ಶಿವಾನಿ ಭಟ್ನಾಗರ್ [] (ಮರಣ ೨೩ ಜನವರಿ ೧೯೯೯) ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪತ್ರಕರ್ತೆ.

ಶಿವಾನಿ ಭಟ್ನಾಗರ್
ಜನನಭಾರತ
ಮರಣಜನವರಿ, ೨೩, ೧೯೯೯
ಪೂರ್ವ ದೆಹಲಿ, ಭಾರತ
ವೃತ್ತಿಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಬರಹಗಾರ್ತಿ
ರಾಷ್ಟ್ರೀಯತೆಭಾರತೀಯ
ಬಾಳ ಸಂಗಾತಿರಾಕೇಶ್ ಭಟ್ನಾಗರ್
ಮಕ್ಕಳುತನ್ಮಯ್ ಭಟ್ನಾಗರ್

೧೯೯೯ ರ ಜನವರಿ ೨೩ ರಂದು ಶಿವಾನಿ ಭಟ್ನಾಗರ್ ರವರ ಹತ್ಯೆಯು ಭಾರತೀಯ ರಾಜಕೀಯದ ಉನ್ನತ ಹಂತಗಳನ್ನು ತಲುಪಿದ ಹಗರಣವೇ ಆಯಿತು. ಪ್ರಕರಣದ ತನಿಖೆ ನಡೆಸಿದ ದೆಹಲಿ ಪೊಲೀಸರು ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾದ ರವಿಕಾಂತ್ ಶರ್ಮಾ ರವರ ವಿರುದ್ಧ ಕೊಲೆ ಆರೋಪ ಹೊರಿಸಿದ್ದರು. ಆ ವರ್ಷದ ಆಗಸ್ಟ್ ೩ ರಂದು ಅರೆಸ್ಟ್ ವಾರಂಟ್ ಹೊರಡಿಸಿಲಾಯಿತು. ತಲೆಮರೆಸಿಕೊಂಡು ಓಡಾಡುತ್ತಿದ್ದ ರವಿಕಾಂತ್ ಶರ್ಮಾ, ೨೭ ಸೆಪ್ಟೆಂಬರ್ ೨೦೦೨ ರಂದು ಪೊಲೀಸರಿಗೆ ಶರಣಾದರು. ಅವರ "ಅನ್ಯೋನ್ಯ" ಸಂಬಂಧವನ್ನು ಎಲ್ಲಿ ಭಟ್ನಾಗರ್ ರವರು ಬರ್ಹಿರಂಗಪಡಿಸುತ್ತಾರೆ ಎಂಬ ಭಯದಲ್ಲಿ ಅವರನ್ನು ಕೊಂದು ಹಾಕಿದರು.

ಎಪಿಎಸ್ ಅಧಿಕಾರಿ ರವಿಕಾಂತ್ ಶರ್ಮಾ ಜೊತೆಗೆ ಶ್ರೀ ಭಗವಾನ್ ಶರ್ಮಾ, ಸತ್ಯ ಪ್ರಕಾಶ್ ಮತ್ತು ಪ್ರದೀಪ್ ಶರ್ಮಾ ಅವರು ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.[] ಅವರನ್ನು ದೆಹಲಿ ವಿಚಾರಣಾ ನ್ಯಾಯಾಲಯವು ೧೮ ಮಾರ್ಚ್ ೨೦೦೮ ರಂದು ದೋಷಿಗಳೆಂದು ಘೋಷಿಸಿತು. ಇತರ ಇಬ್ಬರು ಆರೋಪಿಗಳಾದ ದೇವ್ ಪ್ರಕಾಶ್ ಶರ್ಮಾ ಮತ್ತು ವೇದ್ ಪ್ರಕಾಶ್ ಅಲಿಯಾಸ್ ಕಾಲು ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ಅಪರಾಧಿಗಳಿಗೆ ೨೪ ಮಾರ್ಚ್ ೨೦೦೮ ರಂದು ಜೀವಾವಧಿ ಶಿಕ್ಷೆ ವಿಧಿಸಲಾಯಿತು. ೧೨ ಅಕ್ಟೋಬರ್ ೨೦೧೧ ರಂದು ದೆಹಲಿ ಹೈಕೋರ್ಟ್ ರವಿಕಾಂತ್ ಶರ್ಮಾ, ಶ್ರೀ ಭಗವಾನ್ ಶರ್ಮಾ ಮತ್ತು ಸತ್ಯ ಪ್ರಕಾಶ್ ಅವರನ್ನು ಮೇಲ್ಮನವಿಯಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿತು. ಪ್ರದೀಪ್ ಶರ್ಮಾ ಅವರ ಶಿಕ್ಷೆಯನ್ನು ಎತ್ತಿ ಹಿಡಿಯಲಾಯಿತು.

ಭಟ್ನಾಗರ್ ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಬರಹಗಾರರಾಗಿದ್ದರು. ಅವರು ರಾಕೇಶ್ ಭಟ್ನಾಗರ್ ಅವರ ಪತ್ನಿ ಮತ್ತು ತನ್ಮಯ್ ಭಟ್ನಾಗರ್ ಅವರ ತಾಯಿ. ಶಿವಾನಿ ಭಟ್ನಾಗರ್ ಅವರು ರವಿಕಾಂತ್ ಶರ್ಮಾ ಅವರೊಂದಿಗೆ ಸ್ನೇಹಿತರಾಗಿದ್ದರು ಮತ್ತು ಇದು ರಾಕೇಶ್ ಭಟ್ನಾಗರ್ ಮತ್ತು ರವಿಕಾಂತ್ ಶರ್ಮಾ ಅವರ ಪತ್ನಿ ಮಧು ಅವರು ಒಪ್ಪಿಕೊಂಡಿರುವ ಸಂಬಂಧವಾಗಿತ್ತು. ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಅವರು ಶಿವಾನಿ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಾರೆ ಎಂದು ಮಧು ಆರೋಪಿಸಿದ್ದರು ಮತ್ತು ಆಕೆಯ ಪತಿಯ ಆರೋಪವನ್ನು ನಿರಾಕರಿಸುವ ಸಲುವಾಗಿ ಕೊಲೆಯಲ್ಲಿ ಭಾಗಿಯಾಗಿದ್ದರು. ಮಹಾಜನ್ ಅವರನ್ನು ದೆಹಲಿ ಪೊಲೀಸರು ತಪ್ಪಿತಸ್ಥರಲ್ಲವೆಂದು ಕಂಡುಹಿಡಿದರು.ಪ್ರಮೋದ್ ಮಹಾಜನ್ ಶಿವಾನಿಯೊಂದಿಗೆ ವೃತ್ತಿಪರ ಸಂಬಂಧವನ್ನು ಹೊರತುಪಡಿಸಿ ಯಾವುದೇ ರೀತಿಯ ಸಂಬಂಧವನ್ನು ಹೊಂದಿಲ್ಲ ಎಂದು ಖಚಿತಗೊಳಿಸಿದರು.

ರವಿಕಾಂತ್ ಶರ್ಮಾ ಅವರು ಶಿವಾನಿ ಭಟ್ನಾಗರ್ ಅವರನ್ನು ಹತ್ಯೆಗೈದಿದ್ದಾರೆ ಎಂದು ವ್ಯಾಜ್ಯದಾರರು ಆರೋಪಿಸಿದ್ದರು, ಏಕೆಂದರೆ ಶಿವಾನಿಯವರು ರವಿಕಾಂತ್ ಶರ್ಮಾ ಅವರಿಗೆ ಸೇರಿದ್ದ ಕಾನೂನು ದಾಖಲೆಗಳನ್ನು ಹೊಂದಿದ್ದರು ಮತ್ತು ಅವರ ಸ್ವಾಧೀನಗಳವನ್ನು ಅವರಿಗೆ ಹಿಂತಿರುಗಿಸಲು ಶಿವಾನಿ ಅವರು ಸಿದ್ಧರಿರಲಿಲ್ಲ. ಸೇಂಟ್ ಕಿಟ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಬಳಿ ಕೆಲವು ರಾಜಕೀಯವಾಗಿ ಸೂಕ್ಷ್ಮವಾದ ದಾಖಲೆಗಳಿವೆ ಎಂದು ಹೇಳಲಾಗಿದೆ, ಅವರು ಶರ್ಮಾಗೆ ಹಿಂತಿರುಗಿಸಲು ನಿರಾಕರಿಸಿದರು ಮತ್ತು ಅದರ ಮೂಲಕ ಶರ್ಮಾ ಅವರ ಕೃತ್ಯಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಲು ಮುಂದಾದರು. ಆದ್ದರಿಂದ ರವಿಕಾಂತ್ ಶರ್ಮಾ ಅವಳ ಕೊಲೆಯನ್ನು ಕಾರ್ಯಗತಗೊಳಿಸಿದನು. ರವಿಕಾಂತ್ ಶರ್ಮಾ ಈ ಆರೋಪಗಳನ್ನು ನಿರಾಕರಿಸಿದ್ದರಿಂದ ಶಿವಾನಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆಂದು ಆರೋಪಿಸಲಾಯಿತು. ಶಿವಾನಿ ತಮ್ಮ ಸಂಬಂಧವನ್ನು ಬಹಿರಂಗಪಡಿಸಲು ಬಯಸಿದ್ದರು ಆದರೆ ಅವನು ಒಪ್ಪಲಿಲ್ಲ ಆದ್ದರಿಂದ ಶಿವಾನಿ ಅದನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದರು. ಹಾಗೆ ಮಾಡುವ ಮೊದಲು, ಶರ್ಮಾ ತನ್ನ ಸಾಮಾಜಿಕ ಸ್ಥಾನಮಾನಕ್ಕೆ ಹೆದರಿ ಅವರನ್ನು ಕೊಂದು ಹಾಕಿದನು ಎಂದು ವಾದ- ವಿವಾದಗಳು ನಡೆದವು.

ವಿಚಾರಣೆ

ಬದಲಾಯಿಸಿ

ಅಮಾನತುಗೊಂಡಿರುವ ಐಪಿಎಸ್ ಅಧಿಕಾರಿ ರವಿಕಾಂತ್ ಶರ್ಮಾ ಮತ್ತು ಶಿವಾನಿ ಭಟ್ನಾಗರ್ ಅವರನ್ನು ಕೊಲ್ಲಲು ರವಿಕಾಂತ್ ಶರ್ಮಾ ನೇಮಿಸಿದ್ದ ಪ್ರದೀಪ್ ಶರ್ಮಾ ಅವರ ವಿಚಾರಣೆ ನಡೆಸಲಾಯಿತು. ಫಿರ್ಯಾದಿಗಳು ಮರಣದಂಡನೆಗೆ ಅರ್ಹರೇ ಅಥವಾ ಜೀವಾವಧಿ ಶಿಕ್ಷೆಗೆ ಅರ್ಹರೇ ಎಂಬುದರ ಕುರಿತು ವ್ಯಾಜ್ಯದಾರರು ಚರ್ಚಿಸುವುದನ್ನು ವಿಚಾರಣೆ ಒಳಗೊಂಡಿತ್ತು. ಉಳಿದ ಮೂವರು ಅಪರಾಧಿಗಳಾದ ಶ್ರೀ ಭಗವಾನ್, ವೇದ್ ಪ್ರಕಾಶ್ ಶರ್ಮಾ ಮತ್ತು ಸತ್ಯ ಪ್ರಕಾಶ್ ಅವರಿಗೂ ಜೀವಾವಧಿ ಶಿಕ್ಷೆ ನೀಡುವಂತೆ ಮನವಿ ಮಾಡಲಾಗಿದೆ. ರವಿಕಾಂತ್ ಶರ್ಮಾ ಮತ್ತು ಪ್ರದೀಪ್ ಶರ್ಮಾ ನಡುವಿನ ಸಂಪರ್ಕಿತ ಫೋನ್ ಕರೆ ದಾಖಲೆಗಳ ನಡುವೆ ಸಾಕಷ್ಟು ಪುರಾವೆಗಳು ಪತ್ತೆಯಾಗಿವೆ. ಈ ದಾಖಲೆಗಳಿಂದ ಶಿವಾನಿ ಸಾವಿಗೆ ರವಿಕಾಂತ್ ಶರ್ಮಾ ಮತ್ತು ಪ್ರದೀಪ್ ಶರ್ಮಾ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿತು.

೨೦೯ ಕ್ಕೂ ಹೆಚ್ಚು ಸಾಕ್ಷಿಗಳು, ೪ ನ್ಯಾಯಾಧೀಶರು ಮತ್ತು ೨೦,೦೦೦ ಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ಹೊಂದಿ ನಡೆಯುತ್ತಿರುವ ೯ ವರ್ಷಗಳ ವಿಚಾರಣೆಯ ಪರಿಣಾಮವಾಗಿ ೧೨ ಅಕ್ಟೋಬರ್ ೨೦೧೧ ರಂದು ರವಿಕಾಂತ್ ಶರ್ಮಾ ಅವರನ್ನು ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿರಿಸಿದ ನಂತರ ಹೈಕೋರ್ಟ್‌ ಖುಲಾಸೆಗೊಳಿಸಿತು (೨೦೦೨ ರಿಂದ, ಸ್ವತಃ ಪೊಲೀಸರಿಗೆ ಶರಣಾದರು). ಇತರ ಅಪರಾಧಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಪರಾಧಿಗಳಲ್ಲವೆಂದು ಪರಿಗಣಿಸಲಾಯಿತು. ಆದಾಗ್ಯೂ, ಪ್ರದೀಪ್ ಶರ್ಮಾ ೨೦೦೯-೨೦೨೩ ರವರೆಗೆ ಸುಮಾರು ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದರು. ಶಿವಾನಿ ಅವರ ಅಪಾರ್ಟ್‌ಮೆಂಟ್ ಬ್ಲಾಕ್‌ನ ರಿಜಿಸ್ಟರ್‌ನಲ್ಲಿ ಸಿಕ್ಕಿರುವ ಕೈಬರಹದ ಪುರಾವೆಯಿಂದಾಗಿ ಪ್ರದೀಪ್ ಅವರನ್ನು ಬಂಧಿಸಲಾಗಿದೆ, ಇದು ಅಪಾರ್ಟ್‌ಮೆಂಟ್ ಸಂಕೀರ್ಣದೊಳಗೆ ಪ್ರವೇಶವನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಇದರೊಂದಿಗೆ, ಅಪರಾಧ ನಡೆದ ಸ್ಥಳದಲ್ಲಿ ಆತನ ಬೆರಳಚ್ಚು ಪತ್ತೆಯಾಗಿದೆ.

ಸಾಕ್ಷಿಯು ನಿಷ್ಪರಿಣಾಮಕಾರಿಯೆಂದು ಪರಿಗಣಿಸಲ್ಪಟ್ಟ ಅಥವಾ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನಿಸಲ್ಪಟ್ಟ ಅನೇಕ ನಿದರ್ಶನಗಳಿದ್ದವು. ರವಿಕಾಂತ್ ಶರ್ಮಾ ಮತ್ತು ಪ್ರದೀಪ್ ಶರ್ಮಾ ನಡುವಿನ ದೂರವಾಣಿಕರೆಗಳಿಗೆ ಪಿ‌ಡಬ್ಲೂ೧೩೫/೨೮ ಎಂದು ಅಡ್ಡಹೆಸರು ನೀಡಲಾಯಿತು. ಅದರ ಸತ್ಯತೆಯ ಬಗ್ಗೆ ನ್ಯಾಯಾಲಯವು ಸಾಕಷ್ಟು ಅನುಮಾನಗಳನ್ನು ಹೊಂದಿದ್ದರಿಂದ, ಶ್ರೀ ಭಗವಾನ್ ಅವರನ್ನು ಖುಲಾಸೆಗೊಳಿಸಲಾಯಿತು. ದೂರವಾಣಿ ಕರೆಗಳನ್ನು ಪೊಲೀಸರು ತಿರುಚಿರುವ ಸಾಧ್ಯತೆ ಇದೆ ಆದ್ದರಿಂದ ಅವುಗಳನ್ನು ಅವಲಂಬಿಸಲಾಗುವುದಿಲ್ಲ ಎಂದು ರವಿಕಾಂತ್ ಶರ್ಮಾ ಅವರು ಮನವಿ ಮಾಡಿಕೊಂಡ್ಡಿದ್ದಾಗ ಇದನ್ನು ನ್ಯಾಯಾಲಯವು ಮತ್ತಷ್ಟು ಪರಿಶೀಲಿಸಿತು. ಈ ದಾಖಲೆಗಳು ದೂರವಾಣಿ ಕಂಪನಿಯಿಂದ ನೇರವಾಗಿ ಲಭ್ಯವಾಗಿರುವ ದತ್ತಾಂಶಗಳಿಲ್ಲದ ಕಾರಣ ರವಿಕಾಂತ್ ಶರ್ಮಾ ವಿರುದ್ಧ ಯಾವುದೇ ನೇರ ಆರೋಪ ಹೊರಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಲಯವು ನಿರ್ಧರಿಸಿತು.

ಉಲ್ಲೇಖಗಳು

ಬದಲಾಯಿಸಿ
  1. "Judgment in Shivani Bhatnagar murder case today". The Hindu (in ಇಂಗ್ಲಿಷ್). 12 October 2011. Retrieved 6 November 2018.
  2. "Judgment in Shivani Bhatnagar murder case today". The Hindu (in ಇಂಗ್ಲಿಷ್). 12 October 2011. Retrieved 6 November 2018."Judgment in Shivani Bhatnagar murder case today". The Hindu. 12 October 2011. Retrieved 6 November 2018.


ಬಾಹ್ಯ ಕೊಂಡಿಗಳು

ಬದಲಾಯಿಸಿ