ಶ್ರೀಮುಷ್ಣಂ ಶ್ರೀನಿವಾಸ ಮೂರ್ತಿ
ಶ್ರೀಮುಷ್ಣಂ ಶ್ರೀನಿವಾಸ ಮೂರ್ತಿ(ಮೇ ೧೯, ೧೯೨೩-ನವೆಂಬರ್ ೨೪, ೨೦೦೯) ಒಬ್ಬ ಗಾಂಧಿವಾದಿ ಸ್ವಾತಂತ್ರ್ಯ ಹೂರಾಟಗಾರರು ಹಾಗೂ ಕನ್ನಡದ ಬರಹಗಾರರು. ಇವರು ೧೯ ಮೇ ೧೯೨೩ರಂದು ಶ್ರೀಮುಷ್ಣಂ ರಂಗಾಚಾರ್ಯ ಹಾಗು ಕಾವೆರಿ ಬಾಯಿ ದಂಪತಿಗಳಿಗೆ ಜನಿಸಿದರು. ಇವರು ಕನ್ನಡದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ, ಅವುಗಳಲ್ಲಿ ವೇದಾಂತ ಸಮನ್ವಯ ಎಂಬ ಕೃತಿಯೂ ಒಂದು. ಆಯ್ದ ಉಪನಿಷತ್ ವಾಕ್ಯಗಳ, ಸಂವಾದಿ ಬ್ರಹ್ಮಸೂತ್ರಗಳ, ಶ್ರೀಶಂಕರ, ಶ್ರೀರಾಮನುಜ ಮತ್ತು ಶ್ರೀಮಧ್ವರ ಭಾಷ್ಯಗಳ ಸಮನ್ವಯದ ಕುರಿತು ಈ ಕೃತಿಯನ್ನು ಶ್ರೀಮುಷ್ಣಂ ಶ್ರೀನಿವಾಸ ಮೂರ್ತಿಗಳು ರಚಿಸಿದ್ದಾರೆ. ಇವರು ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ನಲ್ಲಿ ಕಾರ್ಯ ನಿರ್ವಹಿಸಿದ್ದು, ಅಲ್ಲಿಯ ಹಿಂದುಸ್ಥಾನ್ ಏರ್ಕ್ರಾಫ಼್ಟ್ ನೌಕರರ ಸಂಘದ ಪ್ರಧಾನ ಕಾರ್ಯದರ್ಷಿಗಳಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಕೃತಿಗಳು
ಬದಲಾಯಿಸಿ- ದೇವರು(ಎ.ಎನ್.ಮೂರ್ತಿರಾವ್ರವರ ದೇವರು ಕೃತಿಗೆ ಪ್ರತ್ಯುತ್ತರವಾಗಿ ರಚಿಸಿರುವ ಕೃತಿ)
- ಗೀತಾ ಸಮನ್ವಯ(ಶ್ರೀಶಂಕರ, ಶ್ರೀರಾಮನುಜ ಮತ್ತು ಶ್ರೀಮಧ್ವರ ಗೀತಾ - ಭಾಷ್ಯಗಳ ಸಾರ ಸಂಗ್ರಹ)
- ವೇದಾಂತ ಸಮನ್ವಯ( ಆಯ್ದ ಉಪನಿಷತ್ ವಾಕ್ಯಗಳ, ಸಂವಾದಿ ಬ್ರಹ್ಮಸೂತ್ರಗಳ, ಶ್ರೀಶಂಕರ, ಶ್ರೀರಾಮನುಜ ಮತ್ತು ಶ್ರೀಮಧ್ವರ ಭಾಷ್ಯಗಳ ಸಮನ್ವಯ)