೆಟ್ಟದ ಮೇಲೆ ಚಾರಣ ಮಾಡಬೇಕಾಗುತ್ತದೆ. ಈ ಮಾರ್ಗವು ಉಲ್ಲಾಸ್ ನದಿ ಕಣಿವೆಯ ಮೂಲಕ ದಟ್ಟವಾದ ಅರಣ್ಯ ಪ್ರದೇಶದ ಮೂಲಕ ಹಾದುಹೋಗುತ್ತದೆ. []

ಉಲ್ಲೇಖಗಳು

ಬದಲಾಯಿಸಿ
  1. "Friends of Forts". Archived from the original on 5 April 2009. Retrieved 16 March 2009.
  2. Gunaji, Milind (2005). Offbeat Tracks in Maharashtra. Popular Prakashan. pp. 38–39. ISBN 81-7154-669-2. Retrieved 17 March 2009.
  3. "राजमाची". Archived from the original on 20 May 2018. Retrieved 19 May 2018.


ಸಹ ನೋಡಿ

ಬದಲಾಯಿಸಿ