ಶ್ರೀಮತಿ ವಾಗೀಶ್ವರಿ ಶಾಸ್ತ್ರಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಶ್ರೀಮತಿ ವಾಗೀಶ್ವರಿ ಶಾಸ್ತ್ರಿಯವರು ೧೯೨೬ ಜನಿಸಿದರು. ತಂದೆ ವೆಂಕಟೇಶಯ್ಯ. ತಾಯಿ ಅನ್ನಪೂರ್ಣಮ್ಮ. ಹುಟ್ಟಿದೂರು ಸಕಲೇಶಪುರ. ಬಾಲ್ಯದಲ್ಲಿ ಅಜ್ಜಿ ಕೊಣನೂರು ಸುಬ್ಬಮ್ಮನವರಿಂದ ಭಾರತೀಯ ಸಂಪ್ರದಾಯದ ಬಗ್ಗೆ ಪರಿಚಯ ಹಾಗೂ ತರಬೇತಿ. ಹಾಡುಗಳು ವಾಗೀಶ್ವರಿಯವರನ್ನು ಅಪಾರವಾಗಿ ಆಕರ್ಷಿಸಿದವು. ಅಜ್ಜಿ ಸುಬ್ಬಮ್ಮ ಕೇವಲ ತಮ್ಮ ನೆನಪಿನ ಶಕ್ತಿಯಿಂದಲೇ ಅಸಂಖ್ಯ ಹಾಡುಗಳನ್ನು ಹಾಡುವುದನ್ನು ಕಲಿಸಿದರು.
ಈ ಹಾಡುಗಳನ್ನು ಅಭ್ಯಾಸ ಮಾಡಿದ ಶ್ರೀಮತಿ ವಾಗೀಶ್ವರಿ ಶಾಸ್ತ್ರಿಯವರು ೧೦೦೦ಕ್ಕೂ ಹೆಚ್ಛು ಹಾಡುಗಳನ್ನು ಸಂಪಾದಿಸಿ ಹೃದಯ ಸಂಪುಟ ಎನ್ನುವ ಸಂಪ್ರದಾಯ ಹಾಡುಗಳ ಪುಸ್ತಕವನ್ನೂ ಪ್ರಕಟಿಸಿದ್ದಾರೆ. ಈ ಸಂಪುಟ, ಒಂದು ಜೀವಮಾನ ಸಾಧನೆಯ ಕೆಲಸ.
ಹಾಡುಗಾರಿಕೆಯಲ್ಲಿಯೂ ಆಸ್ಕತಿ ಇರುವವರಿಗಾಗಿ ವಾಗೀಶ್ವರಿಯವರು ಧ್ವನಿಸುರುಳಿಗಳನ್ನು ಹೊರತಂದಿರುವರು. ಇದೂ ಸಹ ನಾವು ಮೆಚ್ಚಬಹುದಾದಂತಹ ಕೆಲಸ.
ಶ್ರೀಮತಿ ವಾಗೀಶ್ವರಿಯವರು ಉತ್ತಮ ಮಾತುಗಾರರು. ಒಳ್ಳೆಯ ಲೇಖಕರೂ ಹೌದು. ವಿದೇಶಗಳನ್ನು ಸುತ್ತಿ ತಮ್ಮ ಅನುಭವ ಕಥನಗಳನ್ನೂ ಬರೆದಿದ್ದಾರೆ.
ಪ್ರಶಸ್ತಿ ಮತ್ತು ಪುರಸ್ಕಾರಗಳು
ಬದಲಾಯಿಸಿ- ೧೯೮೫ ರ ‘ಕಾವ್ಯಾನಂದ ಪುರಸ್ಕಾರ’
- ೧೯೯೨ರ ಜಾನಪದ ಅಕಾಡೆಮಿ ಪ್ರಶಸ್ತಿ
- ೧೯೯೪ ರ ಶಾಶ್ವತಿ ಸಂಸ್ಥೆ ನೀಡುವ ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ
ಕೃತಿಗಳು
ಬದಲಾಯಿಸಿ- ಹೃದಯ ಸಂಪುಟ
- ಕರ್ನಾಟಕ ಹಬ್ಬಗಳು
- ಸುಲಭ ಸಾಂಪ್ರದಾಯಿಕ ವಿವಾಹ
- ಕೊಣನೂರು ಶ್ರೀಕಂಠಶಾಸ್ತ್ರಿ
- ಚಿತೆಯಿಂದ ಚಿಂತೆಗೆ
- ಸಿರಿ ಸಿಂಗಾರದ ಸಿಂಗಾಪುರ
- ಅಪೂರ್ವ ಕಥಾಸಂಗಮ