ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ
ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿಯವರು ಮಾಜಿ ಶಾಸಕರು, ಸಂಸದರು ಹಾಗೂ ರಾಜಕೀಯ ಧುರೀಣರು.
ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ | |
---|---|
ಜನನ | 11ನೇ ಏಪ್ರಿಲ್, 1928 ನೀರಲಗಿ, ಸಿಂದಗಿ ತಾಲ್ಲೂಕು, ವಿಜಯಪುರ ಜಿಲ್ಲೆ, ಕರ್ನಾಟಕ |
ವೃತ್ತಿ | ರಾಜಕೀಯ |
ರಾಷ್ಟ್ರೀಯತೆ | ಭಾರತೀಯ |
ಜನನ
ಬದಲಾಯಿಸಿಗುರಡ್ಡಿಯವರು 11ನೇ ಏಪ್ರಿಲ್, 1928ರಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ನೀರಲಗಿ ಗ್ರಾಮದಲ್ಲಿ ಜನಿಸಿದರು.
ನಿರ್ವಹಿಸಿದ ಖಾತೆಗಳು
ಬದಲಾಯಿಸಿ- 1980ರಲ್ಲಿ ನಡೆದ ಲೋಕಸಭೆ 8ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾದರು. [೧]
- 1986-87ರ ಅವಧಿಯಲ್ಲಿ ಬೇಡಿಕೆ ಸಮಿತಿಯ ಸದಸ್ಯರಾಗಿದ್ದರು.
- 1967-1971ವರೆಗೆ ಎರಡು ಬಾರಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದರು.
- ಮುದ್ದೇಬಿಹಾಳ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದರು.
- ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು.[೨]
ನಿಧನ
ಬದಲಾಯಿಸಿ23 ಜೂಲೈ, 2006ರಂದು 78ನೇ ವಯಸ್ಸಿನಲ್ಲಿ ನಿಧನರಾದರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸಾಲವಾಡಗಿ ಗ್ರಾಮದಲ್ಲಿ ಧುರೀಣರ ಸಮಾಧಿಯಿದೆ.[೩]