ಶ್ರಾವಣಿ ಸುಬ್ರಮಣ್ಯ (ಧಾರವಾಹಿ)
ಶ್ರಾವಣಿ ಸುಬ್ರಮಣ್ಯ ಧಾರವಾಹಿಯು ಝೀ ಕನ್ನಡ ಖಾಸಗಿ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ದೈನಂದಿನ ಧಾರಾವಾಹಿಯಾಗಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರಗೊಳ್ಳುತ್ತಿದೆ. ಈ ಕಾರ್ಯಕ್ರಮವು ಮಾರ್ಚ್ 18, 2024 ರಿಂದ ಪ್ರಸಾರಗೊಳ್ಳುತ್ತಿದೆ. ಈ ಧಾರಾವಾಹಿಯಲ್ಲಿ ಶ್ರಾವಣಿಯಾಗಿ ಆಸಿಯಾ ಫಿರ್ದೋಸ್ ಮತ್ತು ಸುಬ್ರಮಣ್ಯನಾಗಿ ಅಮೋಘ್ ಆದಿತ್ಯ ಕಾಣಿಸಿಕೊಂಡಿದ್ದಾರೆ.
ಶ್ರಾವಣಿ ಸುಬ್ರಮಣ್ಯ (ಧಾರವಾಹಿ) | |
---|---|
ಶೈಲಿ | ಡ್ರಾಮಾ |
ನಿರ್ದೇಶಕರು | ರೇಣುಕಾ ಪ್ರಸಾದ್ |
ನಟರು | ಅಮೋಘ ಆದಿತ್ಯ, ಆಸಿಯಾ ಫಿರ್ದೋಸೆ, ಮೋಹನ್ ಶಂಕರ್, ಬಾಲರಾಜ್ |
ದೇಶ | ಭಾರತ |
ಭಾಷೆ(ಗಳು) | ಕನ್ನಡ |
ಪ್ರಸಾರಣೆ | |
ಮೂಲ ವಾಹಿನಿ | ಝೀ ಕನ್ನಡ |
Original airing | 2024-03-18 |
ಕಥಾ ಹಂದರ
ಬದಲಾಯಿಸಿಈ ಧಾರಾವಾಹಿಯ ಕಥೆಯು ಅಪ್ಪ ಮಗಳ ಸಂಬಂಧದ ಮೇಲೆ ಕೇಂದ್ರೀಕೃತವಾಗಿದ್ದು, ತನ್ನ ಕೆಡಕುಗಳಿಗೆಲ್ಲ ನನ್ನ ಮಗಳೇ ಕಾರಣ ಎಂದು ಯೋಚಿಸುವ ಅಪ್ಪ ಹಾಗು ಚಿಕ್ಕ ವಯಸ್ಸಿನಿಂದ ಅಪ್ಪನ ಪ್ರೀತಿಯನ್ನು ಪಡೆಯದೇ ಆತನ ಪ್ರೀತಿಗಾಗಿಯೇ ಕಾಯುತ್ತಿರುವ ಮಗಳು. ಅಪ್ಪ ಮಗಳ ಈ ಕಥೆಯಲ್ಲಿ ಹೀರೋ ಪಾತ್ರಧಾರಿ ಮನೆ ಕೆಲಸದವನಾಗಿ ಅಪ್ಪ ಮಗಳನ್ನು ಒಂದಾಗಿಸುವ ಪ್ರಯತ್ನ ಮಾಡುತ್ತಿರುತ್ತಾನೆ.
ಎಜುಕೇಶನ್ ಮಿನಿಸ್ಟರ್ ಆಗಿರುವ ವೀರೇಂದ್ರನಾಥ ದೇಸಾಯಿ ತನ್ನ ಅಕ್ಕ ವಿಜಯಾಳ ಮೋಸವನ್ನು ಅರಿಯದೇ, ತನ್ನ ಹೆಂಡತಿಯನ್ನು ದೂರಮಾಡಿರುತ್ತಾನೆ ಹಾಗು ಮಗಳು ಶ್ರಾವಣಿಯನ್ನು ಸಹ ಮಗಳು ಎಂದು ಒಪ್ಪಿಕೊಳ್ಳಲು ಹಿಂಜರಿಯುತ್ತಿರುತ್ತಾನೆ. ಅಪ್ಪ ಮಗಳನ್ನು ದೂರ ಮಾಡಿ ತನ್ನ ಮಗನಿಗೆ ಶ್ರಾವಣಿಯನ್ನು ಕೊಟ್ಟು ಮಾಡುವೆ ಮಾಡಿಸಿ ಸಂಪೂರ್ಣ ಆಸ್ತಿಯನ್ನು ಕಬಳಿಸಲು ಹೊಂಚುಹಾಕುತ್ತಿರುವ ಅಕ್ಕ ವಿಜಯಳ ಬಗ್ಗೆ ವೀರೇಂದ್ರನಾಥ ದೇಸಾಯಿಗೆ ಯಾವುದೇ ಸಂದೇಹ ಬಂದಿರುವುದಿಲ್ಲ ಮತ್ತು ಅಕ್ಕನನ್ನೇ ನಮ್ಮ ಮನೆಯ ಲಕ್ಷ್ಮಿ ಎಂದು ಭಾವಿಸಿರುತ್ತಾನೆ.
ಈ ದೊಡ್ಡ ಮನೆಯಲ್ಲಿ ಕೆಲಸಕ್ಕಿರುವ ಕಥೆಯ ಹೀರೋ ಸುಬ್ರಮಣ್ಯ ವೀರೇಂದ್ರನಾಥ ದೇಸಾಯಿಗೆ ಬಲಗೈ ಬಂಟನಾಗಿರುತ್ತಾನೆ ಹಾಗು ತನ್ನ ಪ್ರತೀ ಯಶಸ್ಸಿನ ಹಿಂದೆ ಸುಬ್ರಮಣ್ಯ ಇರುತ್ತಾನೆ ಎನ್ನುವ ಮಟ್ಟಿಗೆ ವೀರೇಂದ್ರನಾಥ ದೇಸಾಯಿ ಸುಬ್ರಮಣ್ಯನನ್ನು ನಂಬಿರುತ್ತಾನೆ. ಸುಬ್ರಮಣ್ಯ ಕೂಡ ವೀರೇಂದ್ರನಾಥ ದೇಸಾಯಿ ಮತ್ತು ಮಗಳು ಶ್ರಾವಣಿ ಒಂದಾಗಲು ಹಲವಾರು ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ. ಇದೆ ಮಧ್ಯೆ ಸುಬ್ಬುವಿನ ಒಳ್ಳೆತನ ನೋಡಿ ಶ್ರಾವಣಿಗೆ ಆತನ ಮೇಲೆ ಪ್ರೀತಿಯಾಗುತ್ತದೆ.
ಪಾತ್ರವರ್ಗ
ಬದಲಾಯಿಸಿ- ಆಸಿಯಾ ಫಿರ್ದೋಸ್: ಶ್ರಾವಣಿಯಾಗಿ, ನಾಯಕಿಯಾಗಿ, ವೀರೇಂದ್ರನಾಥ ದೇಸಾಯಿಯ ಮಗಳಾಗಿ.
- ಅಮೋಘ್ ಆದಿತ್ಯ: ಸುಬ್ರಮಣ್ಯನಾಗಿ, ನಾಯಕನಾಗಿ.
- [ಶಂಕರ್]: ವೀರೇಂದ್ರನಾಥ ದೇಸಾಯಿಯಾಗಿ, ಶ್ರಾವಣಿಯ ಅಪ್ಪನಾಗಿ.
- ಸ್ನೇಹ ಈಶ್ವರ್ ನಂಬಿಯಾರ್: ವಿಜಯ ಪಾತ್ರಧಾರಿಯಾಗಿ, ಶ್ರಾವಣಿಯ ದೊಡ್ಡಮ್ಮನಾಗಿ, ಮುಖ್ಯ ಖಳನಾಯಕಿಯಾಗಿ.
- ಚೈತ್ರಾ ರಾವ್: ಮೋಕ್ಷ ಪಾತ್ರಧಾರಿಯಾಗಿ, ವಿಜಯಳ ಮಗಳಾಗಿ.
- ಅಪೂರ್ವ ಶ್ರೀ: ಸುಬ್ರಮಣ್ಯನ ಅಮ್ಮನಾಗಿ.
- ಬಾಲರಾಜ್: ಸುಬ್ರಮಣ್ಯನ ತಂದೆಯಾಗಿ.
ಉಲ್ಲೇಖಗಳು
ಬದಲಾಯಿಸಿಬಾಹ್ಯ ಕೊಂಡಿಗಳು
ಬದಲಾಯಿಸಿ- ಝೀ5ನಲ್ಲಿ ಶ್ರಾವಣಿ ಸುಬ್ರಮಣ್ಯ.