ಶ್ರೀಲೀಲಾ (ನಟಿ)
ಭಾರತೀಯ ನಟಿ
ಶ್ರೀಲೀಲಾ ಕನ್ನಡ ಚಿತ್ರರಂಗದ ನಟಿ. ಎ. ಪಿ. ಅರ್ಜುನ್ ನಿರ್ದೇಶನದ ೨೦೧೯ರ ಕಿಸ್ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣ ಆರಂಭಿಸಿದರು. ಮೊದಲ ಚಿತ್ರದಲ್ಲೇ ಗುರುತಿಸಿಕೊಂಡ ಇವರು ನಟನೆಯ ಜೊತೆಗೆ ಪ್ರಸ್ತುತ ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿಯೂ ಅಧ್ಯಯನ ನಡೆಸುತ್ತಿದ್ದಾರೆ. [೨].
ಶ್ರೀಲೀಲಾ | |
---|---|
Born | ಶ್ರೀಲೀಲಾ ೧೪ ಜುಲೈ ೨೦೦೧ ಡೆಟ್ರಾಯ್ಟ್, ಮಿಚಿಗನ್, ಅಮೆರಿಕ ಸಂಯುಕ್ತ ಸಂಸ್ಥಾನ.[೧] |
Nationality | ಭಾರತೀಯ |
Occupation |
|
Years active | 2019–ಈವರೆಗೆ |
ವೈಯಕ್ತಿಕ ಜೀವನ
ಬದಲಾಯಿಸಿಅಮೆರಿಕದ ಮಿಚಿಗನ್ ನಲ್ಲಿ, ಶುಭಕರ್ ರಾವ್ ಸುರಪನೇನಿ ಮತ್ತು ಸ್ವರ್ಣಲತ ದಂಪತಿಗಳಿಗೆ ಜನಿಸಿದ ಶ್ರೀಲೀಲಾ ಅವರಿಗೆ ಇಬ್ಬರು ಅಣ್ಣಂದಿರು ಇದ್ದಾರೆ.
ವೃತ್ತಿಜೀವನ
ಬದಲಾಯಿಸಿಹೊಸನಟ ವಿರಾಟ್ ಜೊತೆಗೆ ಅಭಿನಯಿಸಿದ ಕಿಸ್ ಚಿತ್ರವೇ ಲೀಲಾ ಅವರ ಮೊದಲ ಚಿತ್ರ[೩]. ಅರ್ಜುನ್ ನಿರ್ದೇಶಿಸಿದ ಈ ಚಿತ್ರ ಯಶಸ್ಸನ್ನು ಗಳಿಸಿತು. ತಮ್ಮ ಮೊದಲ ಚಿತ್ರದ ಬಿಡುಗಡೆಗೂ ಮೊದಲೇ, ನಟ ಶ್ರೀಮುರಳಿ ಜೊತೆಗೆ ಭರಾಟೆ ಚಿತ್ರಕ್ಕೆ ನಾಯಕಿಯಾಗಿ ಲೀಲಾ ಆಯ್ಕೆಯಾದರು. ಅವರ ಎರಡೂ ಚಿತ್ರಗಳು ಗೆಲುವು ಸಾಧಿಸಿವೆ.[೪]
ಚಿತ್ರಗಳು
ಬದಲಾಯಿಸಿವರ್ಷ | ಚಿತ್ರ | ಪಾತ್ರ | ಭಾಷೆ | ವಿವರ |
---|---|---|---|---|
2019 | ಕಿಸ್ಸ್ | ನಂದಿನಿ | ಕನ್ನಡ | ಮೊದಲ ಚಿತ್ರ |
2019 | ಭರಾಟೆ | ರಾಧಾ | ಕನ್ನಡ |
ಉಲ್ಲೇಖಗಳು
ಬದಲಾಯಿಸಿ- ↑ "Sree Leela: Age, Wiki, Photos, Biography". FilmiFeed. Archived from the original on 2020-06-24. Retrieved 2020-08-23.
- ↑ "Sree Leela Age, Biography, Height, Place of Birth, News & Photos - See latest". www.seelatest.com.
- ↑ "ಆರ್ಕೈವ್ ನಕಲು". Archived from the original on 2020-07-12. Retrieved 2020-08-23.
- ↑ https://www.prajavani.net/entertainment/cinema/shreeleela-chitchat-722093.html