ಶ್ರೀರಸ್ತು ಶುಭಮಸ್ತು 2
ಶ್ರೀರಸ್ತು ಶುಭಮಸ್ತು ಪ್ರಸ್ತುತ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ. [೧]ಈ ಕಾರ್ಯಕ್ರಮವು ಝೀ ಮರಾಠಿಯ ಅಗ್ಗಬಾಯಿ ಸಾಸುಬಾಯಿ ಧಾರಾವಾಹಿಯ ಅಧಿಕೃತ ರಿಮೇಕ್ ಆಗಿದೆ [೨]. ಈ ಧಾರಾವಾಹಿಯು 2022ರ ಅಕ್ಟೋಬರ್ 31ರಂದು ಪ್ರಥಮ ಪ್ರದರ್ಶನಗೊಂಡಿತು. ಧಾರಾವಾಹಿಯಲ್ಲಿ ಸುಧಾ ರಾಣಿ, ಅಜಿತ್ ಹಂಡೆ ಮತ್ತು ದೀಪಕ್ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.[೩] [೪]
ಶ್ರೀರಸ್ತು ಶುಭಮಸ್ತು 2 | |
---|---|
ಶೈಲಿ | ದೈನಂದಿನ ಧಾರಾವಾಹಿ |
ನಿರ್ದೇಶಕರು | ಸುದೇಶ್ K. ರಾವ್ |
ನಟರು | See below |
ದೇಶ | ಭಾರತ |
ಭಾಷೆ(ಗಳು) | ಕನ್ನಡ |
ಒಟ್ಟು ಸಂಚಿಕೆಗಳು | 262 |
ನಿರ್ಮಾಣ | |
ಸ್ಥಳ(ಗಳು) | ಬೆಂಗಳೂರು, ಕರ್ನಾಟಕ, ಭಾರತ |
ಕ್ಯಾಮೆರಾ ಏರ್ಪಾಡು | ಮಲ್ಟೀಕ್ಯಾಮೆರಾ |
ಸಮಯ | 22 ನಿಮಿಷಗಳು |
ಪ್ರಸಾರಣೆ | |
ಮೂಲ ವಾಹಿನಿ | ಝೀ ಕನ್ನಡ |
ಮೂಲ ಪ್ರಸಾರಣಾ ಸಮಯ | 31 ಅಕ್ಟೋಬರ್ 2022 | – ಪ್ರಸ್ತುತ
ಕಥಾವಸ್ತು
ಬದಲಾಯಿಸಿವಿಧವೆಯಾಗಿರುವ ತುಳಸಿ (ಸುಧಾರಾಣಿ) ತನ್ನ ಕಟ್ಟುನಿಟ್ಟಾದ ಮಾವ, ಮಗ ಸಮರ್ಥ ಮತ್ತು ಮಗಳು ಸಿರಿಯೊಂದಿಗೆ ಜೀವನ ನಡೆಸುತ್ತಾ ಇರುತ್ತಾಳೆ. ವಿಧವೆಯಾಗಿರುವ ತುಳಸಿಯು ಸ್ನೇಹವನ್ನು ಮತ್ತು ಬೆಂಬಲವನ್ನು ತನ್ನ ಸೊಸೆ ಸಿರಿಯಲ್ಲಿ ಕಾಣುತ್ತಾಳೆ. ಸಿರಿ ತನ್ನ ಅತ್ತೆ ತುಳಸಿಗೆ ಮರುಮದುವೆ ಮಾಡಲು ತನ್ನ ಕುಟುಂಬ ಮತ್ತು ಸಮಾಜದ ವಿರುದ್ಧ ನಿಂತು ಹೋರಾಟ ಮಾಡುತ್ತಾಳೆ. ಕಥೆಯು ತುಳಸಿಯ ಮರುಮದುವೆಯ ನಂತರದ ಜೀವನದ ಬಗ್ಗೆ ಗಮನಹರಿಸುತ್ತದೆ.
ಪಾತ್ರವರ್ಗ
ಬದಲಾಯಿಸಿ- ಸುಧಾ ರಾಣಿ[೫] :- ತುಳಸಿ ಪಾತ್ರದಲ್ಲಿ
- ಅಜಿತ್ ಹಂಡೆ[೬] :- ಮಾಧವ್ ಪಾತ್ರದಲ್ಲಿ
- ದೀಪಕ್ ಗೌಡ / ದರ್ಶಿತ್[೭] :- ಸಮರ್ಥ್ ಪಾತ್ರದಲ್ಲಿ
- ಚಂದನಾ ರಾಘವೇಂದ್ರ:- ಸಿರಿ ಪಾತ್ರದಲ್ಲಿ
- ವೆಂಕಟ್ ರಾವ್ ದತ್ತಾತ್ರೇಯನಾಗಿ
- ಅರ್ಫಾತ್:- ಅವಿನಾಶ್ ಪಾತ್ರದಲ್ಲಿ
- ಲಾವಣ್ಯ:- ಪೂರ್ಣಿ ಪಾತ್ರದಲ್ಲಿ
- ನೇತ್ರಾ ಜಾಧವ್:- ಶಾರ್ವರಿ ಪಾತ್ರದಲ್ಲಿ
- ಲಾವಣ್ಯ ಮೋಹನ್:- ನಿಧಿ ಪಾತ್ರದಲ್ಲಿ
- ನಕುಲ್:- ಅಭಿಲಾಷ್ ಪಾತ್ರದಲ್ಲಿ
ರೂಪಾಂತರಗಳು
ಬದಲಾಯಿಸಿಭಾಷೆ. | ಶೀರ್ಷಿಕೆ | ಮೂಲ ಬಿಡುಗಡೆ | ಜಾಲಬಂಧ (ಎಸ್. | ಕೊನೆಯದಾಗಿ ಪ್ರಸಾರವಾಯಿತು | ಟಿಪ್ಪಣಿಗಳು |
---|---|---|---|---|---|
ಮರಾಠಿ | ಅಗ್ಗಬಾಯ್ ಸಾಸುಬಾಯ್ अग्गंबाई सासूबाई |
22 ಜುಲೈ 2019 | ಝೀ ಮರಾಠಿ | 13 ಮಾರ್ಚ್ 2021 | ಮೂಲ |
ಮಲಯಾಳಂ | ಮನಮ್ ಪೊಲೆ ಮಾಂಗಲ್ಯಂ മനംപോലെ മംഗല്യം |
28 ಡಿಸೆಂಬರ್ 2020 | ಝೀ ಕೇರಳ | 2 ಜನವರಿ 2022 | ರೀಮೆಕ್ |
ತಮಿಳು | ಪುಧು ಪುಧು ಅರ್ಥಂಗಲ್ புதுப்புது அர்த்தங்கள் |
22 ಮಾರ್ಚ್ 2021 | ಝೀ ತಮಿಳು | 20 ನವೆಂಬರ್ 2022 | |
ಪಂಜಾಬಿ | ಸಾಸ್ಸೇ ನೀ ಸಾಸ್ಸೇ ತು ಖುಶಿಯಾನ್ ಚ ವಾಸ್ಸೇ ਸੱਸੇ ਨੀ ਸੱਸੇ ਤੂੰ ਖੁਸ਼ੀਆਂ ਚ ਵੱਸੇ |
25 ಏಪ್ರಿಲ್ 2022 | ಝೀ ಪಂಜಾಬಿ | 23 ಸೆಪ್ಟೆಂಬರ್ 2022 | |
ಕನ್ನಡ | ಶ್ರೀರಸ್ತು ಶುಭಮಸ್ತು | 31 ಅಕ್ಟೋಬರ್ 2022 | ಝೀ ಕನ್ನಡ | ಪ್ರಸಾರವಾಗುತ್ತಿದೆ |
ಬಾಹ್ಯಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ ಚಂದನವನದ ಸುಂದರಿ ಸುಧಾರಾಣಿ". News18 Kannada. Retrieved 2023-01-24.
- ↑ "'Aggabai Sasubai' to get remade into Kannada soon - Times of India". The Times of India. Retrieved 2022-06-29.
- ↑ "ಕನ್ನಡ ಕಿರುತೆರೆಗೆ ದೀಪಕ್ ಗೌಡ ಕಂಬ್ಯಾಕ್, 'ಶ್ರೀರಸ್ತು ಶುಭಮಸ್ತು' ಎಂದು ಬಲಗಾಲಿಟ್ಟು ಬಂದ ನಟಿ ಸುಧಾರಾಣಿ". Vijaya Karnataka. Retrieved 2023-01-24.
- ↑ "ಶ್ರೀರಸ್ತು ಶುಭಮಸ್ತು ಧಾರಾವಾಹಿ ಪ್ರಸಾರಕ್ಕೆ ಮೂಹೂರ್ತ ಫಿಕ್ಸ್". ಫಿಲ್ಮಿಬೀಟ್ ಕನ್ನಡ. Retrieved 23 ಅಕ್ಟೋಬರ್ 2022.
- ↑ "Tejashri Pradhan-Starrer Aggabai Sasubai To Be Remade in Kannada Soon". News18. Retrieved 2023-01-24.
- ↑ "मराठीतील 'अग्गंबाई सासूबाई' मालिकेचा होणार 'कन्नड' भाषेत रिमेक". ABP Majha (in ಮರಾಠಿ). Retrieved 2023-01-24.
- ↑ "Deepak Gowda to make his acting comeback with soon-to-be-launched 'Shreerastu Shubhamastu' - Times of India". The Times of India. Retrieved 2022-06-29.