ಶಿಷ್ಟವರ್ತನೆ ಎಂದರೆ ಒಂದು ಸಮಾಜ, ಸಾಮಾಜಿಕ ವರ್ಗ, ಅಥವಾ ಗುಂಪಿನಲ್ಲಿನ ಸಮಕಾಲೀನ ಸಾಂಪ್ರದಾಯಿಕ ರೂಢಿಗಳ ಪ್ರಕಾರ ಸಾಮಾಜಿಕ ವರ್ತನೆಯ ನಿರೀಕ್ಷೆಗಳನ್ನು ವರ್ಣಿಸುವ ವರ್ತನೆಯ ನಿಯಮಾವಳಿ.

ಒಬ್ಬರ ವರ್ತನೆಯು ಸಾಮಾಜಿಕವಾಗಿ ಸ್ವೀಕಾರಾರ್ಹವೇ ಎಂಬುದನ್ನು ಸೂಚಿಸಲು ನಡವಳಿಕೆಗಳನ್ನು ಒಳ್ಳೆಯದು ಅಥವಾ ಕೆಟ್ಟದು ಎಂದು ವಿವರಿಸಲಾಗುತ್ತದೆ. ಪ್ರತಿ ಸಂಸ್ಕೃತಿಯು ನಡವಳಿಕೆಗಳ ಭಿನ್ನ ಸಮೂಹಕ್ಕೆ ಬದ್ಧವಾಗಿರುತ್ತದೆ, ಆದರೆ ಅನೇಕ ನಡವಳಿಕೆಗಳು ಸಂಸ್ಕೃತಿಗಳಾದ್ಯಂತ ಸಮಾನವಾಗಿರುತ್ತವೆ. ನಡವಳಿಕೆಗಳು ಸ್ವ-ನಿಯಂತ್ರಣ ಹಾಗೂ ಸಾಮಾಜಿಕ ಹತೋಟಿ ಮೂಲಕ ಅನೌಪಚಾರಿಕವಾಗಿ ಒತ್ತಾಯದಿಂದ ಹೊರಿಸಲಾದ ಮತ್ತು ಸಾರ್ವಜನಿಕವಾಗಿ ಪ್ರದರ್ಶಿಸಲಾದ ಸಾಮಾಜಿಕ ರೂಡಿಗಳ ಉಪಸಮೂಹವಾಗಿವೆ. ಆತ್ಮಸಂಯಮವನ್ನು ವಿಧಿಸುವ ಮೂಲಕ ಇವು ಮಾನವ ಅತಿಸಾಮಾಜಿಕತೆಯನ್ನು ಸಾಧ್ಯವಾಗಿಸುತ್ತವೆ ಮತ್ತು ನಿಯತ, ದೈನಂದಿನ ಕ್ರಿಯೆಗಳನ್ನು ಹೊಂದಿಕೆ ಮಾಡಿಕೊಳ್ಳುತ್ತವೆ.[]

ಕರ್ಟಿಸ್ ನಿರ್ದಿಷ್ಟವಾಗಿ ಮೂರು ನಡವಳಿಕೆ ವರ್ಗಗಳನ್ನು ವಿವರಿಸುತ್ತಾರೆ; ನೈರ್ಮಲ್ಯ, ಸೌಜನ್ಯ ಮತ್ತು ಸಾಂಸ್ಕೃತಿಕ ರೂಡಿಗಳು, ಇವು ಪ್ರತಿಯೊಂದು ಸಮಾಜದಲ್ಲಿ ನಡವಳಿಕೆಗಳು ನಿರ್ವಹಿಸುವ ಬಹುಮುಖಿ ಪಾತ್ರವನ್ನು ವಿವರಿಸಲು ನೆರವಾಗುತ್ತವೆ. ಈ ವರ್ಗಗಳು ನಡವಳಿಕೆ ವರ್ತನೆಯ ಪ್ರೇರಣೆಯ ಬದಲಾಗಿ ಫಲಿತಾಂಶದ ಮೇಲೆ ಅವಲಂಬಿತವಾಗಿರುತ್ತವೆ ಮತ್ತು ಪ್ರತ್ಯೇಕ ನಡವಳಿಕೆ ವರ್ತನೆಗಳು ೨ ಅಥವಾ ಹೆಚ್ಚು ವರ್ಗಗಳಲ್ಲಿ ಹೊಂದಿಕೆಯಾಗುತ್ತವೆ.

ನೈರ್ಮಲ್ಯ ನಡವಳಿಕೆಗಳು – ರೋಗ ಪ್ರಸಾರಣೆ ಮೇಲೆ ಪ್ರಭಾವ ಬೀರುವ ನಡವಳಿಕೆಗಳು. ಇವನ್ನು ಸಣ್ಣ ವಯಸ್ಸಿನಲ್ಲಿ, ಮುಖ್ಯವಾಗಿ ಪೋಷಕರ ಶಿಸ್ತು, ದೈಹಿಕ ದ್ರವಗಳ (ಉದಾ. ಶೌಚಾಲಯ ತರಬೇತಿ) ಸಂಯಮದ ಸಕಾರಾತ್ಮಕ ವರ್ತನೆಗಳ ಹೇರಿಕೆ, ಮತ್ತು ಮಕ್ಕಳಿಗೆ ರೋಗದ ಅಪಾಯವನ್ನು ಒಡ್ಡುವ ವಸ್ತುಗಳನ್ನು ತಪ್ಪಿಸುವುದು ಅಥವಾ ತೆಗೆಯುವುದರ ಮೂಲಕ ಕಲಿಸಿರುವ ಸಾಧ್ಯತೆ ಇರುತ್ತದೆ. ವಯಸ್ಕರಾಗುವ ಹೊತ್ತಿಗೆ ನೈರ್ಮಲ್ಯ ನಡವಳಿಕೆಗಳು ದ್ವಿತೀಯ ಸ್ವಭಾವವಾಗುವಷ್ಟು ಒಬ್ಬರ ವರ್ತನೆಯಲ್ಲಿ ಬೇರೂರಿರುತ್ತವೆ ಎಂದು ನಿರೀಕ್ಷಿಸಲಾಗುತ್ತದೆ. ಉಲ್ಲಂಘನೆಗಳು ಜುಗುಪ್ಸೆಯ ಪ್ರತಿಕ್ರಿಯೆಗಳನ್ನು ಹೊರಡಿಸುವ ಸಾಧ್ಯತೆ ಇರುತ್ತದೆ.

ಸೌಜನ್ಯದ ನಡವಳಿಕೆಗಳು – ಸ್ವಂತಕ್ಕಿಂತ ಇತರ ಹಿತಗಳಿಗೆ ಪ್ರಾಮುಖ್ಯ ಕೊಡುವ ಒಬ್ಬರ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ; ಸಾಮಾಜಿಕ ಸಂಭಾಷಣೆಗಳಲ್ಲಿ ನಂಬಿಕೆಯಿಡಲು ಆತ್ಮಸಂಯಮ ಮತ್ತು ಒಳ್ಳೆ ಉದ್ದೇಶವನ್ನು ಪ್ರದರ್ಶಿಸುತ್ತವೆ. ಸೌಜನ್ಯದ ನಡವಳಿಕೆಗಳು ಸಾಮಾಜಿಕ ಸಂವಹನವನ್ನು ನಿಯಂತ್ರಿಸುವ ಮೂಲಕ ಗುಂಪು ಬಾಳ್ವೆಯ ಲಾಭಗಳನ್ನು ಗರಿಷ್ಠೀಕರಿಸಲು ನೆರವಾಗುತ್ತವೆ. ಸೌಜನ್ಯದ ನಡವಳಿಕೆಗಳ ಪ್ರದರ್ಶನದಲ್ಲಿ ರೋಗ ನಿವಾರಣಾ ವರ್ತನೆಯನ್ನು ಕೆಲವೊಮ್ಮೆ ಬಲಿಕೊಡಲಾಗುತ್ತದೆ. ಇವನ್ನು ನೈರ್ಮಲ್ಯ ನಡವಳಿಕೆಗಳ ರೀತಿಯಲ್ಲೇ ಕಲಿಸಬಹುದು ಆದರೆ ಪ್ರತ್ಯಕ್ಷ, ಪರೋಕ್ಷ ಅಥವಾ ಕಲ್ಪಿತ ಸಾಮಾಜಿಕ ಸಂವಹನಗಳ ಮೂಲಕ ಕಲಿಯುವ ಸಾಧ್ಯತೆಯೂ ಇರುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Richerson and Boyd, "The Evolution of Human Ultra Sociality", In press: I. Eibl-Eibisfeldt and F. Salter, eds. Ideology, Warfare, and Indoctrinability, 1997