ಶಿವಾಜಿ ಪಾರ್ಕ್, ಮುಂಬಯಿ

'ಮುಂಬಯಿನ ಸಾರ್ವಜನಿಕ ಉದ್ಯಾನ'ಗಳನ್ನು ಗಣನೆಗೆ ತೆಗೆದುಕೊಂಡರೆ, 'ಶಿವಾಜಿಪಾರ್ಕ್', ಅತಿಹೆಚ್ಚು ಜಾಗವನ್ನು ಹೊಂದಿದ, ಸಾರ್ವಜನಿಕ ಮನರಂಜನೆಯ ಸ್ಥಳ. ಸಾಯಂಕಾಲ, ಮಕ್ಕಳು ಇಲ್ಲಿ ಆಟವಾಡಲು ಬರುತ್ತಾರೆ. ವೃತ್ತಾಕಾರದ ರೀತಿಯಲ್ಲಿ ಕಟ್ಟಿರುವ ಈ ಉದ್ಯಾನದ ಸುತ್ತಲೂ ಪುಟ್ಟ ಕಟ್ಟೆಯನ್ನು ಕಟ್ಟಿದ್ದಾರೆ. ಅಲ್ಲಿ ಹಿರಿಯರು, ಸ್ತ್ರೀಯರು, ಮಕ್ಕಳು, ಹದಿಹರೆಯದ ಬಾಲಕ ಬಾಲಕಿಯರು, ಕುಳಿತು ದಣಿವಾರಿಸಿಕೊಂಡು ಮನೆಗೆ ಹೊಗುತ್ತಾರೆ. ಶಿವಾಜಿಪಾರ್ಕ್ ತನ್ನದೇ ಆದ ಇತಿಹಾಸವನ್ನು ಹೊಂದಿದೆ. 'ದಾದರ್ ಸಮುದ್ರತಟ'ದಹತ್ತಿರವಿರುವ ಈ ಪ್ರದೇಶ, ಐತಿಹಾಸಿಕ, ಹಾಗೂ ದಶಕಗಳಿಂದ ಅಲ್ಲೇ ಮನೆಮಾಡಿ ನೆಲಸಿರುವ ಹಳೆ ಮರಾಠಿಗರ, ಸಂಸ್ಕೃತಿಯ ತಾಣವಾಗಿದೆ. ರಾಜಕೀಯ ಮತ್ತು ಸತತವಾಗಿ ರಾಷ್ಟ್ರದಲ್ಲಾಗುತ್ತಿರುವ, ಸಾಮಾಜಿಕ ಬದಲಾವಣೆಗಳಿಗೆ, ಇದು ಸಾಕ್ಷಿಯಾಗಿದೆ. ಆಝಾದ್ ಮೈದಾನ್ ಮತ್ತು, ಆಗಸ್ಟ್ ಕ್ರಾಂತಿ ಮೈದಾನ್, [ಗೊವಾಲಿಯ ಟ್ಯಾಂಕ್ ರೋಡ್], ಸ್ವಾತಂತ್ರ್ಯ ಪೂರ್ವ, ೧೭ ನೆಯ ಶತಮಾನದ ಯೋಧ 'ಛತ್ರಪತಿ ಶಿವಾಜಿ ಮಹಾರಾಜ'ರ, ಹೆಸರಿನಲ್ಲಿದೆ. ಮರಾಠ ರಾಜ್ಯಪತ್ಯ ಸ್ಥಾಪಕರಾದ ಅವರು, ಒಂದು ಸುಸ್ಥಿರ ಹಿಂದೂ ರಾಜ್ಯವನ್ನು ನಿರ್ಮಾಣ ಮಾಡಿದ್ದರು. ಮುಘಲ್ ಆಡಳಿತಗಾರರ ವಿರುದ್ಧ, ಅನೇಕ ಯುದ್ಧಗಳಲ್ಲಿ ಹೋರಾಡಿ ಅವರನ್ನು ದಕ್ಷಿಣ ಭಾರತಕ್ಕೆ ಬರದಂತೆ, ಹಿಮ್ಮೆಟ್ಟಿಸಿದರು. ಬ್ರಿಟಿಷ್ ಸರ್ಕಾರ ಶಿವಾಜಿಯವರ ಧೈರ್ಯ, ಸಾಮರ್ಥಗಳನ್ನು ಒಪ್ಪಿಕೊಂಡು ಗೌರವಿಸುತ್ತಿದ್ದರು. ೧೯೨೫ ರಲ್ಲಿಯೇ, ಶಿವಾಜಿ ಮಹಾರಾಜರ ಹೆಸರಿನಲ್ಲಿ ಶಿವಾಜಿಪಾರ್ಕ್, ಬ್ರಿಟಿಷರರೇ ನಿರ್ಮಾಣಮಾಡಿದರು. ಮುಘಲರ ತರುವಾಯ ಇಂಗ್ಲೀಷ್ ಆಕ್ರಮಣದ ಸುಳಿವನ್ನು, ಶಿವಾಜಿಯವರು ಮನಗಂಡಿದ್ದರು. ಆದರೆ ಅವರಿಗಾಗಲೇ ವಯಸ್ಸು ಮೀರಿತ್ತು. ಸದಾ ಯುದ್ಧಗಳಲ್ಲಿ ಹೋರಾಡಿ ಅವರ ದೇಹ ಝರ್ಝರಿತವಾಗಿತ್ತು. ಅವರ ನಂತರಬಂದ ಪೇಷ್ವೆಗಳಾಗಲೀ ಶಿವಾಜಿಯವರ ಸಂತತಿಯವರಾಗಲೀ ವಿದೇಶಿ ಪ್ರಭಾವವನ್ನು ಹೆಚ್ಚುಕಾಲ ತಡೆಯಲು ಸಮರ್ಥರಾಗಲಿಲ್ಲ.

'ಮುಂಬಯಿಯ ದಾದರ್ ಬಳಿ ಇರುವ ಶಿವಾಜಿ ಪಾರ್ಕ್ ಉದ್ಯಾನ'

ಶಿವಾಜಿ ಪಾರ್ಕ್ ಮಹತ್ವದ ಭಾಷಣಗಳಿಗೆ ಹೆಸರುವಾಸಿ

ಬದಲಾಯಿಸಿ

ಶಿವಾಜಿ ಪಾರ್ಕ್ ಹಲವಾರು ಸಂಘಟನೆಗಳಿಗೆ ಜನಮತವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಇದೇ ಜಾಗದಲ್ಲಿ ಸ್ವಾತಂತ್ರ್ಯ ಚಳುವಳಿಗಾರರು ಭಾಷಣಮಾಡುತ್ತಿದ್ದರು. 'ಶ್ರೀಮತಿ, ಇಂದಿರಾಗಾಂಧಿ', 'ಮೊರಾರ್ಜಿದೇಸಾಯ್', 'ಯಶವಂತರಾವ್ ಚವ್ಹಾಣ್', 'ವಸಂತರಾವ್ ನಾಯಕ್', 'ಬಾಳ್ ಠಾಕ್ರೆ', 'ವಜಪಾಯಿ', 'ಜಗನ್ನಾಥರಾವ್ ಜೋಷಿ', 'ಎಸ್. ಎ. ಡಾಂಗೆ', 'ಜಾರ್ಜ್ ಫರ್ ನ್ಯಾಂಡಿಸ್', ಮುಂತಾದ ರಾಷ್ಟ್ರನಾಯಕರು ಜನರನ್ನುದ್ದೇಶಿಸಿ ಮಾತಾಡಿದ್ದರು. ಸ್ವಾತಂತ್ರ್ಯ ಬಂದನಂತರ ಭಾಷೆಯ ಆಧಾರದಮೇಲೆ ರಾಷ್ಟ್ರವನ್ನು ವಿಭಜಿಸಿದಾಗ, ಮಹಾರಾಷ್ಟ್ರದಲ್ಲಿ ಚಳುವಳಿ ನಡೆದಿತ್ತು.

'ಸಂಯುಕ್ತ ಮಹಾರಾಷ್ಟ್ರ ಚಳುವಳಿ' (struggle for a consolidated Maharashtra)ನಡೆದ ಸ್ಥಳ

ಬದಲಾಯಿಸಿ

ಈಗಿನ ಮಹಾರಾಷ್ಟ್ರ ರಾಜ್ಯ, ೧೯೬೦ ರಲ್ಲಿ ನಿರ್ಮಾಣವಾಯಿತು. ಆಗಿನ ಕಾಲದ ಸುಪ್ರಸಿದ್ಧ, ಕವಿ, ನಾಟಕಕಾರ, ಪತ್ರಿಕೋದ್ಯಮಿ, ಸಾಮಾಜಿಕ ಕಾರ್ಯಕರ್ತ, "ಆಚಾರ್ಯ ಪ್ರಹ್ಲಾದ ಕೇಶವ್ ಅತ್ರೆ", ಯವರು ಒಂದು ಆಂದೋಳನವನ್ನು ನಡೆಸಿದರು. ಅವರು ಶಿವಾಜಿಪಾರ್ಕ್ ನ ಅಂಗಳದಿಂದ ಲಕ್ಷಾಂತರ ಜನರನ್ನು ಸಂಬೋಧಿಸಿ ಮಾತಾಡಿದ್ದರು. 'ಲಾರ್ಡ್ ಆಫ್ ಶಿವಾಜಿ ಪಾರ್ಕ್' ಎಂದು ಕರೆಯಲ್ಪಟ್ಟಿದ್ದರು. ೧೯೬೫ ರ ಪಾಕಿಸ್ತಾನ್ ಮೇಲಿನ ನಮ್ಮ ವಿಜಯವನ್ನು ಇಲ್ಲಿ ನಾವು ಸಂತಸದಿಂದ ನೆರವೇರಿಸಿದ್ದೆವು. 'ಲಾಲ್ ಬಹಾದ್ದೂರ್ ಶಾಸ್ತ್ರಿ', ಮತ್ತು 'ಯಶವಂತ್ ರಾವ್ ಚೌಹಾನ್', ವಿಜಯಸಭೆಯನ್ನು ಉದ್ದೇಶಿಸಿ ಮಾತಾಡಿದ್ದರು. ರ್ಯಾಲಿಗಳು ಎಲೆಕ್ಷನ್ ಮೊದಲು ನಂತರದ ಸಭೆಗಳು.

ರವಿವಾರದಂದು, ಕ್ರಿಕೆಟ್ ಡೇರೆಗಳನ್ನು ನೋಡಬಹುದು

ಬದಲಾಯಿಸಿ

ಶಿವಾಜಿಪಾರ್ಕ್, ವೃತ್ತಾಕಾರವಾಗಿದ್ದು, ೧.೩ ಕಿಲೊಮೀಟರ್ ವೃತ್ತ ಪರಿಧಿಯನ್ನು ಹೊಂದಿದೆ. ಎಲ್ಲರೂ ಸುಲಭವಾಗಿ ಕುಳಿತುಕೊಳ್ಳಬಹುದಾದಂತಹ ಪುಟ್ಟ ಕಟ್ಟೆ ಇದೆ. ಇದರ ವಿಸ್ತೀರ್ಣ ಸುಮಾರು, ೫೦೦ ಎಕರೆ (೨.೦ ಚ. ಕಿ. ಮೀ)ವಿಸ್ತೀರ್ಣವಿದೆ. ಶಿವಾಜಿಪಾರ್ಕ್, ಮೈದಾನದ ತುಂಬ ಚಿಕ್ಕ ಚಿಕ್ಕ ಡೇರೆಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಕ್ರಿಕೆಟ್ ತಂಡಗಳು ಮಾಡುವ ಕ್ರಿಕೆಟ್ ಅಭ್ಯಾಸ ನೋಡಲು ಕಣ್ಣುಸಾಲದು. ಅಲ್ಲಿ ಆಡುವ ಪ್ರತಿಯೊಬ್ಬನಿಗೂ ಒಂದು ದಿನ, 'ತೆಂದುಲ್ಕರ್', 'ಗವಾಸ್ಕರ್', 'ವಿನೋದ್ ಕಾಂಬ್ಳಿ'ಯಾಗುವ ಕನಸು, ಹೊತ್ತು ಬಂದಿರುತ್ತಾರೆ. ದಿನವೆಲ್ಲಾ ಕ್ರಿಕೆಟ್ ಆಟವನ್ನು ಆಡುವ ದೃಶ್ಯ ಕಾಣಿಸುತ್ತದೆ.

ಆಟದ ಸಂಸ್ಥೆಗಳು, ಹಾಗೂ 'ಉದ್ಯಾನ್ ಗಣೇಶ್ ಮಂದಿರ್'

ಬದಲಾಯಿಸಿ
  1. 'ಸಮರ್ಥ್ ವ್ಯಾಯಾಮ್ ಮಂದಿರ್ '(ಜಿಮ್ನೇಶಿಯಮ್),[]
  2. 'ಶಿವಾಜಿ ಪಾರ್ಕ್ ನಾಗರಿಕ್ ಸಂಘ್' (ಸ್ಥಾಪನೆ ೧೯೪೭),
  3. 'ಶಿವಾಜಿ ಪಾರ್ಕ್ ಜಮ್ ಖಾನ '(ಕ್ಲಬ್),[]
  4. 'ಚಿಲ್ ಡ್ರನ್'ಸ್ ಪಾರ್ಕ್', ನಾನಾ ನಾನಿ ಪಾರ್ಕ್ (ಅಜ್ಜ ಅಜ್ಜಿ ಪಾರ್ಕ್),
  5. 'ಸ್ಕೌಟ್ಸ್ ಪೆವಿಲಿಯನ್', (ಮದುವೆಗಳಿಗೆ ಈ ಹಾಲ್ ಪ್ರಸಿದ್ಧಿ),
  6. 'ಉದ್ಯಾನ್ ಗಣೇಷ್ ಮಂದಿರ್', (ಗಣೇಶ್ ದೇವಸ್ಥಾನ),[]
  7. 'ದ ಬೆಂಗಾಲ್ ಕ್ಲಬ್ ಮತ್ತು ಲೈಬ್ರರಿ',[] ನಡೆಯಲು ಕಾಲುದಾರಿ ಇದೆ. ದೊಡ್ಡದೊಡ್ಡ ಮರಗಳು ಇದ್ದು, ನೆರಳು ಧಾರಾಳವಾಗಿ ಸಿಗುತ್ತದೆ.

ಹಲವಾರು ಸಂಘ ಸಂಸ್ಥೆಗಳ ಆಗರ

ಬದಲಾಯಿಸಿ

ಶಿವಾಜಿ ಪಾರ್ಕ್ ನ ಒಳಭಾಗದಲ್ಲಿ ಅನೇಕ ಸಂಸ್ಥೆಗಳಿವೆ. ವೃತ್ತಾಕಾರದ ಕಟ್ಟೆಯಿಂದ ಹೊರಗೆ ಹೋಗಲು ಅನೇಕ ಕಡೆ ದಾರಿಗಳಿವೆ. ಪೂರ್ವದಿಕ್ಕಿನಲ್ಲಿ ಪಾದಯಾತ್ರಿಗಳಿಗಾಗಿ ಪುಟ್ಟ ದಾರಿ ಇದೆ. ಶಿವಾಜಿ ಪಾರ್ಕ್ ಪ್ರಮುಖದ್ವಾರದಲ್ಲಿ,' ಮೀನಾತಾಯಿ' ಯವರ ಪುಥಳಿ ಇದೆ. ಮೊದಲು ಈ ಜಾಗದಲ್ಲಿ 'ರಾಮ್ ಗಣೇಶ್ ಗಡ್ಕರಿ,' ಯವರ ಪುತ್ಥಳಿ ಇತ್ತು. ಇದು, ಮುಂಬಯಿನ ಹೆಚ್ಚು ಮರಾಠಿ ಜನ ವಾಸಿದುವ ಸ್ಥಳ. ೧೯೦೦ ರಷ್ಟು ಹಳೆಯ ಕಟ್ಟಡಗಳಿವೆ. ಇಲ್ಲಿ ವಾಸಿಸುವರು, ಕಲೆ, ಸಾಹಿತ್ಯ, ನಾಟಕ, ಕ್ರಿಕೆಟ್ ಆಟಗಾರರು, ವಾಣಿಜ್ಯವಲಯದಲ್ಲಿ ಮಂಚೂಣಿಯಲ್ಲಿರುವವರು ಹೆಚ್ಚಾಗಿ ಇದ್ದಾರೆ. ಕ್ರಿಕೆಟ್ ಗೆ ಆದ್ಯತೆಯಿಂದಿನ ದಿನಗಳಲ್ಲಿ, ಹಲವಾರು ಹೆಸರುವಾಸಿಯಾದ ಕ್ರಿಕೆಟ್ ಆಟಗಾರರು, ಶಿವಾಜಿ ಪಾರ್ಕ್, ಕ್ರಿಕೆಟ್ ಅಕ್ಯಾಡಮಿಗೆ ಸ್ಪೂರ್ತಿ ನೀಡಲು ಆಗಾಗ ಬರುತ್ತಾರೆ. ಅವರೆಲ್ಲಾ ಹತ್ತಿರದಲ್ಲೇ ವಾಸ್ತ್ಯವ್ಯಹೂಡಿದ್ದಾರೆ.

ಶಿವಾಜಿಪಾರ್ಕ್ ನ ಹೊರವಲಯದಲ್ಲಿ ಹತ್ತಿರದಲ್ಲೇ ಇರುವ ಸಂಸ್ಥೆಗಳು

ಬದಲಾಯಿಸಿ

ಕ್ರಿಕೆಟ್ ಮಹಾಆಟಗಾರರು ಕೆಳಗೆಕಂಡ 'ಕ್ರಿಕೆಟ್ ಅಕ್ಯಾಡಮಿ'ಗಳಲ್ಲಿ ತಯಾರಾದವರು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "'Samarth Vyayam mandir, shivaji park". Archived from the original on 2016-02-05. Retrieved 2015-10-24.
  2. 'shivaji-park-gymkhana'
  3. 'Udyan Ganesh mandir'
  4. dna, Mumbai: Bengal Club gets set for 80th Durga puja, 16 October 2015