ಶೃಂಗೇರಿ ಉಪಚಾರ (ಪುಸ್ತಕ)
ಶೃಂಗೇರಿ ಉಪಚಾರ ಜಿ.ವಿ ಗಣೇಶಯ್ಯ ಅವರು ಬರೆದ ಹಾಸ್ಯಮಯ ಲೇಖನ ಪುಸ್ತಕ.
ಲೇಖಕರು | ಜಿ.ವಿ ಗಣೇಶಯ್ಯ |
---|---|
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ಹಾಸ್ಯಮಯ ಲೇಖನಗಳು |
ಪ್ರಕಾಶಕರು | ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ |
ಪ್ರಕಟವಾದ ದಿನಾಂಕ | ೨೦೧೪, ೧ನೇ ಮುದ್ರಣ |
ಪುಟಗಳು | ೧೫೬ |
ಐಎಸ್‍ಬಿಎನ್ | 978-81-8467-415-6 |
'ನಗುನಗುತಾ ನಲೀ ನಲೀ - ಇದು ಜನಪ್ರಿಯ ಸಿನಿಮಾ ಹಾಡು. ನಗು ಆರೋಗ್ಯಕ್ಕೆ ಪೂರಕವಂತೆ - ಅತಿಯಾದರೆ ಮಾರಕವಂತೆ. ನಗೆಗಳಲ್ಲಿ ಬಗೆ ಬಗೆ. ಮಗುವಿನ ತಿಳಿನಗೆ ಆಪ್ಯಾಯಮಾನ. ವ್ಯಂಗ್ಯ-ತಿರಸ್ಕಾರ-ಅಟ್ಟಹಾಸದ ನಗೆ ಬೇಡವೇ ಬೇಡ. ಇನ್ನು ಕಾರನವೇ ಇಲ್ಲದೆ ನಗುವವರನ್ನು ಜನ ಬೇರೆಯೇ ರೀತಿ ನೋಡುತ್ತಾರೆ! ಇನ್ನು ಕೆಲವರಂತೂ ತುಟಿ ಬಿಗಿದುಕೊಂಡೇ ಭೂಮಿಗಿಳಿದಿರುತ್ತಾರೆ. ಎಂಥ ಘನ ಗಂಭೀರ ವಾತಾವರಣವಿರಲಿ, ಅಲ್ಲೊಂದು ನಗೆ ಬಾಂಬು ಬಿದ್ದರೆ ಯಾವ ಅನಾಹುತವೂ ಆಗದೆ, ಆಗಿರುವ ಘೋರ ಅನಾಹುತ ತಿಳಿಯಾಗುತ್ತದೆ. ಹೌದು, ಹಾಸ್ಯ ಅಪಹಾಸ್ಯ ಆಗಬಾರದು; ದ್ರೌಪದಿಯ ನಗೆಯಂತೆ ಕುರುಕ್ಷೇತ್ರವಾಗಬಾರದು. ನಗುವಿಗೂ-ನಗೆಪಾಟಲಿಗೂ ಅಜಗಜಾಂತರ ಇರಲಿ. ಇಲ್ಲವಾದರೆ ಕಾದಿದೆ ಗಂಡಾಂತರ! ಇದನ್ನೆಲ್ಲ ಚೆನ್ನಾಗಿ ತಿಳಿದುಕೊಂಡೇ ನಿಮ್ಮನ್ನು ನಗಿಸಲು ಪಣತೊಟ್ಟು ಗಣೇಶಯ್ಯ ಸಕಲ ಸಿದ್ಧತೆಯೊಂದಿಗೆ - ನಗೆಟಾನಿಕ್ಕಿನಲ್ಲಿ ನೈಟ್ರಸ್ ಆಕ್ಸೈಡ್ ಬೆರೆಸಿ, ಲೇಖನಗಳನ್ನಾಗಿಸಿ ಸನ್ನದ್ಧರಾಗಿದ್ದಾರೆ! ಇವನ್ನು ಓದಿ. ಖಂಡಿತ ನಗಬೇಡಿ. ಜೋಕೆ! ನಕ್ಕಿಲ್ಲವಾದರೆ ‘ನಗದು’ ಪ್ರಶಸ್ತಿ ನಿಮ್ಮದಾಗುತ್ತದೆ.
ಬಾಹ್ಯ ಸಂಪರ್ಕ
ಬದಲಾಯಿಸಿ- ಜಿ.ವಿ ಗಣೇಶಯ್ಯ ಅವರ ಪುಸ್ತಕಗಳು Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
- ಜಿ.ವಿ ಗಣೇಶಯ್ಯಅಂತರಜಾಲ ಕನ್ನಡ ಜ್ಞಾನಕೋಶ Archived 2014-05-01 ವೇಬ್ಯಾಕ್ ಮೆಷಿನ್ ನಲ್ಲಿ.
- ಜಿ.ವಿ ಗಣೇಶಯ್ಯ ಅವರ ಲೇಖನ ಪ್ರಜಾವಾಣಿಯಲ್ಲಿ