ಶೇರ್ ಶಾ ಸೂರಿಯ ಗೋರಿ

ಶೇರ್ ಶಾ ಸೂರಿಯ ಗೋರಿ ಭಾರತದ ಬಿಹಾರ ರಾಜ್ಯದ ಸಾಸಾರಮ್ ಪಟ್ಟಣದಲ್ಲಿದೆ. ಈ ಗೋರಿಯನ್ನು ಮೊಘಲ್ ಸಾಮ್ರಾಜ್ಯವನ್ನು ಸೋಲಿಸಿದ ಮತ್ತು ಉತ್ತರ ಭಾರತದಲ್ಲಿ ಸೂರಿ ಸಾಮ್ರಾಜ್ಯವನ್ನು ಸ್ಥಾಪಿಸಿದ ಬಿಹಾರ್‌ನ ಪಠಾಣನಾದ ಸಾಮ್ರಾಟ್ ಶೇರ್ ಷಾ‍ನ ನೆನಪಿನಲ್ಲಿ ನಿರ್ಮಿಸಲಾಯಿತು. ಇವನು ಒಂದು ಆಕಸ್ಮಿಕ ಕೋವಿಮದ್ದಿನ ಸ್ಫೋಟದಲ್ಲಿ ೧೩ ಮೇ ೧೫೪೫ರಂದು ಮೃತನಾದನು.[][]

ಶೇರ್ ಶಾ ಗೋರಿ, ಸಾಸಾರಾಂ
ಮಾಹಿತಿ ಫಲಕ
ಹಳೆಯ ಫಲಕ

ಇವನ ಗೋರಿಯು ಇಂಡೋ-ಇಸ್ಲಾಮಿಕ್ ವಾಸ್ತುಕಲೆಯ ಒಂದು ಉದಾಹರಣೆಯಾಗಿದೆ. ಇದನ್ನು ವಾಸ್ತುಶಿಲ್ಪಿ ಮೀರ್ ಮುಹಮ್ಮದ್ ಅಲಿವಾಲ್ ಖಾನ್ ವಿನ್ಯಾಸಗೊಳಿಸಿದರು ಮತ್ತು ಇದನ್ನು 1540 ಹಾಗೂ 1545 ರ ನಡುವೆ ನಿರ್ಮಿಸಲಾಯಿತು.[] ಈ ಕೆಂಪು ಮರಳುಗಲ್ಲಿನ ಗೋರಿಯು (122 ಅಡಿ ಎತ್ತರ) ಕೃತಕ ಸರೋವರದ ಮಧ್ಯದಲ್ಲಿ ನಿಂತಿದೆ. ಇದು ಸರಿಸುಮಾರು ಚೌಕಾಕಾರವಾಗಿದ್ದು ಭಾರತದ ಎರಡನೇ ತಾಜ್ ಮಹಲ್ ಎಂದು ಪರಿಚಿತವಾಗಿದೆ. ಗೋರಿಯು ಸರೋವರದ ಮಧ್ಯಭಾಗದಲ್ಲಿ ಗುಮ್ಮಟವುಳ್ಳ ಮಂಟಪಗಳಿರುವ ಚೌಕಾಕಾರದ ಕಲ್ಲಿನ ಪಾಯದ ಮೇಲೆ ನಿಂತಿದೆ.

ಉಲ್ಲೇಖಗಳು

ಬದಲಾಯಿಸಿ
  1. Shershah Suri's Tomb, Sasaram - Ticketed Monument Archaeological Survey of India
  2. Kissling, H. J.; Barbour, N; Spuler, Bertold; Trimingham, J. S.; Bagley, F. R. C.; Braun, H.; Hartel, H. (1997). The Last Great Muslim Empires. BRILL. pp. 262–263. ISBN 90-04-02104-3. Retrieved 2011-07-20.
  3. Narayan Sanyal (2016). Abiswaraniya (Bengali). Kolkata: Dey's Publishing. p. 278. ISBN 978-81-295-2648-9.

ಹೊರಗಿನ ಕೊಂಡಿಗಳು

ಬದಲಾಯಿಸಿ