ಶೈಲಿ ಸಿಂಗ್ (ಜನನ ೭ ಜನವರಿ ೨೦೦೪ ) ಉದ್ದ ಜಿಗಿತ ಸ್ಪರ್ಧೆಗಳಲ್ಲಿ ಸ್ಪರ್ಧಿಸುವ ಭಾರತೀಯ ಕ್ರೀಡಾಪಟು. ಅವರು ವಯೋಮಿತಿಯ ವಿಭಾಗಗಳಲ್ಲಿ, ಭಾರತೀಯ ಜೂನಿಯರ್ ರಾಷ್ಟ್ರೀಯ ಲಾಂಗ್ ಜಂಪ್ ಚಾಂಪಿಯನ್ ಆಗಿದ್ದಾರೆ. ಇವರು ಅಂಡರ್-೧೮ ವಿಭಾಗದಲ್ಲಿ ವಿಶ್ವದ ಅಗ್ರ ೨೦ ಉದ್ದ ಜಿಗಿತಗಾರರಲ್ಲಿ ಸ್ಥಾನ ಪಡೆದಿದ್ದಾರೆ. [] [] ಅವರು ೧೮ ವರ್ಷದೊಳಗಿನವರ ವಿಭಾಗದಲ್ಲಿ ಉದ್ದ ಜಿಗಿತದಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. ಅವರು ಭಾರತದ ಅನುಭವಿ ಉದ್ದ ಜಿಗಿತಗಾರ್ತಿ ಅಂಜು ಬಾಬಿ ಜಾರ್ಜ್ ಮತ್ತು ಅವರ ಪತಿ ರಾಬರ್ಟ್ ಬಾಬಿ ಜಾರ್ಜ್ ಅವರಿಂದ ತರಬೇತಿ ಪಡೆದಿದ್ದಾರೆ. []

ಶೈಲಿ ಸಿಂಗ್
ವೈಯುಕ್ತಿಕ ಮಾಹಿತಿ
ಜನನ (2004-01-07) ೭ ಜನವರಿ ೨೦೦೪ (ವಯಸ್ಸು ೨೦)
ಝಾನ್ಸಿ, ಉತ್ತರ ಪ್ರದೇಶ,ಭಾರತ
Sport
ದೇಶಭಾರತ
ಕ್ರೀಡೆಉದ್ದ ಜಿಗಿತ
Achievements and titles
ವೈಯಕ್ತಿಕ ಪರಮಶ್ರೇಷ್ಠ೬.೭೬ ಮೀ ೨೦೨೩)

ವೈಯಕ್ತಿಕ ಜೀವನ ಮತ್ತು ಹಿನ್ನೆಲೆ

ಬದಲಾಯಿಸಿ

ಸಿಂಗ್ ಅವರು ಉತ್ತರ ಪ್ರದೇಶದ ಝಾನ್ಸಿಯಲ್ಲಿ ೭ ಜನವರಿ ೨೦೦೪ ರಂದು ಜನಿಸಿದರು. ಅವರನ್ನು ತಾಯಿ ವಿನಿತಾ ಸಿಂಗ್ ಬೆಳೆಸಿದರು, ಅವರು ಮೂರು ಮಕ್ಕಳಿಗೆ ಒಂಟಿ ಪೋಷಕಿಯಾಗಿದ್ದಾರೆ. ವಿನಿತಾ ಸಿಂಗ್ ವೃತ್ತಿಯಲ್ಲಿ ಸಣ್ಣ ಸಮಯದ (ಪಾರ್ಟ್ ಟೈಮ್) ಉದ್ಯಮಿ. [] []

ಸಿಂಗ್ ಅವರು ಅಂಜು ಬಾಬಿ ಜಾರ್ಜ್ ಸ್ಪೋರ್ಟ್ಸ್ ಫೌಂಡೇಶನ್‌ನಲ್ಲಿ ತರಬೇತಿ ಪಡೆಯಲು ೧೪ ನೇ ವಯಸ್ಸಿನಲ್ಲಿ ಬೆಂಗಳೂರಿಗೆ ತೆರಳಿದರು. [] ಜಾರ್ಜ್ ದಂಪತಿಗಳ ಮೇಲ್ವಿಚಾರಣೆಯಲ್ಲಿ ಸಿಂಗ್ ತರಬೇತಿಯನ್ನು ಪ್ರಾರಂಭಿಸಿದರು. [] []

ವೃತ್ತಿಪರ ಸಾಧನೆಗಳು

ಬದಲಾಯಿಸಿ

ಸಿಂಗ್ ಅವರು ೨೦೧೮ ರಲ್ಲಿ ರಾಂಚಿಯಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಯು-೧೬ ವಿಭಾಗದಲ್ಲಿ ಉದ್ದ ಜಿಗಿತದಲ್ಲಿ ಚಿನ್ನದ ಪದಕವನ್ನು ಗೆದ್ದರು, ಅಲ್ಲಿ ಅವರು ೫.೯೪-ಮೀಟರ್ ಜಿಗಿತವನ್ನು ದಾಖಲಿಸಿಸುವ ಮೂಲಕ ಜೂನಿಯರ್ ಉದ್ದ ಜಿಗಿತದ ರಾಷ್ಟ್ರೀಯ ದಾಖಲೆಯನ್ನು ಮುರಿದರು. ೨೦೧೯ ರಲ್ಲಿ, ಅವರು ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆಲ್ಲಲು ೬.೧೫ ಮೀಟರ್‌ಗಳಷ್ಟು ಜಿಗಿಯುವ ಮೂಲಕ ಅಂಡರ್-೧೮ ರಲ್ಲಿ ತಮ್ಮದೇ ಆದ ದಾಖಲೆಯನ್ನು ಉತ್ತಮಪಡಿಸಿದರು. ಇದು ೨೦೨೦ ರಲ್ಲಿ ಐ‌ಎ‌ಎ‌ಎಫ್ ಅಂಡರ್-೨೦ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅರ್ಹತಾ ಮಾರ್ಕ್‌ಗಿಂತ ಮುಂದಿತ್ತು. [] ಭಾರತದ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಸಿಂಗ್ ಅವರ ಯಶಸ್ಸಿಗೆ ಅಭಿನಂದನೆ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. [] [] ಜೂನ್ ೨೦೨೧ ರಲ್ಲಿ, ಪಟಿಯಾಲಾದಲ್ಲಿ ನಡೆದ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗಳಲ್ಲಿ (ರಾಷ್ಟ್ರೀಯ ಅಂತರ-ರಾಜ್ಯ) ಶೈಲಿ ೬.೪೮ ಮೀ ಜಿಗಿದ, ಹೊಸ ಯು೨೦ ದಾಖಲೆ ಸೃಷ್ಟಿಸಿದರು. ಶೈಲಿ ಸಿಂಗ್ ೨೦೨೧ ರ ವಿಶ್ವ ಅಥ್ಲೆಟಿಕ್ ಯು೨೦ ಚಾಂಪಿಯನ್‌ಶಿಪ್‌ನಲ್ಲಿ ಉದ್ದ ಜಿಗಿತದಲ್ಲಿ ೬.೫೯ ಮೀ ಜಿಗಿತವನ್ನು ದಾಖಲಿಸಿ ಬೆಳ್ಳಿ ಪದಕವನ್ನು ಪಡೆದರು. []

ಅಂತರರಾಷ್ಟ್ರೀಯ ಸ್ಪರ್ಧೆಗಳು

ಬದಲಾಯಿಸಿ
ವರ್ಷ ಪಂದ್ಯ ಸ್ಥಳ ಸ್ಥಾನ ಫಲಿತಾಂಶ ಶರಾ
Representing   ಭಾರತ
೨೦೨೧ ವಿಶ್ವ ಯು೨೦ ಚಾಂಪಿಯನ್‌ಶಿಪ್ ನೈರೋಬಿ, ಕೀನ್ಯಾ ದ್ವಿತೀಯ ಉದ್ದ ಜಿಗಿತ ೬.೫೯ ಮೀ
೨೦೨೩ ಏಷ್ಯನ್ ಚಾಂಪಿಯನ್‌ಶಿಪ್ ಬ್ಯಾಂಕಾಕ್, ಥೈಲ್ಯಾಂಡ್ ದ್ವಿತೀಯ ಉದ್ದ ಜಿಗಿತ ೬.೫೪ ಮೀ
ಏಷ್ಯನ್ ಚಾಂಪಿಯನ್‌ಶಿಪ್

ಹ್ಯಾಂಗ್ಝೌ, ಚೀನಾ

೫ ನೇ ಉದ್ದ ಜಿಗಿತ ೬.೪೮ ಮೀ

ಪದಕಗಳು

ಬದಲಾಯಿಸಿ
  • ಚಿನ್ನದ ಪದಕ - ೧೬ ವಯೋಮಿತಿಯ ಉದ್ದ ಜಿಗಿತದಲ್ಲಿ ರಾಷ್ರೀಯ ಜುನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ರಾಂಚಿ, ೨೦೧೮
  • ಚಿನ್ನದ ಪದಕ - ೧೮ ವಯೋಮಿತಿಯ ರಾಷ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ೨೦೧೯ ಗುಂಟುರ್ ,ಆ೦ಧ್ರಪ್ರದೇಶ
  • ಬೆಳ್ಳಿ ಪದಕ - ೨೦ ವಯೋಮಿತಿಯ ವಲ್ಡ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ನೈರೋಬಿ, ೨೦೨೧
  • ಬೆಳ್ಳಿ ಪದಕ - ಓಪನ್ ಕೆಟಗರಿ ರಾಷ್ಟ್ರೀಯ ಗೇಮ್ ೨೦೨೨, ಗುಜರಾತ್
  • ಚಿನ್ನದ ಪದಕ - ಉದ್ದ ಜಿಗಿತ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಬೆಂಗಳೂರು ಅಕ್ಟೋಬರ್ ೨೦೨೨

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "Long Jumper Shaili Broke Two National Records. Is She The Next Big Thing In Indian Athletics?". IndiaTimes (in Indian English). 2019-11-05. Retrieved 2021-02-17.
  2. ೨.೦ ೨.೧ ೨.೨ ೨.೩ "शैली सिंह: भारतीय एथलीटों की दुनिया का चमकता सितारा". BBC News हिंदी (in ಹಿಂದಿ). Retrieved 2021-02-17.
  3. "Coach tips Olympics future for teen prodigy Shaili Singh". The New Indian Express. Retrieved 2021-02-17.
  4. "Jr National Athletics: Long Jumper Shaili Singh Breaks National Record - SheThePeople TV" (in ಅಮೆರಿಕನ್ ಇಂಗ್ಲಿಷ್). Retrieved 2021-02-17.
  5. Rayan, Stan (2019-01-25). "Shaili Singh: Made for the long jump". The Hindu (in Indian English). ISSN 0971-751X. Retrieved 2021-02-17.
  6. "Long-jumping and breaking records: Shaili Singh, remember the name". The Indian Express (in ಇಂಗ್ಲಿಷ್). 2019-11-07. Retrieved 2021-02-17.
  7. ANI (2019-11-05). "Rijiju lauds Shaili Singh for scripting national record". Business Standard India. Retrieved 2021-02-17.
  8. "Shaili Singh wins silver at World U-20 Athletics Championships". The Bridge (in ಇಂಗ್ಲಿಷ್). 2021-08-22. Retrieved 2021-10-01.



ಬಾಹ್ಯ ಕೊಂಡಿ

ಬದಲಾಯಿಸಿ

ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಶೈಲಿ ಸಿಂಗ್