ಶ್ರೀನಾಥ್‍ಜಿ
ಶ್ರೀನಾಥ್‍ಜಿ ಏಳು ವರ್ಷದ ಬಾಲಕನಾಗಿ ಬಿಂಬಿತವಾದ ಹಿಂದೂ ದೇವತೆ ಕೃಷ್ಣನ ಒಂದು ಸ್ವರೂಪ. ಶ್ರೀನಾಥ್‍ಜಿಯ ಪ್ರಧಾನ ದೇವಾಲಯವು ರಾಜಸ್ಥಾನದ ಉದಯಪುರ ನಗರದ ೪೮ ಕಿ.ಮಿ ಈಶಾನ್ಯಕ್ಕೆ ದೇಗುಲ ಪಟ್ಟಣವಾದ ನಾಥದ್ವಾರದಲ್ಲಿ ಸ್ಥಿತವಾಗಿದೆ. ಶ್ರೀನಾಥ್‍ಜಿ ಶ್ರೀ ವಲ್ಲಭಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಪುಷ್ಟಿಮಾರ್ಗ ಅಥವಾ ಶುದ್ಧಾದ್ವೈತ ಎಂದು ಪರಿಚಿತವಾದ ವೈಷ್ಣವ ಉಪಪಂಥದ ಕೇಂದ್ರ ಪೀಠಾಸೀನ ದೇವತೆಯಾಗಿದ್ದಾನೆ.