ಅಮೋಘ್ ಆದಿತ್ಯ (ಜನನ 24 ಏಪ್ರಿಲ್ 1997) ಒಬ್ಬ ಭಾರತೀಯ ಧಾರಾವಾಹಿ ನಟ ಹಾಗೂ ಸಹಾಯಕ ಚಲನಚಿತ್ರ ನಿರ್ದೇಶಕ, ಇವರು ಮುಖ್ಯವಾಗಿ ಕನ್ನಡ ಭಾಷೆಯ ಧಾರವಾಹಿ ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ.

ಅಮೋಘ್ ಆದಿತ್ಯ
Amogh Aaditya is an actor in Kannada language.
ಜನನ24 ಏಪ್ರಿಲ್ 1997
ಕುಂದಾಪುರ, ಉಡುಪಿ ಜಿಲ್ಲೆ, ಕರ್ನಾಟಕ
Statusಅವಿವಾಹಿತ
ರಾಷ್ಟ್ರೀಯತೆಭಾರತೀಯ
ಪೋಷಕs
  • ಶಶಿಧರ್ (father)
  • ಶಾಲಿನಿ (mother)
Familyರಕ್ಷಾ (ಸಹೋದರಿ)

ತಮ್ಮ ಆರಂಭದ ದಿನಗಳನ್ನು ರಂಗಭೂಮಿಯಿಂದ ಪ್ರಾರಂಭಿಸಿದ ಅಮೋಘ್ ಆದಿತ್ಯ ಅವರು ದೃಶ್ಯ ಹಾಗೂ ಸರ್ವಂ ಎಂಬ ಎರಡು ನಾಟಕ ತಂಡಗಳಲ್ಲಿ ಕೆಲಸ ಮಾಡಿದ್ದಾರೆ. 2020 ರಲ್ಲಿ ಯೂಟ್ಯೂಬ್ ನಲ್ಲಿ ಬಿಡುಗಡೆಯಾದ "ಸ್ವರ" ಸೇರಿದಂತೆ ಹಲವು ಕಿರುಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ ಮತ್ತು ಪಾತ್ರಧಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. 2021 ರಲ್ಲಿ ತೆರೆಗೆ ಬಂದ ಕನ್ನಡ ಚಿತ್ರ ರಾಮಾರ್ಜುನ ದಲ್ಲಿ ಸಹಾಯಕ ನಿರ್ದೇಶಕರಾಗಿ ಅಮೋಘ್ ಆದಿತ್ಯ ಕೆಲಸ ಮಾಡಿದ್ದಾರೆ. 2022 ರಲ್ಲಿ ಬಿಡೆಗಡೆಯಾದ ಕನ್ನಡ ಆಲ್ಬಮ್ ಸಾಂಗ್ "ಇದು ನಿಜವೇ" ದಲ್ಲಿ ಇವರು ನಾಯಕಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶಾಂತಂ ಪಾಪಂ, ಹೂ ಮಳೆ, ದೊರೆಸಾನಿ, ಗೀತಾ, ಅಂತರಪಟ ಹಾಗು ಝೀ ಕನ್ನಡ ವಾಹಿನಿಯಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿಗಳಲ್ಲಿ ಪಾತ್ರ ಕಲಾವಿಧನಾಗಿ ಅಮೋಘ್ ಆದಿತ್ಯ ಕೆಲಸ ಮಾಡಿದ್ದಾರೆ. 2024 ಮಾರ್ಚ್ 18 ರಿಂದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಅಮೋಘ್ ಆದಿತ್ಯ (ಪಾತ್ರದ ಹೆಸರು ಸುಬ್ರಮಣ್ಯ) ನಾಯಕನಾಗಿ ಕಾಣಿಸಿಕೊಂಡಿದ್ದಾರೆ ಹಾಗು ಈ ಮೂಲಕ ಮೊದಲ ಬಾರಿಗೆ ಧಾರಾವಾಹಿಯೊಂದಕ್ಕೆ ಪೂರ್ಣ ಪ್ರಮಾಣದ ನಾಯಕನಟನಾಗಿ ಕೆಲಸ ಮಾಡುತ್ತಿದ್ದಾರೆ to contact him just visit zee kannada

.

ಆರಂಭಿಕ ಜೀವನ

ಬದಲಾಯಿಸಿ

ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಶಶಿಧರ್ ಮತ್ತು ಶಾಲಿನಿ ದಂಪತಿಗಳಿಗೆ ಅಮೋಘ್ ಆದಿತ್ಯ ಜನಿಸಿದರು. ಬೆಂಗಳೂರಿನ ನ್ಯಾಷನಲ್ ಹೈ ಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ, ವಿಜಯ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮತ್ತು ವಾಣಿಜ್ಯ ಬ್ಯಾಚುಲರ್ (B.Com) ಪದವಿಯನ್ನು ಪಡೆದುಕೊಂಡಿದ್ದಾರೆ.

ಬಾಹ್ಯ ಕೊಂಡಿಗಳು

ಬದಲಾಯಿಸಿ

1. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಹೀರೊ ಸುಬ್ಬು ಬಗ್ಗೆ ನಿಮಗೆಷ್ಟು ಗೊತ್ತು?