ಶ್ರದ್ಧೆ ಒಂದು ಸಂಸ್ಕೃತ ಪದ. ಇದನ್ನು ಆಂಗ್ಲದಲ್ಲಿ ಸಾಮಾನ್ಯವಾಗಿ "ಫ಼ೇತ್" ಎಂದು ಭಾಷಾಂತರಿಸಲಾಗುತ್ತದೆ. ಇದು ಹಿಂದೂ, ಜೈನ ಮತ್ತು ಬೌದ್ಧ ಸಾಹಿತ್ಯ ಹಾಗೂ ಬೋಧನೆಗಳಲ್ಲಿ ಮುಖ್ಯವಾಗಿದೆ.

ಇದನ್ನು ನಂಬಿಕೆ, ವಿಶ್ವಾಸ, ಮತ್ತು ನಿಷ್ಠೆಯೊಂದಿಗೆ ಸಂಬಂಧಿಸಬಹುದು. ಮಾತಾ ಅಮೃತಾನಂದಮಯಿ ಇದನ್ನು "ಪ್ರೀತಿಯಿಂದ ಹುಟ್ಟುವ ನಿರಂತರವಾದ ಜಾಗರೂಕತೆ" ಎಂದು ವಿವರಿಸುತ್ತಾರೆ ಮತ್ತು ಆಂಗ್ಲದಲ್ಲಿ ಭಾಷಾಂತರಿಸಲು ಒಂದೇ ಶಬ್ದವನ್ನು ಆಯ್ಕೆಮಾಡುವಾಗ, "ಅವೇರ್‌ನೆಸ್" ಶಬ್ದವನ್ನು ಬಳಸಿದ್ದಾರೆ.[] ಇತರ ಬರಹಗಾರರು ಕೂಡ ಈ ಪರಿಕಲ್ಪನೆಯನ್ನು ನಂಬಿಕೆ ಮತ್ತು ಸಾವಧಾನತೆಯ ಛೇದನದ ಮೇಲೆ ಒತ್ತಿನೊಂದಿಗೆ ವಿವರಿಸಿದ್ದಾರೆ, ಮತ್ತು ಈ ಧಾಟಿಯಲ್ಲಿ ಇದನ್ನು "ದೃಢಪ್ರಯತ್ನ" (ಡಿಲಿಜೆನ್ಸ್) ಎಂಬಂತಹ ಪದಗಳಿಂದ ಭಾಷಾಂತರಿಸಲಾಗಿದೆ.[]

ಅರವಿಂದ ಘೋಷ್‍ರು ಶ್ರದ್ಧೆಯನ್ನು "ದೈವಿಕ ಅಸ್ತಿತ್ವ, ಬುದ್ಧಿವಂತಿಕೆ, ಶಕ್ತಿ, ಪ್ರೀತಿ ಮತ್ತು ಅನುಗ್ರಹದಲ್ಲಿ ಆತ್ಮದ ನಂಬಿಕೆ" ಎಂದು ವಿವರಿಸಿದ್ದಾರೆ.[]

ಭಾರತದಲ್ಲಿ ಶ್ರದ್ಧಾ ಒಂದು ಸ್ತ್ರೀ ಹೆಸರೂ ಆಗಿದೆ.

ಉಲ್ಲೇಖಗಳು

ಬದಲಾಯಿಸಿ
  1. "Gospel of AMMA: [AWAKENCHILDREN] AWAKEN CHILDREN ( 112 ) - SRADDHA - ALERTNESS". Amma-words.blogspot.com. 2005-05-03. Archived from the original on 2011-08-11. Retrieved 2014-04-04.
  2. "Sraddha — Diligence Cookbook". www.vikramsurya.net. Archived from the original on 2014-02-03. Retrieved 2014-04-04.
  3. "Search for Light; Sri Aurobindo on faith". www.searchforlight.org. Retrieved 2014-08-14.


"https://kn.wikipedia.org/w/index.php?title=ಶ್ರದ್ಧೆ&oldid=1209166" ಇಂದ ಪಡೆಯಲ್ಪಟ್ಟಿದೆ